ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಪಾಸಿಟಿವ್‌; ದೆಹಲಿ ಆಸ್ಪತ್ರೆಗೆ ದಾಖಲು

ಕಳೆದ ನಾಲ್ಕು ದಿನಗಳಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೊರೋನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಆದರೆ, ಅವರ ತಾಯಿ ಮಾಧವಿ ರಾಜೆ ಸಿಂಧಿಯಾ ಅವರಲ್ಲಿ ಎಸಿಂಪ್ಟಮ್ (asymptomatic) ಕಾಣಿಸಿಕೊಂಡಿದೆ. ಕೊನೆಗೆ ಇಂದು ಇಬ್ಬರೂ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಿದ ನಂತರ ಇಬ್ಬರೂ ಕೊರೋನಾ ಸೋಂಕಿಗೆ ತುತ್ತಾಗಿರುವುದು ಖಚಿತವಾಗಿದೆ.

ಜ್ಯೋತಿರಾದಿತ್ಯ ಸಿಂಧಿಯಾ.

ಜ್ಯೋತಿರಾದಿತ್ಯ ಸಿಂಧಿಯಾ.

  • Share this:
ದೆಹಲಿ (ಜೂನ್‌ 09); ಮಧ್ಯಪ್ರದೇಶದ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಅವರ ತಾಯಿ ಮಾಧವಿ ರಾಜೆ ಸಿಂದಿಯಾ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ದಕ್ಷಿಣ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ನಾಲ್ಕು ದಿನಗಳಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೊರೋನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಆದರೆ, ಅವರ ತಾಯಿ ಮಾಧವಿ ರಾಜೆ ಸಿಂಧಿಯಾ ಅವರಲ್ಲಿ ಎಸಿಂಪ್ಟಮ್ (asymptomatic) ಕಾಣಿಸಿಕೊಂಡಿದೆ. ಕೊನೆಗೆ ಇಂದು ಇಬ್ಬರೂ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಿದ ನಂತರ ಇಬ್ಬರೂ ಕೊರೋನಾ ಸೋಂಕಿಗೆ ತುತ್ತಾಗಿರುವುದು ಖಚಿತವಾಗಿದೆ. ಪರಿಣಾಮ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರಿಗೂ ಸಹ ಕೊರೋನಾ ಸೋಂಕು ತಗುಲಿತ್ತು. ಗುರ್ಗಾಂವ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇನ್ನೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಲ್ಲೂ ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದ್ದು, ಅವರ ಗಂಟಲಿನ ದ್ರವ್ಯವನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಪರೀಕ್ಷೆಯ ವರದಿಗಾಗಿ ಇದೀಗ ಕಾಯಲಾಗುತ್ತಿದೆ.

ಇದನ್ನೂ ಓದಿ : ’ಸಿಎಎ’ ವಿರೋಧಿಸಿದ್ದಕ್ಕಾಗಿ ಬಂಗಾಳದ ಜನ ಮಮತಾರನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ; ಅಮಿತ್‌ ಶಾ ಸವಾಲು
First published: