• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bypolls Result: ಗೆಲುವಿನ ನಗೆ ಬೀರಿದ ದೀದಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​; ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ

Bypolls Result: ಗೆಲುವಿನ ನಗೆ ಬೀರಿದ ದೀದಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​; ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇಘಾಲಯದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಫುಟ್‌ಬಾಲ್ ಆಟಗಾರ ಯುಜೆನೆಸನ್ ಲಿಂಗ್ಡೋ ಅವರು ಗೆಲುವಿನ ನಗೆ ಬೀರಿದ್ದಾರೆ.

  • Share this:

ನವದೆಹಲಿ (ನ. 2): ಲೋಕಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರ ಮತ್ತು 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣಾ (Bypolls) ಫಲಿತಾಂಶ ಇಂದು ಪ್ರಕಟವಾಗಲಿದೆ. ಈಗಾಗಲೇ ಕರ್ನಾಟಕದ ಎರಡು ವಿಧಾನ ಸಭಾ ಕ್ಷೇತ್ರ ಸೇರಿದಂತೆ ಹಲವು ರಾಜ್ಯಗಳ ಫಲಿತಾಂಶ ಹೊರ ಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಟಿಎಂಸಿ (TMC) ಅಭೂತ ಪೂರ್ವ ವಿಜಯ ಸಾಧಿಸಿದೆ. ಇನ್ನು ಹಿಮಾಚಲ ಪ್ರದೇಶದ ಮಂಡಿ (Himachal pradesh Mandi) ಲೋಕಸಭಾ ಕ್ಷೇತ್ರವನ್ನೂ ಕೂಡ ಬಿಜೆಪಿ ಕಳೆದುಕೊಂಡಿದ್ದು, ತೀವ್ರ ಮುಖಭಂಗ ಅನುಭವಿಸಿದೆ. ಇದರ ಜೊತೆಗೆ ಫತೇಪುರ್, ಅರ್ಕಿ ಮತ್ತು ಜುಬ್ಬಾಯಿ-ಕೊತ್ಕೈಯ ಮೂರು ವಿಧಾನಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ.


ಎಲ್ಲೆಲ್ಲಿ ಚುನಾವಣೆ


ಅಸ್ಸಾಂನಲ್ಲಿ ಐದು, ಬಂಗಾಳದಲ್ಲಿ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಮೂರು, ಬಿಹಾರ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಮತ್ತು ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ತಲಾ ಒಂದು ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ


ಈಶಾನ್ಯ ಪ್ರಾಬಾಲ್ಯ ಕಳೆದುಕೊಂಡ ಬಿಜೆಪಿ


ಈಶಾನ್ಯದಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ ಹಿಮಾಚಲ ಪ್ರದೇಶ ಮತ್ತು ಹರಿಯಾಣದ ಎರಡು ಉತ್ತರದ ರಾಜ್ಯಗಳಲ್ಲಿ ಹಿನ್ನಡೆಯನ್ನು ಎದುರಿಸುತ್ತಿದೆ. 29 ವಿಧಾನಸಭಾ ಮತ್ತು 3 ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆಯಲ್ಲಿ ಹಿಮಾಚಲದಲ್ಲಿ ಕಾಂಗ್ರೆಸ್ 3 ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಮಂಡಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.


ಅಸ್ಸಾಂನ ಮೂರು ಕ್ಷೇತ್ರದಲ್ಲಿ ಅರಳಿದ ಕಮಲ


ಅಸ್ಸಾಂನ ಐದು ಸ್ಥಾನಗಳ ಪೈಕಿ ಬಿಜೆಪಿ ಮೂರರಲ್ಲಿಯೂ ಗೆಲುವು ಸಾಧಿಸಿದೆ. ಬಿಜೆಪಿ ಮೈತ್ರಿಕೂಟದ ಪಾಲುದಾರ ಯುಪಿಪಿಎಲ್ ತನಗೆ ಹಂಚಿಕೆಯಾದ ಎರಡು ಸ್ಥಾನಗಳಲ್ಲಿ ಮುಂದಿದೆ.


ಮಾಜಿ ಫುಟ್‌ಬಾಲ್ ಆಟಗಾರನಿಗೆ ಗೆಲುವು


ಮೇಘಾಲಯದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಫುಟ್‌ಬಾಲ್ ಆಟಗಾರ ಯುಜೆನೆಸನ್ ಲಿಂಗ್ಡೋ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಮಿತ್ರ ಪಕ್ಷವಾದ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ರಾಜಬಾಲಾ ಕ್ಷೇತ್ರವನ್ನು ಗೆದ್ದುಕೊಂಡಿದೆ. . ಮಿಜೋರಾಂನಲ್ಲಿ ಎಂಎನ್‌ಎಫ್ ಟುಯಿರಿಯಲ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.


ಜೆಡಿಯುಗೆ ಒಂದು ಸ್ಥಾನ


ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ ಒಂದು ಸ್ಥಾನದಲ್ಲಿ ಮತ್ತು ರಾಷ್ಟ್ರೀಯ ಜನತಾ ದಳ ಮತ್ತೊಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಒಂದು ಮತ್ತು ಇತರೆ ಪಕ್ಷ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.


ಇದನ್ನು ಓದಿ: ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಅಖಿಲೇಶ್​; ಎಸ್​ಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು?


ಗೆಹ್ಲೋಟ್ ಸರ್ಕಾರದ ಮೇಲೆ ಜನರ ವಿಶ್ವಾಸ


ರಾಜಸ್ಥಾನದ ವಲ್ಲಭನಗರ ಮತ್ತು ಧರಿಯಾವಾಡದ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈ ಮೂಲಕ ರಾಜ್ಯದ ಜನರು ಅಶೋಕ್ ಗೆಹ್ಲೋಟ್ ಸರ್ಕಾರದ ಮೇಲೆ ನಂಬಿಕೆ ಹೊಂದಿರುವುದು ಸಾಬೀತಾಗಿದೆ. ಕಳೆದ ವರ್ಷ ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಬಣದಿಂದ ಅಶೋಕ್​ ಗೆಹ್ಲೋಟ್​ ಭಾರಿ ಸವಾಲನ್ನು ಎದುರಿಸಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್​​, ಹಿಮಾಚಲ ಪ್ರದೇಶದ ಅರ್ಕಿ ಮತ್ತು ಮಹಾರಾಷ್ಟ್ರದ ಒಂದು ಸ್ಥಾನದಲ್ಲೂ ಮುನ್ನಡೆ ಕಾಯ್ದುಕೊಂಡಿದೆ.


ಇದನ್ನು ಓದಿ: ಇಂದಿನಿಂದ ಮನೆ ಮನೆಗೆ ಕೋವಿಡ್​ ಲಸಿಕೆ ಅಭಿಯಾನ ಆರಂಭ


ಮಮತಾ ಮೋಡಿ


ಬಂಗಾಳದ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಎಪ್ರಿಲ್-ಮೇ ರಾಜ್ಯ ಚುನಾವಣೆಯಲ್ಲಿ ತೃಣಮೂಲದ ಭರ್ಜರಿ ಗೆಲುವಿನ ನಂತರ ನಡೆಯುತ್ತಿರುವ ಈ ಉಪಚುನಾವಣೆಯನ್ನು ಟಿಎಂಸಿ ಮತ್ತು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿತ್ತು.


ತೆಲಂಗಾಣದ ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ತೊರೆದು ಬಿಜೆಪಿ ಸೇರಿದ ಎಟಾಲ ರಾಜೇಂದರ್ ಮುನ್ನಡೆ ಸಾಧಿಸಿದ್ದಾರೆ. ಕ್ಷೇತ್ರದ ಹಾಲಿ ಶಾಸಕರಾದ ಶ್ರಾಜೇಂದರ್ ಅವರು ಭೂಕಬಳಿಕೆ ಆರೋಪದ ನಂತರ ರಾಜೀನಾಮೆ ನೀಡಿದ್ದರು,

First published: