• Home
  • »
  • News
  • »
  • national-international
  • »
  • PM Narendra Modi: ನೋಟುಗಳ ಮೇಲೆ ಮೋದಿ ಚಿತ್ರ ಮುದ್ರಿಸಲು ಆಗ್ರಹಿಸಿದ ಬಿಜೆಪಿ ಶಾಸಕ

PM Narendra Modi: ನೋಟುಗಳ ಮೇಲೆ ಮೋದಿ ಚಿತ್ರ ಮುದ್ರಿಸಲು ಆಗ್ರಹಿಸಿದ ಬಿಜೆಪಿ ಶಾಸಕ

ಮೋದಿ

ಮೋದಿ

ಹೊಸ ನೋಟುಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿತ್ರಗಳನ್ನು ಏಕೆ ಮುದ್ರಿಸಬಾರದು ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.

  • Share this:

    ಮುಂಬೈ:  ಬಿಜೆಪಿ ಶಾಸಕ ರಾಮ್ ಕದಮ್ (BJP MLA Ram Kadam) ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಚಿತ್ರವನ್ನು ಭಾರತದ ನೋಟುಗಳಲ್ಲಿ ಛಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಬಾಬಾಸಾಹೇಬ್ ಅಂಬೇಡ್ಕರ್, ಶಿವಾಜಿ, ವಿನಾಯಕ ದಾಮೋದರ್ ಸಾವರ್ಕರ್ ಅವರ ಫೋಟೊಗಳನ್ನು ಸಹ ನೋಟುಗಳ ಮೇಲೆ ಮುದ್ರಿಸುವಂತೆ ಅವರು ಆಗ್ರಹಿಸಿದ್ದಾರೆ. 200 ರೂ. ನೋಟಿನ ಮೇಲೆ ಛತ್ರಪತಿ ಶಿವಾಜಿ ಅವರ ಚಿತ್ರವನ್ನು ಸೇರಿಸಿ ಎಡಿಟ್ ಮಾಡಿ ಬಿಜೆಪಿ ನಾಯಕ ನಿತೇಶ್ ರಾಣೆ (BJP Leader Nitesh Rane) ವಿವಾದ ಸೃಷ್ಟಿಸಿದ್ದಾರೆ.


    ಅಲ್ಲದೇ, ಹೀಗೆ ಛತ್ರಪತಿ ಶಿವಾಜಿಯವರ (Chhatrapati Shivaji) ಚಿತ್ರ ಫೋಟೋಶಾಪ್ ಮಾಡಿದ ಚಿತ್ರಕ್ಕೆ’ಇದು ಪರ್ಫೆಕ್ಟ್ ಎಂದು ಕ್ಯಾಪ್ಷನ್ ನೀಡುವ ಮೂಲಕ ಅವರು ವಿವಾದದ ಕಾವನ್ನು ಹೆಚ್ಚಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಭಾರತದ ಕರೆನ್ಸಿಗಳ ಮೇಲೆ ಗಣೇಶ ಮತ್ತು ಲಕ್ಷ್ಮೀದೇವಿಯ ಚಿತ್ರಗಳನ್ನು ಮುದ್ರಿಸಬೇಕು ಎಂದು ಮನವಿ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕ ನಿತೇಶ್ ರಾಣೆ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.



    ಇಷ್ಟೇ ಅಲ್ಲದೇ, ಹೊಸ ನೋಟುಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿತ್ರಗಳನ್ನು ಏಕೆ ಮುದ್ರಿಸಬಾರದು ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.


    ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
    ಭಾರತದ ಕರೆನ್ಸಿ ಮೇಲೆ ಗಣೇಶ ಮತ್ತು ಲಕ್ಷ್ಮೀ ದೇವಿಯರ ಚಿತ್ರಗಳನ್ನು ಛಾಪಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಇರಿಸಿ, ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಹೊಂದಿರುವ ಭಾರತೀಯ ಕರೆನ್ಸಿ ನೋಟುಗಳನ್ನು ಪರಿಚಯಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.  


    ಇದನ್ನೂ ಓದಿ: Oldest Doctor: ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಹಿರಿಯ ವೈದ್ಯ!


    ಇದೇ ಪರಿಕಲ್ಪನೆಯನ್ನು ಅನುಸರಿಸುವ ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದ ಉದಾಹರಣೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.


    ಇಂಡೋನೇಷ್ಯಾದಲ್ಲಿ ಸಾಧ್ಯವಾದದ್ದು ಭಾರತದಲ್ಲೇಕೆ ಸಾಧ್ಯವಿಲ್ಲ?
    ಇಂಡೋನೇಷ್ಯಾದಲ್ಲಿ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಗಣೇಶನ ಚಿತ್ರವಿದೆ. ಅದು ಮುಸ್ಲಿಂ ಬಹುಸಂಖ್ಯಾತರ ದೇಶವಾಗಿದೆ.  ಆ ದೇಶವು 85% ಕ್ಕಿಂತ ಹೆಚ್ಚು ಮುಸ್ಲಿಮರನ್ನು ಹೊಂದಿದೆ.ಆದರೂ ಇಂಡೋನೇಷ್ಯಾದಲ್ಲಿ ನೋಟುಗಳ ಮೇಲೆ ಗಣೇಶನ ಚಿತ್ರ ಮುದ್ರಿಸಲಾಗಿದೆ. ಆ ದೇಶದಲ್ಲೇ ಹೀಗೆ ಮಾಡಲು ಸಾಧ್ಯವಾಗುತ್ತದೆ ಎಂದಾದರೆ ಭಾರತದಲ್ಲು ಸಹ ಗಣೇಶ ಮತ್ತು ಲಕ್ಷ್ಮೀ ದೇವಿಯರ ಚಿತ್ರಗಳನ್ನು ನೋಟುಗಳ ಮೇಲೆ ಮುದ್ರಿಸಬಹುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.


    ಇದನ್ನೂ ಓದಿ: Kedarnath: ಕೇದಾರನಾಥ ದೇಗುಲಕ್ಕೆ 230 ಕೆಜಿ ಚಿನ್ನದ ಹೊದಿಕೆ!


    ದೇವರ ಆಶೀರ್ವಾದ ಬೇಕೇಬೇಕು
    ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನಮ್ಮ ಕರೆನ್ಸಿಯಲ್ಲಿ ಅಥವಾ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಅಳವಡಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ ದೆಹಲಿ ಮುಖ್ಯಮಂತ್ರಿ.


    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ
    ನಮ್ಮ ನೋಟುಗಳಲ್ಲಿ ಲಕ್ಷ್ಮಿ-ಗಣೇಶನ ಫೋಟೋ ಇದ್ದರೆ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ. ನಾನು ಈ ಬಗ್ಗೆ ಎರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.


    ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ವಿಷಾದಿಸಿದ ದೆಹಲಿ ಸಿಎಂ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವ ಮೂಲಕ ದೇಶವು ಸೂಕ್ಷ್ಮ ಪರಿಸ್ಥಿತಿಯ ಮೂಲಕ ಹಾದುಹೋಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: