• Home
  • »
  • News
  • »
  • national-international
  • »
  • BJP MLA: ಲಕ್ಷ್ಮೀ ದೇವಿಯನ್ನು ಪೂಜಿಸದ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳಿಲ್ಲವೇ? ಬಿಜೆಪಿ ಶಾಸಕ

BJP MLA: ಲಕ್ಷ್ಮೀ ದೇವಿಯನ್ನು ಪೂಜಿಸದ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳಿಲ್ಲವೇ? ಬಿಜೆಪಿ ಶಾಸಕ

ಬಿಜೆಪಿ ಶಾಸಕ

ಬಿಜೆಪಿ ಶಾಸಕ

ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ. ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು ಐಎಎಸ್ ಅಥವಾ ಐಪಿಎಸ್ ಆಗುವುದಿಲ್ಲವೇ? ಎಂದು ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಪ್ರಶ್ನಿಸಿದ್ದಾರೆ

  • News18 Kannada
  • Last Updated :
  • Bangalore [Bangalore], India
  • Share this:

ಪಾಟ್ನಾ: “ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ (Worship Lakshmi) ಮಾತ್ರ ನಾವು ಸಂಪತ್ತನ್ನು ಪಡೆಯುತ್ತಿದ್ದರೆ, ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳು ಇರುತ್ತಿರಲಿಲ್ಲ. ಮುಸ್ಲಿಮರು ಲಕ್ಷ್ಮಿ ದೇವಿಯನ್ನು ಪೂಜಿಸುವುದಿಲ್ಲ, ಅವರು ಶ್ರೀಮಂತರಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು (Saraswati Puja) ಪೂಜಿಸುವುದಿಲ್ಲ. ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು ಐಎಎಸ್ ಅಥವಾ ಐಪಿಎಸ್ ಆಗುವುದಿಲ್ಲವೇ? ಎಂದು ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಪ್ರಶ್ನಿಸಿದ್ದಾರೆ. "ಆತ್ಮ ಮತ್ತು ಪರಮಾತ್ಮ" ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದು ಬಿಜೆಪಿ ಶಾಸಕ ವಾದಿಸಿದ್ದಾರೆ.


ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಹಿಂದೂ ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.


ಹನುಮಂತನನ್ನು ಪೂಜಿಸದವರಿಗೆ ಶಕ್ತಿ ಇಲ್ಲವೇ?
ಹನುಮಂತ ಅತ್ಯಂತ ಶಕ್ತಿಯುಳ್ಳ ದೇವರು. ನಮ್ಮಲ್ಲೂ ಶಕ್ತಿಯನ್ನು ತುಂಬುತ್ತಾರೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಜರಂಗಬಲಿ ಪೂಜೆ ಮಾಡುವುದಿಲ್ಲ. ಅವರು ಶಕ್ತಿವಂತರಲ್ಲವೇ? ನೀವು ದೇವರನ್ನು ನಂಬುವುದನ್ನು ನಿಲ್ಲಿಸಿದ ದಿನ, ಇವೆಲ್ಲವೂ ಕೊನೆಗೊಳ್ಳುತ್ತದೆ" ಎಂದು ಬಿಜೆಪಿ ಶಾಸಕ ಪಾಸ್ವಾನ್ ವಾದಿಸಿದ್ದಾರೆ.


ಇದನ್ನೂ ಓದಿ: Terrorist: ಪಾಕ್ ಮೂಲದ ಭಯೋತ್ಪಾದಕನನ್ನು ಬ್ಲ್ಯಾಕ್‌ ಲಿಸ್ಟ್ ಮಾಡಲು ಭಾರತ-ಅಮೆರಿಕಾ ಪ್ರಸ್ತಾಪ; ಮತ್ತೆ ಚೀನಾ ಅಡ್ಡಗಾಲು


ಪ್ರತಿಕೃತಿ ದಹನ
ದೀಪಾವಳಿಯಂದು ಲಕ್ಷ್ಮಿ ದೇವಿಯ ಆರಾಧನೆಯನ್ನು ಪಾಸ್ವಾನ್ ಪ್ರಶ್ನಿಸಿದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರ ವಿರುದ್ಧ ಭಾಗಲ್ಪುರದ ಶೆರ್ಮರಿ ಬಜಾರ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅವರ ಪ್ರತಿಕೃತಿಯನ್ನು ಸುಡಲಾಗಿದೆ.


ಬಿಜೆಪಿ ಸಂಪರ್ಕದಲ್ಲಿ ಸಿಎಂ ನಿತೀಶ್ ಕುಮಾರ್: ಬಾಂಬ್ ಸಿಡಿಸಿದ ಪ್ರಶಾಂತ್ ಕಿಶೋರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಬುಧವಾರ ಹೇಳಿದ್ದಾರೆ. ಪರಿಸ್ಥಿತಿ ಬದಲಾದರೆ ಅವರು ಮತ್ತೆ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದರೆ ನಿತೀಶ್ ಕುಮಾರ್ ಅವರ ಪಕ್ಷ ಜನತಾ ದಳ (ಯು) ಅವರ ಹೇಳಿಕೆಯನ್ನು ತಳ್ಳಿಹಾಕಿದೆ. ಅಲ್ಲದೇ ಇದು ಸತ್ಯಕ್ಕೆ ದೂರವಾದ ಮಾತು. ಇಂತಹ ಹೇಳಿಕೆ ಮೂಲಕ ಗೊಂದಲ ಮೂಡಿಸುವ ಯತ್ನ ನಡೆಯುತ್ತಿದೆ ಎಂದಿದೆ. ಕಿಶೋರ್ ಈ ದಿನಗಳಲ್ಲಿ ಬಿಹಾರದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಭೇಟಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಮೊದಲ ಹೆಜ್ಜೆ ಎನ್ನಲಾಗುತ್ತಿದೆ.


ಇದನ್ನೂ ಓದಿ: Mallikarjun Kharge: ಸೋತ ತರೂರ್​ಗೂ ಮಹತ್ವದ ಜವಾಬ್ದಾರಿ, ಖರ್ಗೆ ಪ್ಲಾನ್​ ಏನು? ಮಾಹಿತಿ ಕೊಟ್ಟ ಪುತ್ರ ಪ್ರಿಯಾಂಕ್!


ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಜೆಡಿಯು ಸಂಸದ ಹಾಗೂ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಮೂಲಕ ಬಿಜೆಪಿ ಜತೆ ಮಾತುಕತೆಗೆ ದಾರಿ ತೆರೆದಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಹರಿವಂಶ್ ನಿರಾಕರಿಸಿದ್ದಾರೆ. ಆದಾಗ್ಯೂ, ಅವರ ಪಕ್ಷವು ಈ ಹೇಳಿಕೆಯನ್ನು ತಿರಸ್ಕರಿಸಿದೆ ಹಾಗೂ ಕುಮಾರ್ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ತಿಳಿಸಿದೆ.

Published by:ಗುರುಗಣೇಶ ಡಬ್ಗುಳಿ
First published: