ದಲಿತ ಹುಡುಗನನ್ನು ಮದುವೆಯಾಗಿದ್ದಕ್ಕೆ ತಂದೆಯಿಂದಲೇ ಜೀವ ಬೆದರಿಕೆ; ನ್ಯಾಯಾಲಯದ ಕದ ತಟ್ಟಿದ ಬಿಜೆಪಿ ಶಾಸಕನ ಮಗಳು

ಉತ್ತರ ಪ್ರದೇಶದ ​ಬರೇಲಿ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್​ ಮಿಶ್ರಾ  ಮಗಳು ಸಾಕ್ಷಿ ಮಿಶ್ರಾ ತಮಗೆ ರಕ್ಷಣೆ ಬೇಕೆಂದು ಅಲಹಾಬಾದ್​ ಕೋರ್ಟ್​ ಮೊರೆ ಹೋಗಿದ್ದಾಳೆ.

Seema.R | news18
Updated:July 11, 2019, 3:56 PM IST
ದಲಿತ ಹುಡುಗನನ್ನು ಮದುವೆಯಾಗಿದ್ದಕ್ಕೆ ತಂದೆಯಿಂದಲೇ ಜೀವ ಬೆದರಿಕೆ; ನ್ಯಾಯಾಲಯದ ಕದ ತಟ್ಟಿದ ಬಿಜೆಪಿ ಶಾಸಕನ ಮಗಳು
ಬಿಜೆಪಿ ಶಾಸಕನ ಮಗಳು ಆಕೆ ಮದುವೆಯಾಗಿರುವ ಹುಡುಗ
  • News18
  • Last Updated: July 11, 2019, 3:56 PM IST
  • Share this:
ನವದೆಹಲಿ (ಜು.11): ಕುಟುಂಬದ ಇಚ್ಛೆ ವಿರುದ್ಧವಾಗಿ ದಲಿತ ಹುಡಗನನ್ನು ಪ್ರೀತಿಸಿ ಮದುವೆಯಾಗಿರುವುದಕ್ಕೆ ಈಗ ಅಪ್ಪನಿಂದಲೇ ಮಗಳು ಜೀವಬೆದರಿಕೆಗೆ ಒಳಗಾಗಿದ್ದಾಳೆ. ಇದೀಗ ನಮಗೆ ರಕ್ಷಣೆ ನೀಡಬೇಕು ಎಂದು ಮಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಇಷ್ಟಕ್ಕೂ ಮಗಳಿಗೆ ಬೆದರಿಕೆ ಒಡ್ಡುತ್ತಿರುವ ವ್ಯಕ್ತಿ ಬಿಜೆಪಿಯ ಶಾಸಕ.

ಉತ್ತರ ಪ್ರದೇಶದ ​ಬರೇಲಿ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್​ ಮಿಶ್ರಾ ಮಗಳು ಸಾಕ್ಷಿ ಮಿಶ್ರಾ ತಮಗೆ ರಕ್ಷಣೆ ಬೇಕೆಂದು ಅಲಹಾಬಾದ್​ ಕೋರ್ಟ್​ ಮೊರೆ ಹೋಗಿದ್ದಾಳೆ.

ಕಳೆದ ಗುರುವಾರ ಅಜಿತೇಶ್​ ಕುಮಾರ್​ ಎಂಬ ಯುವಕನನ್ನು ಸಾಕ್ಷಿ ಮದುವೆಯಾಗಿದ್ದಳು. ಮಗಳ ಅಂತರ್ಜಾತಿ ವಿವಾಹವಾದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಮಿಶ್ರಾ ಯುವಕನ ಕುಟುಂಬವನ್ನು ಕೂಡಿ ಹಾಕಿದ್ದಾರೆ.

ಇನ್ನು ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಸಾಕ್ಷಿ, "ತಮಗೆ ಜೀವ ಭಯವಿದೆ. ನನ್ನ ತಂದೆ ಹಾಗೂ ಅವರ ತಮ್ಮ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಹಾಗೂ ನಾನು ಮದುವೆಯಾಗಿರುವ ಯುವಕನ ಕುಟುಂಬಕ್ಕೆ ಯಾವುದೇ ಅಪಾಯ ಆದರೂ ಅದಕ್ಕೆ ಕಾರಣ ನನ್ನ ಅಪ್ಪ ಬರುತುಲ್​ಜೀ ಹಾಗೂ ಚಿಕ್ಕಪ್ಪ ವಿಕ್ಕಿ ಬರುತುಲ್​ಜೀ," ಎಂದು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.

"ನಾನು ಅಲಂಕಾರಕ್ಕೆ ಎಂದು ಹಣೆಗೆ ಕುಂಕಮ ಇಟ್ಟುಕೊಂಡಿಲ್ಲ. ನಾನು ಅಭಿಯನ್ನು ನಿಜವಾಗಿಯೂ ಮದುವೆಯಾಗಿದ್ದೇನೆ. ಆದರೆ ನನ್ನ ಅಪ್ಪ ನಮಗೆ ನೆಮ್ಮದಿಯಾಗಿರಲು ಬಿಡುತ್ತಿಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ. ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ. ಅಭಿ ಮತ್ತು ಅವರ ಕುಟುಂಬದವರು ತುಂಬಾ ಒಳ್ಳೆಯವರು," ಎಂದು ಸಾಕ್ಷಿ ಮನವಿ ಮಾಡಿದ್ದಾಳೆ.

ಇದನ್ನು ಓದಿ: Mahesh Babu: ಸರಿಲೇರು ನಿಕೆವ್ವರು ಚಿತ್ರದ ಸೆಟ್​ನಿಂದ ಲೀಕ್​ ಆಯ್ತು ಪ್ರಿನ್ಸ್​ ಮಹೇಶ್​ ಬಾಬು ಫೋಟೋಸ್

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಜೇಶ್​ ಮಿಶ್ರಾ, "ನನ್ನ ವಿರುದ್ಧ ರಾಜಕೀಯ ಪಿತೂರಿ ಇದು ಎಂದಿದ್ದಾರೆ. ನನ್ನ ಮಗಳು ವಯಸ್ಕಳಾಗಿದ್ದು, ಆಕೆ ಜೀವನದ ಕುರಿತು ಆಕೆ ನಿರ್ಧಾರ ಕೈಗೊಳ್ಳಬಹುದು. ಅವರಿಗೆ ಯಾವುದೇ ಜೀವ ಭಯವನ್ನು ನಾನು, ನನ್ನ ಕುಟುಂಬಸ್ಥರು ಹಾಕಿಲ್ಲ," ಎಂದಿದ್ದಾರೆ.ಇದೇ ವೇಳೆ ಮಗಳು ಮತ್ತು ಆಕೆ ಮದುವೆ ಆಗಿರುವ ಯುವಕನ ನಡುವೆ ವಯಸ್ಸುನ ಅಂತರ ಹೆಚ್ಚಿದೆ. ಅಲ್ಲದೇ ಆತ ಕಡಿಮೆ ವೇತನದಲ್ಲಿ ಜೀವಿಸುತ್ತಿದ್ದಾನೆ ಎಂದು ನಾನು ಆಕ್ಷೇಪಿಸಿದ್ದೇನೆಯೇ ಹೊರತು ಜಾತಿ ವಿಚಾರದಲ್ಲಿ ಅಲ್ಲ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಸಾಮಾಜಿಕ ಜಾಲತಾಣದ ಮೂಲಕ ಈ ವಿಡಿಯೋ ಗಮನಿಸಿದ್ದೇವೆ. ಆದರೆ ಅವರು ಎಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ. ಯುವಕನ ಮನೆಗೆ ಈಗಾಗಲೇ ರಕ್ಷಣೆ ನೀಡಲಾಗಿದೆ ಎಂದಿದ್ದಾರೆ.

First published: July 11, 2019, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading