ಟಿಎಂಸಿ ಶಾಸಕ ಬಿಸ್ವಾಸ್ ಕೊಲೆ ಪ್ರಕರಣ; ಬಿಜೆಪಿ ನಾಯಕ ಮುಕುಲ್​ ರಾಯ್​ ವಿರುದ್ಧ ಎಫ್​ಐಆರ್ ದಾಖಲು

ಬಿಸ್ವಾಸ್​ ಅವರ ರಕ್ಷಣಾ ಸಿಬ್ಬಂದಿ ಪ್ರಭಾಷ್​ ಮೊಂಡಲ್​ ಶನಿವಾರ ರಜೆ ಪಡೆದಿದ್ದರು. ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿದೆ.

Rajesh Duggumane | news18
Updated:February 10, 2019, 2:55 PM IST
ಟಿಎಂಸಿ ಶಾಸಕ ಬಿಸ್ವಾಸ್ ಕೊಲೆ ಪ್ರಕರಣ; ಬಿಜೆಪಿ ನಾಯಕ ಮುಕುಲ್​ ರಾಯ್​ ವಿರುದ್ಧ ಎಫ್​ಐಆರ್ ದಾಖಲು
ಮುಕುಲ್​ ರಾಯ್​
Rajesh Duggumane | news18
Updated: February 10, 2019, 2:55 PM IST
ಕೊಲ್ಕತಾ (ಫೆ.10): ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ  ಕೃಷ್ಣಗಂಜ್​ನಲ್ಲಿ  ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್​ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಮುಕುಲ್​ ರಾಯ್​ ಹಾಗೂ ಮೂರು ಜನರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಟಿಎಂಸಿ ಹಾಗೂ ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸಿಕೊಳ್ಳುತ್ತಿದೆ. ಹೀಗಿರುವಾಗ ಟಿಎಂಸಿ ಶಾಸಕನ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

“ಕೊಲೆ ಮಾಡಿ ರಾಜಕೀಯ ಮಾಡುವುದು ನಮ್ಮ ಶೈಲಿಯಲ್ಲ. ಈ ವಿಚಾರದಲ್ಲಿ ಟಿಎಂಸಿ ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಮೃತರ ಕುಟುಂಬಕ್ಕೆ ಇದನ್ನು ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯಬೇಕು,” ಎಂದು ರಾಯ್​ ಆಗ್ರಹಿಸಿದ್ದಾರೆ. ಅಚ್ಚರಿಯ ವಿಚಾರ ಎಂದರೆ ರಾಯ್​ ಈ ಮೊದಲು ಟಿಎಂಸಿಯಲ್ಲಿದ್ದರು. 2017ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಗುಂಡಿಕ್ಕಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಶಾಸಕ ಸತ್ಯಜಿತ್​ ಬಿಸ್ವಾಸ್​ ಕೊಲೆ

ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿಕ್​ ಮೊಂಡಲ್​ ಹಾಗೂ ಸುಜಿತ್​ ಎಂಬುವವರನ್ನು ಬಂಧಿಸಲಾಗಿದೆ. ಬಿಸ್ವಾಸ್​ ಅವರ ರಕ್ಷಣಾ ಸಿಬ್ಬಂದಿ ಪ್ರಭಾಷ್​ ಮೊಂಡಲ್​ ಶನಿವಾರ ರಜೆ ಪಡೆದಿದ್ದರು. ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿದೆ. ರಾಜಕೀಯ ದ್ವೇಷದಿಂದಲೇ ಈ ಕೊಲೆ ನಡೆದಿದೆ ಎಂಬುದು ಅವರ ಆರೋಪ.

ಕೊಲ್ಕತಾದಿಂದ 120 ಕಿ.ಮೀ. ದೂರದಲ್ಲಿರುವ ನಾಡಿಯಾ ಜಿಲ್ಲೆಯ ಕೃಷ್ಣಗಂಜ್​ನಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಿಸ್ವಾಸ್​ ಪಾಲ್ಕೊಂಡಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಬಿಸ್ವಾಸ್​ ಅವರಿಗೆ ಗುಂಡು ಹಾರಿಸಲಾಗಿದೆ.​

ಇದನ್ನು ಓದಿ: CBI vs Kolkata Police | ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ನನ್ನು 8 ಗಂಟೆ ವಿಚಾರಣೆ ನಡೆಸಿದ ಸಿಬಿಐ
Loading...

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...