HOME » NEWS » National-international » BJP LEADER SEEKS SUPREME COURT HEARING TO REMOVE DELHIS SHAHEEN BAGH PROTESTERS GNR

‘ಶಹೀನ್​​ ಬಾಗ್​​ ಪ್ರತಿಭಟನಾಕಾರರ ತೆರವುಗೊಳಿಸಿ‘: ಸುಪ್ರೀಂಕೋರ್ಟ್​ ಮೊರೆ ಹೋದ ಬಿಜೆಪಿ ನಾಯಕರು

ಶಹೀನ್​ ಬಾಗ್​​ ಪ್ರತಿಭಟನೆಯಿಂದ ದೆಹಲಿ-ನೋಯ್ಡಾ ಹೆದ್ದಾರಿಯೂ ಬಹುತೇಕ ಬಂದ್ ಆದಂತಿದೆ. ದೆಹಲಿ ಪ್ರಮುಖ ರಸ್ತೆಗಳಿಗೆ ಹಾದು ಹೋಗುವ ಶಹೀನ್​​ ಬಾಗ್​​ನಲ್ಲೇ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಸಂಚಾರ ದಟ್ಟಣೆ ತೀವ್ರಗೊಂಡಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸುವಂತೆ ಸೂಚಿಸಿ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

news18-kannada
Updated:February 4, 2020, 5:36 PM IST
‘ಶಹೀನ್​​ ಬಾಗ್​​ ಪ್ರತಿಭಟನಾಕಾರರ ತೆರವುಗೊಳಿಸಿ‘: ಸುಪ್ರೀಂಕೋರ್ಟ್​ ಮೊರೆ ಹೋದ ಬಿಜೆಪಿ ನಾಯಕರು
ಶಹೀನ್ ಬಾಗ್ ಪ್ರತಿಭಟನೆ
  • Share this:
ನವದೆಹಲಿ(ಫೆ.04): ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಲ್ಲಿನ ಶಹೀನ್​​ ಬಾಗ್​​ನಲ್ಲಿ ಹೋರಾಟ ಮಾಡುತ್ತಿರುವ ಪ್ರತಿಭಟನಾಕಾರರ ತೆರವುಗೊಳಿಸುವಂತೆ ಬಿಜೆಪಿ ನಾಯಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ಧಾರೆ. ಕಳೆದ ಎರಡು ತಿಂಗಳಿನಿಂದ ಶಹೀನ್​​ ಬಾಗ್​​ನಲ್ಲಿ ಸಿಎಎ ಮತ್ತು ಎನ್​​ಆರ್​ಸಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಿಂದ​ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಪ್ರತಿಭಟನಾಕಾರರ ತೆರವಿಗೆ ಆದೇಶಿಸಿ ಎಂದು ಸುಪ್ರೀಂಕೋರ್ಟ್​ನಲ್ಲಿ ಬಿಜೆಪಿ ನಾಯಕ ನಂದಕಿಶೋರ್ ಗಾರ್ಗ್ ಮೇಲ್ಮನವಿ ಸಲ್ಲಿಸಿದ್ದಾರೆ.

ಶಹೀನ್​ ಬಾಗ್​​ ಪ್ರತಿಭಟನೆಯಿಂದ ದೆಹಲಿ-ನೋಯ್ಡಾ ಹೆದ್ದಾರಿಯೂ ಬಹುತೇಕ ಬಂದ್ ಆದಂತಿದೆ. ದೆಹಲಿ ಪ್ರಮುಖ ರಸ್ತೆಗಳಿಗೆ ಹಾದು ಹೋಗುವ ಶಹೀನ್​​ ಬಾಗ್​​ನಲ್ಲೇ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಸಂಚಾರ ದಟ್ಟಣೆ ತೀವ್ರಗೊಂಡಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸುವಂತೆ ಸೂಚಿಸಿ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಶಹೀನ್​ ಬಾಗ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಿಲ್ಲಿಸುವಂತೆ ದೆಹಲಿ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದರು. ಸುಮಾರು ದಿನಗಳಿಂದ ಶಾಹೀನ್ ಬಾಗ್​​ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ರಸ್ತೆಯು ನೋಯ್ಡಾ ಮತ್ತು ದೆಹಲಿ ನಡುವಿನ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ನೀವು ಪ್ರತಿಭಟನೆ ಮೂಲಕ ಹೆದ್ದಾರಿಯನ್ನು ಸಂಪೂರ್ಣವಾಗಿ ತಡೆಹಿಡಿದಿರುವುದರಿಂದ ದೆಹಲಿ ಮತ್ತು ಎನ್​​ಸಿಆರ್​​ ನಿವಾಸಿಗಳಿಗೆ ತೊಂದರೆಯಾಗಲಿದೆ. ಹಿರಿಯ ನಾಗರಿಕರು ಮತ್ತು ತುರ್ತು ರೋಗಿಗಳು ಸೇರಿದಂತೆ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಸಂಘಟಕರು ಅರ್ಥ ಮಾಡಿಕೊಳ್ಳಬೇಕೆಂದು ಎಂಬುದು ಪೊಲೀಸರ ಮನವಿಯಾಗಿತ್ತು.

ಇದನ್ನೂ ಓದಿ: ‘ನಾಳೆ ಮಧ್ಯಾಹ್ನದೊಳಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ‘: ಬಿಜೆಪಿಗೆ ಸಿಎಂ ಅರವಿಂದ ಕೇಜ್ರಿವಾಲ್ ಸವಾಲ್​​

ಇತ್ತೀಚೆಗೆ ಜಾಮಿಯಾ ವಿವಿಯಲ್ಲಿ ಅಪ್ರಾಪ್ತ ಯುವಕನೊಬ್ಬ ಗುಂಡು ಹಾರಿಸಿದ ಎರಡು ದಿನಗಳ ಬಳಿಕ ಶಹೀನ್​​ ಬಾಗ್​​ನಲ್ಲೂ ಸಿಎಎ ಮತ್ತು ಎನ್​​ಆರ್​ಸಿ ವಿರೋಧಿ ಪ್ರತಿಭಟನಾಕಾರರ ಮೇಲೆ ಕಿಡಿಗೇಡಿಯೋರ್ವ ಶೂಟೌಟ್​​ ಮಾಡಿದ್ದ. ಈ ಪ್ರಕರಣ ಸಂಬಂಧ ಗುಂಡು ಹಾರಿಸಿದ್ದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಶಹೀನ್​​ ಬಾಗ್​​​ನಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಕಪಿಲ್ ಗುಜ್ಜರ್. ಈತ ಪೊಲೀಸರಿಗೆ ತನ್ನ ಹೆಸರು ಕಪಿಲ್ ಗುಜ್ಜರ್. ಮೂಲತ ಉತ್ತರಪ್ರದೇಶದ ನೋಯಿಡಾ ಬಾರ್ಡರ್​ನಲ್ಲಿರುವ ದಲ್ಲಾಪುರ ಗ್ರಾಮದ ನಿವಾಸಿ ಎಂದು ಹೇಳಿಕೊಂಡಿದ್ದ. ಈ ಶೂಟೌಟ್​​ ಪ್ರಕರಣದ ನಂತರ ಶಹೀನ್​ ಬಾಗ್​​ನಲ್ಲಿ ಇನ್ನಷ್ಟೂ ಬಿಗಿ ಪೊಲೀಸ್​ ಬಂದೋಬಸ್ತ್​​ ಮಾಡಲಾಯ್ತು.
First published: February 4, 2020, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories