ಅವಲಕ್ಕಿ ತಿನ್ನೋರೆಲ್ಲ ಬಾಂಗ್ಲಾದೇಶದವರಾ? ಸಂಶಯ ವ್ಯಕ್ತಪಡಿಸಿ ಹಾಸ್ಯವಾದ ಬಿಜೆಪಿ ನಾಯಕ

ಬಿಜೆಪಿ ನಾಯಕ ಕೈಲಾಶ್ ವಿಜಯ್​ವರ್ಗೀಯ

ಬಿಜೆಪಿ ನಾಯಕ ಕೈಲಾಶ್ ವಿಜಯ್​ವರ್ಗೀಯ

ಕರ್ನಾಟಕದಲ್ಲಿ ಅವಲಕ್ಕಿಯನ್ನು ಹೆಚ್ಚು ಬಳಸುತ್ತಾರೆ. ಬೆಳಗಿನ ತಿಂಡಿಗೆ ಬಹುತೇಕ ಮಲೆನಾಡಿಗರು ಮತ್ತು ಕರಾವಳಿ ಭಾಗದ ಜನ ಅವಲಕ್ಕಿ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾದರೆ ಇವರೆಲ್ಲರೂ ಬಾಂಗ್ಲಾದೇಶಿಯರು ಎಂದು ಸಂಶಯ ವ್ಯಕ್ತಪಡಿಸಲು ಸಾಧ್ಯವೇ?

  • Share this:

ಇಂದೋರ್​: ಮಧ್ಯಪ್ರದೇಶ ಬಿಜೆಪಿ ಮುಖಂಡ ಕೈಲಾಶ್​ ವಿಜಯ್​ವರ್ಗೀಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ವಿಜಯ್​ವರ್ಗೀಯ ವಿವಾದಕ್ಕೆ ಹೊಸಬರಲ್ಲ. ಆಗಾಗ ಹಾಸ್ಯಾಸ್ಪದ ಮತ್ತು ಖಂಡನಾಸ್ಪದ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕ ಟ್ರೋಲ್​ ಆಗುತ್ತಲೇ ಇರುತ್ತಾರೆ. ಈ ಬಾರಿ ಇವರು ಟ್ರೋಲ್​ ಆಗಿರುವುದು 'ಅವಲಕ್ಕಿ'ಯ ವಿಚಾರಕ್ಕೆ ಎಂದರೆ ನೀವು ನಂಬಲೇಬೇಕು. 


ದೇಶಾದ್ಯಂತ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧದ ಪ್ರತಿಭಟನೆಗಳು ಪ್ರತಿನಿತ್ಯ ನಡೆಯುತ್ತಿದೆ. ಈ ಮದ್ಯೆ, ಇಂದೋರ್​ನಲ್ಲಿ ಸಿಎಎ ಪರ ಬಿಜೆಪಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿದ ವಿಜಯ್​ವರ್ಗೀಯ ಸಂಶಯವೊಂದನ್ನು ವ್ಯಕ್ತಪಡಿಸಿದ್ದಾರೆ. "ನಮ್ಮ ಮನೆ ಕಟ್ಟುವ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಹಲವರು ಕೇವಲ ಅವಲಕ್ಕಿಯನ್ನು ತಿನ್ನುತ್ತಾರೆ. ಅವರನ್ನು ನೋಡಿದರೆ ಬಾಂಗ್ಲಾದೇಶದವರು ಎಂದು ನನಗನಿಸುತ್ತದೆ. ಯಾಕೆಂದರೆ ಅವರು ಅತಿಹೆಚ್ಚು ಅವಲಕ್ಕಿ ಸೇವಿಸುತ್ತಾರೆ," ಎಂದು ವಿಜಯ್​ವರ್ಗೀಯ ಹೇಳಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಜಯ್​ವರ್ಗೀಯರನ್ನು ಹಾಸ್ಯಾಸ್ಪದವಾಗಿ ಕಾಣಲಾಗುತ್ತಿದೆ.


From now onwards Poha is also anti national 😔😤🥱😅😔



ಟ್ವಿಟ್ಟರ್​ನಲ್ಲಿ ಶುಕ್ರವಾರ ಬೆಳಗಿನಿಂದಲೇ #Poha (ಅವಲಕ್ಕಿ) ಟ್ರೆಂಡ್​ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸುತ್ತಿದ್ದಾರೆ. ಅವಲಕ್ಕಿಗೆ ಹಿಂದಿ ಭಾಷೆಯಲ್ಲಿ ಪೋಹಾ ಎನ್ನುತ್ತಾರೆ. ಮತ್ತು ದಕ್ಷಿಣ ಭಾರತದಂತೆ ಉತ್ತರ ಭಾರತದಲ್ಲೂ ಅವಲಕ್ಕಿ ಖ್ಯಾತಿ ಪಡೆದಿದೆ. ವಾರಕ್ಕೆ ಒಂದೆರಡು ದಿನವಾದರೂ ಬೆಳಗಿನ ತಿಂಡಿಗೆ ಪೋಹಾ ಇದ್ದೇ ಇರುತ್ತದೆ. ಮತ್ತು ಇಂದೋರ್​ನ ಪೋಹಾ ದೇಶದಲ್ಲೇ ಪ್ರಸಿದ್ಧ. ಹೀಗಿರುವಾಗ ಇಂದೋರ್​ನ ಮೂಲದವರೇ ಆದ ವಿಜಯ್​ವರ್ಗೀಯ ಅವಲಕ್ಕಿ ತಿನ್ನುವವರು ಬಾಂಗ್ಲಾದೇಶಿಗರು ಎಂಬ ಸಂಶಯ ವ್ಯಕ್ತಪಡಿಸಿರುವುದು ಸಾಕಷ್ಟು ಖಂಡನೆಗೆ ಗುರಿಯಾಗಿದೆ.


ಕರ್ನಾಟಕದಲ್ಲಿ ಅವಲಕ್ಕಿಯನ್ನು ಹೆಚ್ಚು ಬಳಸುತ್ತಾರೆ. ಬೆಳಗಿನ ತಿಂಡಿಗೆ ಬಹುತೇಕ ಮಲೆನಾಡಿಗರು ಮತ್ತು ಕರಾವಳಿ ಭಾಗದ ಜನ ಅವಲಕ್ಕಿ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾದರೆ ಇವರೆಲ್ಲರೂ ಬಾಂಗ್ಲಾದೇಶಿಯರು ಎಂದು ಸಂಶಯ ವ್ಯಕ್ತಪಡಿಸಲು ಸಾಧ್ಯವೇ? ಎಂಬ ಪ್ರಶ್ನೆಗಳೂ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ಒಂದರ್ಥದಲ್ಲಿ ಹೀಗಾದರೂ ಭಾರತದ ತಿಂಡಿಯೊಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಮೂಲಕ ವಿದೇಶೀಯರನ್ನು ತಲುಪುತ್ತಿದೆ ಎಂಬುದಷ್ಟೇ ಸಂತಸದ ವಿಷಯ.


















Published by:Sharath Sharma Kalagaru
First published: