Khushbu Sundar: ಮೋದಿ ಸರ್‌ನೇಮ್ ಬಗ್ಗೆ ಬಿಜೆಪಿಯ ಖುಷ್ಬೂ ಸುಂದರ್ ಹಳೆ ಟ್ವೀಟ್, ಕಾಂಗ್ರೆಸ್ ಟೀಕೆ

ಖುಷ್ಬೂ

ಖುಷ್ಬೂ

ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಖುಷ್ಬೂ ಸುಂದರ್ ವಿರುದ್ಧ ಗುಜರಾತ್ ಸಚಿವ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸುತ್ತಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

  • Trending Desk
  • 3-MIN READ
  • Last Updated :
  • Delhi, India
  • Share this:

ದೆಹಲಿ: ಈಗಾಗಲೇ ವಯನಾಡ್‌ ಸಂಸದ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯ (Lok Sabha Member)  ಸ್ಥಾನದಿಂದ ಶುಕ್ರವಾರ ಅನರ್ಹಗೊಳಿಸಲಾಗಿರುವ ವಿಚಾರ ಇಡೀ ದೇಶಕ್ಕೆ ಗೊತ್ತಾಗಿದೆ. ಸೂರತ್‌ನ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ (Rahul Gandhi) ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿದ 24 ತಾಸುಗಳೊಳಗೆ ಈ ಅನರ್ಹತೆ ನಿರ್ಧಾರ ಕೈಗೊಳ್ಳಲಾಗಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಈಗ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಬಿಜೆಪಿಯ ಖುಷ್ಬೂ ಸುಂದರ್ ಅವರು ಹಿಂದೊಮ್ಮೆ ಕಾಂಗ್ರೆಸ್ ಪಾರ್ಟಿಯ ಸದಸ್ಯೆಯಾಗಿದ್ದಾಗ ಮಾಡಿದ ಟ್ವೀಟ್ ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ನೋಡಿ.


ಖುಷ್ಬೂ ಸಹ ಮೋದಿ ಅವರ ಬಗ್ಗೆ ಟ್ವೀಟ್ ಮಾಡಿದ್ರಂತೆ
ನಟಿ ಮತ್ತು ರಾಜಕಾರಣಿ ತಮ್ಮ ಹಳೆಯ ಟ್ವೀಟ್​ನಲ್ಲಿ ರಾಹುಲ್ ಗಾಂಧಿ ಅವರಂತೆಯೇ ಹೇಳಿಕೆಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿಯ ಉಪನಾಮ ಮೋದಿ ಮತ್ತು "ಮೋದಿ ಎಂದರೆ ಭ್ರಷ್ಟಾಚಾರ" ಎಂದು ಅವರು ಹೇಳಿದ್ದರು. 'ಮೋದಿ' ಎಂಬ ಉಪನಾಮದ ಅರ್ಥವನ್ನು ಈಗ "ಭ್ರಷ್ಟಾಚಾರ" ಎಂದು ಬದಲಾಯಿಸಬೇಕು, ಏಕೆಂದರೆ ಅದು ಈಗ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ಅವರು ಟ್ವೀಟ್‌ ಒಂದನ್ನು ಮಾಡಿದ್ದರು.


"ಎಲ್ಲೇ ನೋಡಿದರೂ ಮೋದಿಯೇ ಕಾಣಿಸುತ್ತಿದ್ದಾರೆ. ನೀವು ಏನು ಮಾಡುತ್ತೀರಿ? ಪ್ರತಿಯೊಂದು ಮೋದಿಯ ಮುಂದೆ ಭ್ರಷ್ಟಾಚಾರದ ಉಪನಾಮವಿದೆ. ಎಂದರೆ ಮೋದಿ ಅರ್ಥವನ್ನು ಭ್ರಷ್ಟಾಚಾರಕ್ಕೆ ಬದಲಾಯಿಸೋಣ. ಚೆನ್ನಾಗಿ ಹೊಂದಿಕೊಳ್ಳುತ್ತದೆ. ನೀರವ್, ಲಲಿತ್, ನಮೋ ಎಂದರೆ ಭ್ರಷ್ಟಾಚಾರ" ಎಂದು ಅವರು ಟ್ವೀಟ್ ಮಾಡಿದ್ದರು.


ಖುಷ್ಬೂ ಅವರ ಹಳೆಯ ಟ್ವೀಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡ ಕಾಂಗ್ರೆಸ್
ಕಾಂಗ್ರೆಸ್ ತನ್ನ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಇನ್ನೂ ಲಭ್ಯವಿರುವ ಖುಷ್ಬೂ ಅವರು ಹಿಂದೆ ಮಾಡಿದ್ದ ಆ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಈಗ ಹಂಚಿಕೊಂಡಿದೆ. ಈಗ ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಖುಷ್ಬೂ ಸುಂದರ್ ವಿರುದ್ಧ ಗುಜರಾತ್ ಸಚಿವ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸುತ್ತಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಇದನ್ನೂ ಓದಿ: Rahul Gandhi: ನನಗೆ ಒಳ್ಳೆಯ ಪ್ರಶ್ನೆಗಳನ್ನು ಕೇಳಿ, ಪತ್ರಕರ್ತನನ್ನು ಹಂಗಿಸಿ ಟೀಕೆಗೆ ಗುರಿಯಾದ ರಾಹುಲ್ ಗಾಂಧಿ


"ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯವಾದ ಉಪನಾಮವನ್ನು ಏಕೆ ಹೊಂದಿದ್ದಾರೆ?" ಎಂದು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅನರ್ಹತೆಯ ನಂತರ, ರಾಹುಲ್ ಗಾಂಧಿ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.




ಎಂಟು ವರ್ಷ ರಾಹುಲ್ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಸಾಧ್ಯ
ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡದಿದ್ದರೆ ಕಾಂಗ್ರೆಸ್ ನಾಯಕ ಎಂಟು ವರ್ಷಗಳ ಕಾಲ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ ಎಂದು ಚುನಾವಣಾ ಕಾನೂನುಗಳ ತಜ್ಞರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಇದನ್ನೂ ಓದಿ: Rahul Gandhi: ಹೋಗಿ BJP ಬ್ಯಾಡ್ಜ್ ಹಾಕ್ಕೋ! ಪತ್ರಕರ್ತನನ್ನು ಅವಮಾನಿಸಿದ ರಾಹುಲ್ ಗಾಂಧಿ

top videos


    ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ಅನ್ನು ಉಲ್ಲೇಖಿಸಿ, ಅನರ್ಹತೆಯು ಎಂಟು ವರ್ಷಗಳವರೆಗೆ ಇರುತ್ತದೆ. ಈಗ ನ್ಯಾಯಾಲಯವು ವಿಧಿಸಿದ ಜೈಲು ಶಿಕ್ಷೆಯ ಎರಡು ವರ್ಷಗಳು ಮತ್ತು ಕಾನೂನಿನಲ್ಲಿ ಸೂಚಿಸಿದಂತೆ ಬಿಡುಗಡೆಯಾದ ದಿನಾಂಕದಿಂದ ಇನ್ನೂ ಆರು ವರ್ಷಗಳು ಇದರಲ್ಲಿ ಸೇರುತ್ತವೆ.

    First published: