ಆಪ್​​ ತಂತ್ರಕ್ಕೆ ಪ್ರತಿತಂತ್ರ: ‘ಹೈಡ್ರಾಮ ಬಂದ್​ ಕರೋ’ ಎಂದು ಕೇಜ್ರಿವಾಲ್​ ವಿರುದ್ಧ ಬಿಜೆಪಿ ಪ್ರತಿಭಟನೆ


Updated:June 13, 2018, 8:38 PM IST
ಆಪ್​​ ತಂತ್ರಕ್ಕೆ ಪ್ರತಿತಂತ್ರ: ‘ಹೈಡ್ರಾಮ ಬಂದ್​ ಕರೋ’ ಎಂದು ಕೇಜ್ರಿವಾಲ್​ ವಿರುದ್ಧ ಬಿಜೆಪಿ ಪ್ರತಿಭಟನೆ

Updated: June 13, 2018, 8:38 PM IST
-ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​.13): ಐಎಎಸ್​ ಅಧಿಕಾರಿಗಳಿಗೆ ಮುಷ್ಕರ ನಿಲ್ಲಿಸುವಂತೆ ಸೂಚಿಸಿ ಎಂದು ಆಗ್ರಹಿಸಿ ಎಲ್​.ಜಿ ಅನಿಲ್​ ಅವರ ವಿರುದ್ಧ ಸಿಎಂ ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ಲೆಫ್ಟಿನೆಂಟ್​​ ಗವರ್ನರ್​​ ಕಚೇರಿಯಲ್ಲಿ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಪ್ರತಿತಂತ್ರ ರೂಪಿಸಿರುವ ಬಿಜೆಪಿ ಆಪ್​ ಮಾದರಿಯಲ್ಲೇ ಸಿಎಂ ಕೇಜ್ರಿವಾಲ್ ವಿರುದ್ಧ​ ನಡೆಸಿದ್ದಾರೆ. ಧರಣಿ ಕೈಬಿಟ್ಟು, ಸರ್ಕಾರ ನಡೆಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕ, ದೆಹಲಿ ಸಂಸದ ಪರ್ವೇಶ್​ ಸಿಂಗ್​ ಸಾಹೀಬ್​ ವರ್ಮ ನೇತೃತ್ವದಲ್ಲಿ ವಿಪಕ್ಷದ ನಾಯ ವಿಜೇಂದ್ರ ಗುಪ್ತ, ಶಾಸಕ ಜಗದೀಶ್​ ಪ್ರಧಾನ್​​ ಸೇರಿದಂತೆ ಮಜೀಂದರ್​ ಸಿರ್ಸಾ ತಂಡ ಸಿಎಂ ಅರವಿಂದ ಕೇಜ್ರಿವಾಲ್​​ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದರು. ಇತ್ತೀಚೆಗೆ ಆಪ್​ ಪಕ್ಷದಿಂದ ಹೊರಬಂದಿದ್ದ ಬಂಡಾಯ ಶಾಸಕ ಕಪಿಲ್​ ಶರ್ಮಾ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ.

ಪ್ರತಿಭಟನೆ ವೇಳೆ ಮಾಧ್ಯಮದೊಂದಿಗೆ ಮಾತಾಡಿದ ಬಿಜೆಪಿ ನಾಯಕ ಮನೋಜ್​​ ತಿವಾರಿ, ಸಿಎಂ ಅರವಿಂದ್​ ಕೇಜ್ರಿವಾಲ್​ ಜನರಿಗೆ ದ್ರೋಹ ಬಗೆದಿದ್ದಾರೆ. 2014ರಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಇಲ್ಲಿವರೆಗೂ ಈಡೇರಿಸಿಲ್ಲ. ಬದಲಿಗೆ ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ನಮ್ಮದು ಮೂರು ಬೇಡಿಕೆಗಳಿವೆ ಎಂದಿದ್ದಾರೆ. ಈ ಬೇಡಿಕೆಗಳ ಪೈಕಿ ಒಂದು ಸಿಎಂ ಅರವಿಂದ್​ ಕೇಜ್ರಿವಾಲ್ ನೇತೃತ್ವದಲ್ಲಿ ನಡೆಯುತ್ತಿರುವ​ ರಾಜಕೀಯ ಹೈಡ್ರಾಮ ನಿಲ್ಲಿಸಬೇಕು. ಎರಡನೇಯದು ಕೂಡಲೇ ಕಾರ್ಯಪ್ರವೃತ್ತರಾಗಿ ನಗರಕ್ಕೆ ಬೇಕಿರುವ ನೀರಿನ ಅಗತ್ಯತೆ ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬಿತ್ತಿಪತ್ರಗಳನ್ನು ಹಿಡಿದು, ಸರ್ಕಾರದ ವಿರುದ್ಧ ‘ಹೈಡ್ರಾಮ ಬಂದ್​ ಕರೋ’ ಎಂದು ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...