ಬಿಜೆಪಿ ಹಿರಿಯ ನಾಯಕ ಜಯಂತಿಲಾಲ್​ ಭಾನುಶಾಲಿಯನ್ನು ಗುಂಡಿಕ್ಕಿ ಹತ್ಯೆ

ಅಹಮದಬಾದ್​ನಿಂದ ಭುಜ್​ಗೆ ಸಯಾಜಿ ನಗರಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಶಾಸಕರು ಪ್ರಯಾಣಿಸುವಾಗ ಅಪರಿಚಿತರ ಗುಂಪು ಈ ದಾಳಿ ಮಾಡಿದ್ದಾರೆ. ಭಾನುಶಾಲಿ ಅವರ ಎದೆ ಹಾಗೂ ಕಣ್ಣಿನ ಭಾಗಕ್ಕೆ ಎರಡು ಗುಂಡು ಹೊಕ್ಕಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.

Seema.R | news18
Updated:January 8, 2019, 10:41 AM IST
ಬಿಜೆಪಿ ಹಿರಿಯ ನಾಯಕ ಜಯಂತಿಲಾಲ್​ ಭಾನುಶಾಲಿಯನ್ನು ಗುಂಡಿಕ್ಕಿ ಹತ್ಯೆ
ಜಯಂತಿಲಾಲ್​ ಭಾನುಶಾಲಿ
  • News18
  • Last Updated: January 8, 2019, 10:41 AM IST
  • Share this:
ಸೂರತ್​ (ಜ.8): ಗುಜರಾತ್​ನ ಹಿರಿಯ ಬಿಜೆಪಿ ನಾಯಕ ಜಯಂತಿಲಾಲ್​ ಭಾನುಶಾಲಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಹಮದಬಾದ್​ನಿಂದ ಭುಜ್​ಗೆ ಸಯಾಜಿ ನಗರಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಮಾಜಿ ಶಾಸಕರು ಪ್ರಯಾಣಿಸುವಾಗ ಅಪರಿಚಿತರ ಗುಂಪು ಈ ದಾಳಿ ಮಾಡಿದ್ದಾರೆ. ಭಾನುಶಾಲಿ ಅವರ ಎದೆ ಹಾಗೂ ಕಣ್ಣಿನ ಭಾಗಕ್ಕೆ ಎರಡು ಗುಂಡು ಹೊಕ್ಕಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಅಬ್ಡಸ ಕ್ಷೇತ್ರದ  ಮಾಜಿ ಶಾಸಕರಾಗಿದ್ದ ಭಾನುಶಾಲಿ, ಕಚ್​ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಇತ್ತೀಚೆಗೆ ಸೂರತ್​ನ ಯುವತಿಯೊಬ್ಬಳು ಇವರ ಮೇಲೆ ಅತ್ಯಾಚಾರದ ಆರೋಪವನ್ನು ಮಾಡಿದ್ದರು. ಗುಜರಾತ್​ ಹೈ ಕೋರ್ಟ್​ನಲ್ಲಿಯೂ ಹೇಳಿಕೆ ದಾಖಲಿಸಿದ ಯುವತಿ ಇತ್ತೀಚೆಗೆ ಈ ಪ್ರಕರಣವನ್ನು ಮುನ್ನಡೆಸುವ ಉದ್ದೇಶ ತನಗೆ ಇಲ್ಲ ಎಂದು ಪ್ರಕರಣದಿಂದ ಹಿಂದೆ ಸರಿದಿದ್ದಳು. ಇದನ್ನು ಓದಿ: ಮಗಳ ಮೇಲೆ ತಂದೆ ನಿರಂತರ ಅತ್ಯಾಚಾರ: ಆರೋಪಿ ಪೊಲೀಸ್​​ ವಶಕ್ಕೆ ಏನಿದು ಪ್ರಕರಣ? ಸೂರತ್​ನ ಯುವತಿಯೊಬ್ಬಳು ಫ್ಯಾಷನ್​ಗ ಡಿಸೈನ್​ ಕೋರ್ಸ್​ಗೆ ಸೇರಬೇಕೆಂಬ ಉದ್ದೇಶದಿಂದ ಸಂಬಂಧಿಕರೊಬ್ಬರ ಮೂಲಕ ಭಾನುಶಾಲಿ ಅವರನ್ನು ಭೇಟಿಯಾಗಿದ್ದಳು. ಆಡ್ಮಿಷನ್​ ಕೊಡಿಸುವುದಾಗಿ ಯುವತಿಯನ್ನು ಭಾನುಶಾಲಿ ಅಹಮದಬಾದ್​ಗೆ ಕರೆಸಿದ್ದರು. ಈ ವೇಳೆ ಅವರ ಜೊತೆ ಕಾರ್​ನಲ್ಲಿ ಹೋಗಬೇಕಾದರೆ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿ ಭಾನುಶಾಲಿ ಅತ್ಯಾಚಾರ ಎಸಗಿದ್ದರು ಎಂದು ಯುವತಿ ಸೂರತ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಈ ಕುರಿತು ಸೂರತ್​ನ  ಅಪರಾಧ ವಿಭಾಗ ತನಿಖೆ ನಡೆಸಿತು.
First published: January 8, 2019, 9:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading