ಸಿಎಎ ಮೆರವಣಿಗೆ ವೇಳೆ ಅನುಚಿತ ವರ್ತನೆ; ಬಿಜೆಪಿ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಜಿಲ್ಲಾಧಿಕಾರಿ

ನಗರದಲ್ಲಿ ಬಿಜೆಪಿ ಕಾರ್ಯಕರ್ತರುವ  ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಜಿಲ್ಲಾಧಿಕಾರಿ ನಿಧಿ ಅಗರ್ವಾಲ್ ವಿರುದ್ಧ​ ಅಸಭ್ಯ ವರ್ತನೆ ತೋರಿದ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ, ಅಲ್ಲದೇ ಹೆಚ್ಚವರಿ ಜಿಲ್ಲಾಧಿಕಾರಿ ಪ್ರಿಯಾ ವರ್ಮ ಗುಂಪಿನಲ್ಲಿ ವ್ಯಕ್ತಿಯನ್ನು ಎಳೆದೊಯ್ಯುತ್ತಿರುವ ದೃಶ್ಯಗಳು ಕೂಡ ವೈರಲ್​ ಆಗಿದೆ.

ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡುತ್ತಿರುವ ಅಧಿಕಾರಿ

ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡುತ್ತಿರುವ ಅಧಿಕಾರಿ

  • Share this:
ಭೋಪಾಲ್ (ಜ.20): ನಿಷೇಧಾಜ್ಞೆ ನಡುವೆಯೂ ಪೌರತ್ವ ತಿದ್ದಪಡಿ ಕಾಯ್ದೆ ಬೆಂಬಲಿಸಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಅಸಭ್ಯ ವರ್ತನೆ ತೋರಿದ ಕಾರ್ಯಕರ್ತರನ್ನು ಮಧ್ಯ ಪ್ರದೇಶದ ರಾಜ್​ಗಡ್​ ಜಿಲ್ಲಾಧಿಕಾರಿ ಮತ್ತು ಉಪವಿಭಾಗಧಿಕಾರಿ ಸಾರ್ವಜನಿಕರೆದುರು ಎಳೆದೊಯ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಗರದಲ್ಲಿ ಬಿಜೆಪಿ ಕಾರ್ಯಕರ್ತರುವ  ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಜಿಲ್ಲಾಧಿಕಾರಿ ನಿಧಿ ಅಗರ್ವಾಲ್ ವಿರುದ್ಧ​ ಅಸಭ್ಯ ವರ್ತನೆ ತೋರಿದ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ, ಅಲ್ಲದೇ ಹೆಚ್ಚವರಿ ಜಿಲ್ಲಾಧಿಕಾರಿ ಪ್ರಿಯಾ ವರ್ಮ ಗುಂಪಿನಲ್ಲಿ ವ್ಯಕ್ತಿಯನ್ನು ಎಳೆದೊಯ್ಯುತ್ತಿರುವ ದೃಶ್ಯಗಳು ಕೂಡ ವೈರಲ್​ ಆಗಿದೆ.

ಶನಿವಾರ ರಾತ್ರಿಯಿಂದ ರಾಜಗಢದಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ. ಈ ನಿಷೇಧಾಜ್ಞೆಯನ್ನು ಹಿಂಪಡೆಯುವಂತೆ ಕೇಸರಿ ಪಕ್ಷ ಅನೇಕ ಮನವಿ ಮಾಡಿತಾದರೂ ಪ್ರಯೋಜನವಾಗಲಿಲ್ಲ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ವರ್ಮಾ, ಕೆಲವರು ತಮ್ಮ ಜೊತೆ ಅಸಭ್ಯ ವರ್ತನೆ ತೋರಿದರು. ಜಿಲ್ಲೆಯಲ್ಲಿ ಸಿಆರ್​ಪಿಸಿ ಸೆಕ್ಷನ್​ 144ರ ಅಡಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿತ್ತು. ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುವ ವೇಳೆ ಮತ್ತೊಂದು ಕಡೆಯಿಂದ ಗುಂಪು ಬಂದು ಅನುಚಿತವಾಗಿ ವರ್ತಿಸಿದರು. ಹಿಂದೆಯಿಂದ ನನ್ನ ಕೂದಲನ್ನು ಎಳೆದು, ಸೊಂಟಕ್ಕೆ ತಿವಿದರು. ನಮ್ಮ ಮನವಿ ಹೊರತಾಗಿ ಹೋರಾಟಕ್ಕೆ ಮುಂದಾದರು ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.ಇದೇ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದ ಆರೋಪವನ್ನು ಅವರು ನಿರಾಕರಿಸಿದ್ದಾರೆ.

ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ ಇಬ್ಬರು ವ್ಯಕ್ತಿ ವಿರುದ್ಧ ದೂರು ದಾಖಲಿಸಲಾಗಿದೆ, ಇದರಲ್ಲಿ ಒಬ್ಬರನ್ನು ಸಿಂಗ್​ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಗುರುತು ಪತ್ತೆಯಾಗಬೇಕಿದೆ.

ಇನ್ನು ಅಧಿಕಾರಿಗಳ ವರ್ತನೆ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಮಧ್ಯ ಪ್ರದೇಶದಲ್ಲಿ ಹಿಟ್ಲರ್​ ಆಡಳಿತವಿದೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಬಿಜೆಪಿಗೆ ನೂತನ ರಾಷ್ಟ್ರೀಯ ಅಧ್ಯಕ್ಷ: ಅಮಿತ್​​ ಶಾ ಸ್ಥಾನ ತುಂಬಲಿರುವ ಜೆಪಿ ನಡ್ಡಾ

ಘಟನೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಣ್​, ಪ್ರಜಾಪ್ರಭುತ್ವದ ಕಪ್ಪು ದಿನ ಇದು. ಶಾಂತಿಯುತ ಪ್ರತಿಭಟನೆ ನಡೆಸುವವರನ್ನು ಥಳಿಸಿ ಹಾಗೂ ಎಳೆಯುವಂತಹ ಶಕ್ತಿಯನ್ನು ಯಾವ ಕಾನೂನು ಪುಸ್ತಕ ನಿಮಗೆ ನೀಡಿದೆ ಎಂದು ಕೂಡ ಇದೆ ವೇಳೆ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​ ಪಕ್ಷ ಜನರೊಂದಿಗೆ ಹಿಟ್ಲರ್​ ಆಡಳಿತ ನಡೆಸುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಸಂಸತ್ತಿನಲ್ಲಿ ಇತ್ತೀಚೆಗಷ್ಟೆ ಕಮಲನಾಥ್​ ಸರ್ಕಾರ ಸಿಎಎ ವಿರೋಧಿಸಿತ್ತು.
First published: