HOME » NEWS » National-international » BJP MLA MUKUL ROY SET TO RETURN TMC SESR

ಪ.ಬಂಗಾಳದಲ್ಲಿ ಶುರವಾಯ್ತು ಘರ್​ ವಾಪ್ಸಿ; ಟಿಎಂಸಿಗೆ ಮರಳಲು ನಿರ್ಧರಿಸಿದ ಮುಕುಲ್​ ರಾಯ್​​

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿನ ಬಳಿಕ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯ ರಾಜಕೀಯ ನೀತಿಗಳು ಬಂಗಾಳಕ್ಕೆ ಹೊರತಾಗಿದೆ, ಅಲ್ಲಿ ನಾವು ಹೊರಗಿನವರಾಗಿದ್ದೇವೆ

news18-kannada
Updated:June 11, 2021, 3:58 PM IST
ಪ.ಬಂಗಾಳದಲ್ಲಿ ಶುರವಾಯ್ತು ಘರ್​ ವಾಪ್ಸಿ; ಟಿಎಂಸಿಗೆ ಮರಳಲು ನಿರ್ಧರಿಸಿದ ಮುಕುಲ್​ ರಾಯ್​​
ಮುಕುಲ್​ ರಾಯ್​​
  • Share this:
ಕೊಲ್ಕತ್ತಾ (ಜೂ.11): ಬಿಜೆಪಿ ಪ್ರಬಲ ಪೈಪೋಟಿಯ ನಡುವೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಎರಡನೇ ಬಾರಿ ಸರ್ಕಾರ ರಚಿಸುವಲ್ಲಿ ಸಫಲರಾಗಿದ್ದಾರೆ. ಮಮತಾರ ಈ ವರ್ಚಸ್ಸಿನ ಬೆನ್ನಲ್ಲೇ ಈಗ ತೃಣಮೂಲ ಕಾಂಗ್ರೆಸ್​ನಲ್ಲಿ ಘರ್​ ವಾಪ್ಸಿ ಬೆಳವಣಿಗೆ ಆರಂಭವಾಗಿದೆ. ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ನಾಯಕರ ಮತ್ತೆ ಹಳೆ ಪಕ್ಷದತ್ತ ತಿರುಗಿ ನೋಡುತ್ತಿದ್ದಾರೆ. ಟಿಎಂಸಿ ತೊರೆದು 2017ರಲ್ಲಿ ಬಿಜೆಪಿ ಸೇರಿದ್ದ ಹಿರಿಯ ನಾಯಕ ಮುಕುಲ್​ ರಾಯ್​ ಮತ್ತೆ ಮಾತೃಪಕ್ಷಕ್ಕೆ ಬರಲು ಸಿದ್ಧವಾಗಿದ್ದು, ಇಂದು ಮಧ್ಯಾಹ್ನ ಅವರು ಪಕ್ಷಕ್ಕೆ ಸೇರುವ ಕುರಿತು ಮಮತಾರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಮರಳಿ ಪಕ್ಷಕ್ಕೆ ಬರುವ ಬಗ್ಗೆ ಹಿರಿಯ ನಾಯಕ ಮುಕುಲ್​ ರಾಯ್​ ಮತ್ತು ಅವರ ಮಗ ಸುಬ್ರಂಗ್ಶು ರಾಯ್​ ಇಂದು ಟಿಎಂಸಿ ನಾಯಕರ ಭೇಟಿ ನಡೆಸಲಿದ್ದಾರೆ. 2017ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ ಮೊದಲ ಹಿರಿಯ ನಾಯಕ ಇವರಾಗಿದ್ದರು.

ಬಿಜೆಪಿಯಿಂದ ಮತ್ತೆ ಟಿಎಂಸಿಗೆ ಬರಲು ಕಾರಣ ಏನು ಎಂಬ ಬಗ್ಗೆ ತಮ್ಮ ಆಪ್ತರ ಬಳಿ ಮಾತನಾಡಿರುವ ಮುಕುಲ್​ ರಾಯ್​, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿನ ಬಳಿಕ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯ ರಾಜಕೀಯ ನೀತಿಗಳು ಬಂಗಾಳಕ್ಕೆ ಹೊರತಾಗಿದೆ, ಅಲ್ಲಿ ನಾವು ಹೊರಗಿನವರಾಗಿದ್ದೇವೆ, ಅಲ್ಲಿಯೇ ಇದ್ದರೆ ನಮ್ಮ ಭವಿಷ್ಯ ಹಾಳಾಗಲಿದೆ ಎಂದಿದ್ದಾರೆ.

ಇದೇ ವೇಳೆ ಮಮತಾ ಬ್ಯಾನರ್ಜಿಯಂತೆ ಜನರ ನಾಡಿಮಿಡಿತಕ್ಕೆ ಯಾರು ಹೊಂದುವುದಿಲ್ಲ. ಬಿಜೆಪಿ ನಾಯಕರೇ ಇರಲಿ ಅಥವಾ ಟಿಎಂಸಿ ಯಿಂದ ಹೋದ ನಾಯಕರೇ ಇರಲಿ, ಜನರನ್ನು ಮಮತಾ ಬಲ್ಲಷ್ಟು ಚೆನ್ನಾಗಿ ಯಾರು ತಿಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಆಪ್ತೆ ಸುವೆಂದು ಅಧಿಕಾರಿ ಸೇರಿದಂತೆ ಅನೇಕ ನಾಯಕರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಆ ನಾಯಕರನ್ನು ಮರಳಿ ಪಕ್ಷಕ್ಕೆ ತರುವ ಕುರಿತು ಈಗಾಗಲೇ ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಸದ ಸೌಗತಾ ರಾಯ್​ ಪಕ್ಷ ತೊರೆದು ಹೋದವರನ್ನು ಕರೆದುಕೊಂಡು ಬರುವ ಮುನ್ನ ಆ ಗುಂಪಿನ ಸಾಫ್ಟ್​ ಲೈನರ್​, ಹಾರ್ಡ್​ ಲೈನರ್​ ಗುರುತಿಸಬೇಕು ಎಂದು ಸಲಹೆ ನೀಡಿದ್ದರು. ಮುಕುಲ್​ ರಾಯ್​ ಟಿಎಂಸಿ ತೊರೆದರು, ಮಮತಾರನ್ನು ಎಂದಿಗೂ ನಿಂದಿಸಿಲ್ಲ. ಆದರೆ, ಸುವೆಂದು ಅಧಿಕಾರಿ ಮಮತಾರನ್ನು ಪ್ರಚಾರ ಸಭೆಗಳಲ್ಲಿ ಅವಮಾನಿಸಿದ್ದಾರೆ ಎಂದು ಈ ಹಿನ್ನಲೆ ನಾಯಕರ ವಿಂಗಡನೆ ನಡೆಸಿ ಮರಳಿ ಪಕ್ಷಕ್ಕೆ ಕರೆತರಬೇಕು ಎಂದಿದ್ದರು.

ಇದನ್ನು ಓದಿ: ಪ್ರಧಾನಿ ಮೋದಿ ದೇಶದ ಉನ್ನತ ನಾಯಕ; ಶಿವಸೇನಾ ನಾಯಕ ಸಂಜಯ್​ ರಾವತ್​

ಮುಕುಲ್​ ರಾಯ್​ ಮರಳಿ ಟಿಎಂಸಿಗೆ ಸೇರುತ್ತಿರುವ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್​ ಘೋಷ್​​, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಮುಕುಲ್​ ರಾಯ್​ ಬೆನ್ನಲ್ಲೇ ಹಲವು ನಾಯಕರು ಮರಳಿ ಗೂಡಿಗೆ ಬರುವ ಸಾಧ್ಯತೆ ಇದೆ. ಈ ಕುರಿತು ಮಾತನಾಡಿರುವ ರಾಯ್​, ಈಗಾಗಲೇ ಹಲವು ನಾಯಕರ ಸಂಪರ್ಕದಲ್ಲಿ ಅಭಿಷೇಕ್​ ಬ್ಯಾನರ್ಜಿ ಇದ್ದಾರೆ. ಟಿಎಂಸಿ ನಾಯಕರು ಉದ್ದೇಶಪೂರ್ವಕವಾಗಿ ಪಕ್ಷಕ್ಕೆ ದ್ರೋಹ ಮಾಡಿ ತೊರೆದವರಲ್ಲ. ಸಮಯ ಮತ್ತು ಸಂದರ್ಭ ಹಾಗೇ ಇತ್ತು ಎಂದು ಇದೇ ವೇಳೆ ಅವರು ಸಮಾಜಾಯಿಷಿ ನೀಡಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 11, 2021, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories