HOME » NEWS » National-international » BJP LEADER HIS FATHER AND BROTHER SHOT DEAD BY MILITANTS IN JAMMU AND KASHMIRS BANDIPORA SECURITY GUARDS ARRESTED LG

Kashmir Terror Attack: ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಮತ್ತವರ ಕುಟುಂಬದವರನ್ನು ಹತ್ಯೆ ಮಾಡಿದ ಉಗ್ರರು

ಘಟನೆ ವಿಷಯ ತಿಳಿದ ಪ್ರಧಾನಿ ನರೇಂದ್ರ ಮೋದಿ ತಡರಾತ್ರಿಯೇ ದೂರವಾಣಿ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಉಗ್ರರ ದಾಳಿಗೆ ಬಲಿಯಾದ ಬಿಜೆಪಿ ನಾಯಕ ವಾಸೀಂ ಮತ್ತವರ ಕುಟುಂಬಸ್ಥರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಟ್ವೀಟ್ ಮಾಡಿದ್ದಾರೆ.

news18-kannada
Updated:July 9, 2020, 9:17 AM IST
Kashmir Terror Attack: ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಮತ್ತವರ ಕುಟುಂಬದವರನ್ನು ಹತ್ಯೆ ಮಾಡಿದ ಉಗ್ರರು
ಬಿಜೆಪಿ ನಾಯಕ ವಾಸೀಂ ಬರಿ
  • Share this:
ನವದೆಹಲಿ(ಜು.09): ಬುಧವಾರ ತಡರಾತ್ರಿ ಕೇಂದ್ರಾಡಳಿತ ಪ್ರದೇಶದ ಬಂದಿಪೋರ್​​​ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಶೈಖ್​ ವಾಸೀಂ ಬರಿ, ಅವರ ತಂದೆ ಮತ್ತು ಸಹೋದರನನ್ನು ಹತ್ಯೆ ಮಾಡಿದ್ದಾರೆ.

ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಬಿಜೆಪಿ ನಾಯಕ ವಾಸೀಂ ಮತ್ತು ಮತ್ತವರ ಕುಟುಂಬಸ್ಥರು ಸ್ಥಳೀಯ ಪೊಲೀಸ್​ ಠಾಣೆಯ ಶಾಪ್​​ವೊಂದರ ಹೊರಗಡೆ ಕುಳಿತಿದ್ದರು. ಈ ವೇಳೆ ಉಗ್ರರು ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿ ಬಳಿಕ ತೀವ್ರ ಗಾಯಗೊಂಡ ಅವರನ್ನು ಕೂಡಲೇ ಬಂದಿಪೋರ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಆ ಮೂವರು ಸಹ ಸಾವನ್ನಪ್ಪಿದ್ದರು ಎನ್ನಲಾಗಿದೆ.

ದಾಳಿ ನಂತರ ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ಬಿಜೆಪಿ ನಾಯಕ ವಾಸೀಂ ಅವರ 10 ಮಂದಿ ಆಪ್ತ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಬಾಗಲಕೋಟೆ ಜಿ.ಪಂ. ಅಧ್ಯಕ್ಷೆ

ಘಟನೆ ವಿಷಯ ತಿಳಿದ ಪ್ರಧಾನಿ ನರೇಂದ್ರ ಮೋದಿ ತಡರಾತ್ರಿಯೇ ದೂರವಾಣಿ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಉಗ್ರರ ದಾಳಿಗೆ ಬಲಿಯಾದ ಬಿಜೆಪಿ ನಾಯಕ ವಾಸೀಂ ಮತ್ತವರ ಕುಟುಂಬಸ್ಥರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಟ್ವೀಟ್ ಮಾಡಿದ್ದಾರೆ.

 


ಉಗ್ರರು ಬಂದಿಪೋರ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಶೈಖ್ ವಾಸಿಂ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ವಾಸಿಂ ಬರಿ, ಅವರ ತಂದೆ ಬಶೀರವ್ ಅಹಮದ್ ಮತ್ತವರ ಸಹೋದರ ಉಮರ್ ಬಶೀರ್ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ತೀವ್ರ ಗಾಯಗೊಂಡಿದ್ದರಿಂದ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್​ ಟ್ವೀಟ್ ಮಾಡಿ, ಇದು ಆಘಾತಕಾರಿ ಮತ್ತು ದುಃಖದ ವಿಷಯ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
Published by: Latha CG
First published: July 9, 2020, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories