Terrorist Attack| ಜಮ್ಮ-ಕಾಶ್ಮೀರದಲ್ಲಿ ಬಿಜೆಪಿ ನಾಯಕನನ್ನು ಗುಂಡಿಟ್ಟು ಕೊಂಡ ಉಗ್ರರು!

ಈ ತಿಂಗಳ ಆರಂಭದಲ್ಲೇ ಅನಂತನಾಗ್‌ ಜಿಲ್ಲೆಯಲ್ಲಿ ಓರ್ವ ಬಿಜೆಪಿ ನಾಯಕ ಮತ್ತು ಆತನ ಪತ್ನಿಯನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದು. ಇದೀಗ ಕಣಿವೆ ರಾಜ್ಯದಲ್ಲಿ ಮರ್ತೋರ್ವ ಬಿಜೆಪಿ ನಾಯಕನ ಹತ್ಯೆಯಾಗಿರುವುದು ಸಾಮಾನ್ಯವಾಗಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಮೃತ ಜಾಗೀರ್ ಅಹ್ಮದ್ ದಾರ್.

ಮೃತ ಜಾಗೀರ್ ಅಹ್ಮದ್ ದಾರ್.

 • Share this:
  ಜಮ್ಮು-ಕಾಶ್ಮೀರ (ಆಗಸ್ಟ್​ 17); ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ಮಂಗಳವಾರ ಬಿಜೆಪಿ ನಾಯಕನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಕೊಲ್ಲಲ್​ ಪಟ್ಟ ನಾಯಕನನ್ನು ಬ್ರಜ್ಲೂ ಜಾಗೀರ್​ ಎಂದು ಗುರುತಿಸಲಾಗಿದೆ. ಇದು ಕಳೆದ ಒಂದು ವಾರದಲ್ಲಿ ನಡೆದ ಎರಡನೇ ಘಟನೆಯಾಗಿದೆ ಎಂದು ಕಣಿವೆ ರಾಜ್ಯದ ಬಿಜೆಪಿ ಉಸ್ತುವಾರಿ ಜಾವಿದ್ ಅಹ್ಮದ್ ದಾರ್ ತಿಳಿಸಿದ್ದಾರೆ. ಕುಲ್ಗಾಂನ ಬ್ರಜ್ಲೂ-ಜಾಗೀರ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಾರ್ಗದ ಮಧ್ಯೆಯೇ ಜಾಗೀರ್​ ಕೊನೆ ಉಸಿರೆಳೆದಿದ್ದಾರೆ ಎಂದು ಕಾಶ್ಮೀರದ ಬಿಜೆಪಿಯ ಮಾಧ್ಯಮ ಸೆಲ್ ಮುಖ್ಯಸ್ಥ ಮಂಜೂರ್ ಅಹ್ಮದ್ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ANI ತಿಳಿಸಿದೆ.  ಈ ತಿಂಗಳ ಆರಂಭದಲ್ಲೇ ಅನಂತನಾಗ್‌ ಜಿಲ್ಲೆಯಲ್ಲಿ ಓರ್ವ ಬಿಜೆಪಿ ನಾಯಕ ಮತ್ತು ಆತನ ಪತ್ನಿಯನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದು. ಇದೀಗ ಕಣಿವೆ ರಾಜ್ಯದಲ್ಲಿ ಮರ್ತೋರ್ವ ಬಿಜೆಪಿ ನಾಯಕನ ಹತ್ಯೆಯಾಗಿರುವುದು ಸಾಮಾನ್ಯವಾಗಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

  ಬ್ರಜ್ಲೂ ಜಾಗೀರ್​ ಹತ್ಯೆಯನ್ನು "ಅನಾಗರೀಕ ಕೃತ್ಯ" ಎಂದು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಅಲ್ಲದೆ, ಕಣಿವೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸಹ ಈ ಹೇಯ ಘಟನೆಯನ್ನು ತೀವ್ರವಾಗಿ ಖಂಡಿಸಿವೆ.  ಆಗಸ್ಟ್ 9 ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬಿಜೆಪಿ ನಾಯಕ ಗುಲಾಂ ರಸೂಲ್ ದಾರ್ ಮತ್ತು ಅವರ ಪತ್ನಿಯನ್ನು ಅನಂತನಾಗ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಬಿಜೆಪಿಯ ಕಿಸಾನ್ ಮೋರ್ಚಾದ ಜಿಲ್ಲಾ ಮುಖ್ಯಸ್ಥರಾಗಿದ್ದ ದಾರ್ ಮತ್ತು ಅವರ ಪತ್ನಿ ಪಟ್ಟಣದ ಲಾಲ್ ಚೌಕ್ ನೆರೆಯಲ್ಲಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಗಾಯಗಳಿಂದಾಗಿ ಇಬ್ಬರೂ ಸಾವನ್ನಪ್ಪಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: