HOME » NEWS » National-international » BJP LEADER SHOT DEAD BY MEN ON BIKE IN UTTAR PRADESH MAK

ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಮೂವರ ಬಂಧನ

ದಯಾಶಂಕರ್ ಗುಪ್ತ ಮಂಡಲ್‌ನ ಉಪಾಧ್ಯಕ್ಷನಾಗಿದ್ದು, ನಿನ್ನೆ ರಾತ್ರಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುವ ವೇಳೆ ಸ್ಥಳೀಯ ಮಾರುಕಟ್ಟೆಯ ಬಳಿ ಅವರ ಮೇಲೆ ಹಲ್ಲೆ ನಡೆದಿದೆ. ಆ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ.

news18-kannada
Updated:October 17, 2020, 12:03 PM IST
ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಮೂವರ ಬಂಧನ
ಪ್ರಾತಿನಿಧಿಕ ಚಿತ್ರ.
  • Share this:
ಉತ್ತರಪ್ರದೇಶ (ಅಕ್ಟೋಬರ್​ 17); ಇಲ್ಲಿನ ಫಿರೋಜಬಾದ್ ಜಿಲ್ಲೆಯಲ್ಲಿ ದಯಾಶಂಕರ್ ಗುಪ್ತ ಎಂಬ ಬಿಜೆಪಿ ಮುಖಂಡನನ್ನು ಬೈಕಿನಲ್ಲಿ ಬಂದ ಮೂರು ಜನರ ಗುಂಪು ನಿನ್ನೆ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದೆ. ಈ ಸಂಬಂಧ ಅವರ ಕುಟುಂಬ ಶಂಕಿತರೆಂದು ಆರೋಪಿಸಿದ ನಂತರ ಪಕ್ಷದ ಸಹೋದ್ಯೋಗಿ ವೀರೇಶ್ ತೋಮರ್, ಅವರ ಚಿಕ್ಕಪ್ಪಂದಿರಾದ ನರೇಂದ್ರ ತೋಮರ್ ಮತ್ತು ದೇವೇಂದ್ರ ತೋಮರ್‌ರವರನ್ನು ಪೊಲೀಸರು ಬಂಧಿಸಿದ್ದಾರೆ.

ದಯಾಶಂಕರ್ ಗುಪ್ತ ಮಂಡಲ್‌ನ ಉಪಾಧ್ಯಕ್ಷನಾಗಿದ್ದು, ನಿನ್ನೆ ರಾತ್ರಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುವ ವೇಳೆ ಸ್ಥಳೀಯ ಮಾರುಕಟ್ಟೆಯ ಬಳಿ ಅವರ ಮೇಲೆ ಹಲ್ಲೆ ನಡೆದಿದೆ. ಆ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಮತ್ತೋರ್ವ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ-ಕೊಲೆ; ಕಾಮುಕರ ಬಂಧನ

ಈ ಕೊಲೆಯ ಪ್ರಮುಖ ಆರೋಪಿಯೆಂದು ಶಂಕಿಸಿರುವ ವೀರೇಶ್ ತೋಮರ್ ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, "ಆತ ದಯಾಶಂಕರ್ ವಿರುದ್ಧ ಫೇಸ್‌ಬುಕ್‌ನಲ್ಲಿ ಆಗಾಗ್ಗೆ ಕಿಡಿಕಾರುತ್ತಿದ್ದ. ಆತನ ಚಿಕ್ಕಪ್ಪ ನರೇಂದ್ರ ತೋಮರ್, ಫಿರೋಜಬಾದ್‌ನ ರತ್ನಗಿರಿಯ ಗ್ರಾಮಪ್ರಧಾನ್ ಹುದ್ದೆಗೆ ದಯಾಶಂಕರ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ. ಈ ಕುರಿತು ಅವರಿಬ್ಬರ ನಡುವೆ ಜಗಳವಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
Published by: MAshok Kumar
First published: October 17, 2020, 12:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories