Rahul Gandhi ನೈಟ್​ ಪಾರ್ಟಿ ವಿಡಿಯೋ ಪೋಸ್ಟ್​ ಮಾಡಿದ ಬಿಜೆಪಿ; ತಪ್ಪೇನಿದೆ ಎಂದ ಕಾಂಗ್ರೆಸ್​​

ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್,​ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗುವುದಕ್ಕೆ ಸ್ನೇಹಿತ ರಾಷ್ಟ್ರಕ್ಕೆ ಭೇಟಿ ನೀಡುವುದು ಅಪರಾಧ ಅಲ್ಲ ಎಂದಿದೆ.

ರಾಹುಲ್​ ಗಾಂಧಿ

ರಾಹುಲ್​ ಗಾಂಧಿ

  • Share this:
    ರಾಹುಲ್​ ಗಾಂಧಿ (Rahul Gandhi) ನಾಯಕತ್ವದ ಚರ್ಚೆ ನಡುವೆಯೇ ಇದೀಗ ಪಾರ್ಟಿಯೊಂದರ ಅವರ ವಿಡಿಯೋ ವೈರಲ್​ ಆಗಿದೆ. ಕಟ್ಮಂಡುವಿನಲ್ಲಿ ನೈಟ್​ಕ್ಲಬ್​ನಲ್ಲಿ (Katmandu Night Club) ರಾಹುಲ್​ ಗಾಂಧಿ ಪಾರ್ಟಿ ಮಾಡುತ್ತಿರುವ ವಿಡಿಯೋವನ್ನು ಅನೇಕ ಬಿಜೆಪಿ ನಾಯಕರು (BJP Leader) ಪೋಸ್ಟ್​ ಮಾಡಿದ್ದು, ಈ ಘಟನೆಯನ್ನು ರಾಜಸ್ಥಾನದ ಕೋಮು ಸಂಘರ್ಷದೊಂದಿಗೆ ಹೊಂದಿಸಿ ಪ್ರಶ್ನಿಸಿದ್ದಾರೆ. ರಾಹುಲ್​ ಗಾಂಧಿ ಪಾರ್ಟಿ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್​ ಮಾಳವೀಯ (Amit Malviya), ಮುಂಬಯಿ ದಾಳಿಗೆ ಒಳಗಾದಾಗ ರಾಹುಲ್ ಗಾಂಧಿ ನೈಟ್​ ಕ್ಲಬ್​ನಲ್ಲಿದ್ದರು. ತಮ್ಮ ಪಕ್ಷ ಸ್ಫೋಟಿಸುತ್ತಿರುವ ಸಂದರ್ಭದಲ್ಲಿ ಕೂಡ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರು ಸ್ಥಿರತೆ ಪ್ರದರ್ಶಿಸುತ್ತಿದ್ದಾರೆ. ಆಸಕ್ತಿಕರವೆಂದರೆ, ತಮ್ಮ ಅಧ್ಯಕ್ಷಗಿರಿಯನ್ನು ಬೇರೆಯವರಿಗೆ ನೀಡಲು ಕಾಂಗ್ರೆಸ್ ನಿರಾಕರಿಸಿದ ಕೂಡಲೇ, ಅವರ ಪ್ರಧಾನಿ ಅಭ್ಯರ್ಥಿಯ ಮೇಲೆ ಟೀಕಾ ಪ್ರಹಾರ ನಡೆಸಲು ಶುರು ಮಾಡಿದರು ಎಂದು ಟೀಕೆ ನಡೆಸಿದ್ದಾರೆ.

    ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

    ಇನ್ನು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್,​ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗುವುದಕ್ಕೆ ಸ್ನೇಹಿತ ರಾಷ್ಟ್ರಕ್ಕೆ ಭೇಟಿ ನೀಡುವುದು ಅಪರಾಧ ಅಲ್ಲ ಎಂದಿದೆ. ಅಷ್ಟೇ ಅಲ್ಲದೇ,  ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ನವಾಜ್​ ಷರೀಫ್​ ಮಗಳ ಮದುವೆಯಲ್ಲಿ ಭಾಗಿಯಾಗಲೂ ಹೋಗಿದ್ದಕ್ಕಿಂತ ಇದು ಕಡಿಮೆಯೇ ಎಂದು ಪ್ರತ್ಯುತ್ತರ ನೀಡಿದೆ.



    ಪ್ರಧಾನಿ ಪಾಕ್ ಭೇಟಿ ಕುಟುಕಿದ ಕಾಂಗ್ರೆಸ್​

    ಪಾಕಿಸ್ತಾನ್​ಗೆ ನವಾಜ್​ ಷರೀಫ್​ ಜೊತೆ ಕೇಕ್​ ಕತ್ತರಿಸಲು ಆಹ್ವಾನಿಸದಿದ್ದರೂ ಪ್ರಧಾನಿ ಹೋದಂತೆ ರಾಹುಲ್​ ಗಾಂಧಿ ಹೋಗಿಲ್ಲ. ಪಠಾಣ್​ ಕೋಟ್​ನಲ್ಲಿ ಏನಾಗುತ್ತಿದೆ ಎಂಬುದು ನಮಗೆ ತಿಳಿದಿದೆ ಎಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಮದುವೆಯಲ್ಲಿ ಭಾಗಿಯಾಗುವುದು ತಪ್ಪೇ
    ಈ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ ಕಾಂಗ್ರೆಸ್​​ ವಕ್ತಾರ, ರಾಹುಲ್​ ಗಾಂಧಿ ಪತ್ರಕರ್ತರ ಮದುವೆಗೆ ಭಾಗಿಯಾಗಲು ಸ್ನೇಹ ರಾಷ್ಟ್ರ ನೇಪಾಳಕ್ಕೆ ಭೇಟಿ ನೀಡಿದ್ದರು. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ನಮ್ಮ ಸಂಸ್ಕೃತಿ ಹೊರತು ಅಪರಾಧವಲ್ಲ. ಶೀಘ್ರದಲ್ಲೇ ಬಿಜೆಪಿ ಮತ್ತು ಪ್ರಧಾನಿಗಳು ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಮದುವೆಯಲ್ಲಿ ಭಾಗಿಯಾಗುವುದನ್ನು ಅಪರಾಧ ಎಂದು ನಿರ್ಧರಿಸಬಹುದು ಎಂದು ತಿರುಗೇಟಿ ನೀಡಿದ್ದಾರೆ.

    ಇದನ್ನು ಓದಿ: CM Basavaraja Bommai ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ ನಾಯಕರು

    ಬಿಜೆಪಿ ನಾಯಕರ ಫೋಟೋ ಪೋಸ್ಟ್​ ಮಾಡಿದ ಕೈ ಸಂಸದ

    ಇನ್ನು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ. ರಾಹುಲ್​ ಗಾಂಧಿ ಸಾಮಾನ್ಯ ವ್ಯಕ್ತಿಯಂತೆ ಖಾಸಗಿ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿದವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.
    ಮದುವೆ ಆರತಕ್ಷತೆಯಲ್ಲಿ ಭಾಗಿಯಾಗುವುದರಲ್ಲಿ ಏನು ತಪ್ಪಿದೆ. ಯಾವ ಕಾರಣಕ್ಕೆ ಈ ಸಂಘಿಗಳು ರಾಹುಲ್​ ಕಂಡರೆ ಹೆದರಿ, ಸುಳ್ಳು ಹರಡುತ್ತಿದ್ದಾರೆ. ಪ್ರತಿಯೊಬ್ಬರು ಖಾಸಗಿ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾರೆ ಎಂದು ಟ್ವೀಟರ್​ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಅವರು ಪ್ರಕಾಶ್​ ಜಾವಡೇಕರ್​ ಶಾಂಪೈನ್​ ಬಾಟೆಲ್ ಓಪನ್​ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು, ಯಾರು ಇದು ಎಂದು ಪ್ರಶ್ನಿಸಿದ್ದಾರೆ.

    ಇದನ್ನು ಓದಿ: ಪ್ರಧಾನಿ ಮೋದಿಗೆ ಬರ್ಲಿನ್ ಬಾಲೆಯಿಂದ ಸಿಕ್ತು ಸ್ಪೆಷಲ್ ಗಿಫ್ಟ್

    ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಸಂಸದರು ತಮ್ಮ ನೇಪಾಳಿ ಸ್ನೇಹಿತೆ ಹಾಗೂ ಮಾಜಿ ಸಿಎನ್​ಎನ್​ ಪತ್ರಕರ್ತೆ ಸುಮ್ನಿಮಾ ಉದಾಸ್​ ಅವರ ವಿವಾಹದಲ್ಲಿ ಭಾಗಿಯಾಗಲು ಮೂವರೊಂದಿಗೆ ಸೋಮವಾರ ಕಠ್ಮಂಡುವಿಗೆ ಆಗಮಿಸಿದ್ದಾರೆ ಎಂದು  ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ಮಂಗಳವಾರ ವರದಿ ಮಾಡಿದೆ. ಮಂಗಳವಾರ ವಿವಾಹವನ್ನು ಯೋಜಿಸಲಾಗಿದ್ದು, ಗುರುವಾರ ಆರತಕ್ಷತೆ ನಡೆಯಲಿದೆ ಎಂದು ಪತ್ರಿಕೆ ವರದಿ ಮಾಡಿದೆ.
    Published by:Seema R
    First published: