• Home
  • »
  • News
  • »
  • national-international
  • »
  • Varanasi: ಬಿಯರ್ ಕುಡಿದು ರಂಪಾಟ, ತಡೆಯಲು ಬಂದ ಬಿಜೆಪಿ ನಾಯಕನ ಥಳಿಸಿ ಹತ್ಯೆ!

Varanasi: ಬಿಯರ್ ಕುಡಿದು ರಂಪಾಟ, ತಡೆಯಲು ಬಂದ ಬಿಜೆಪಿ ನಾಯಕನ ಥಳಿಸಿ ಹತ್ಯೆ!

ಹತ್ಯೆಗೀಡಾದ ಬಿಜೆಪಿ ನಾಯಕನ ಮನೆ

ಹತ್ಯೆಗೀಡಾದ ಬಿಜೆಪಿ ನಾಯಕನ ಮನೆ

ಜೈ ಪ್ರಕಾಶ್ ನಗರ ಕಾಲೋನಿಯ ಬಿಯರ್ ಶಾಪ್‌ನ ಹೊರಗೆ ಕೆಲ ಹುಚ್ಚು ಯುವಕರು ಬಿಯರ್ ಕುಡಿದು ಗಲಾಟೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿ ವಾಸವಾಗಿರುವ ಬಿಜೆಪಿ ಪ್ರಾದೇಶಿಕ ಕಾರ್ಯಕಾರಿ ಸಮಿತಿ ಸದಸ್ಯ ಪಶುಪತಿ ನಾಥ್ ಸಿಂಗ್ ಅವರ ಪುತ್ರ ರಾಜನ್ ಯುವಕರನ್ನು ತಡೆಯಲು ಹೋದಾಗ ಯುವಕರು ಥಳಿಸಿದ್ದಾರೆ. ತಂದೆ ಪಶುಪತಿ ನಾಥ್ ಮಗನ ರಕ್ಷಣೆಗೆ ಮುಂದಾದರು, ಆದರೆ ಸುಮ್ಮನಾಗದ ಕುಡುಕರು ಅವರನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Varanasi [Benares], India
  • Share this:

ವಾರಾಣಸಿ(ಅ.13): ಬಿಯರ್ ಕುಡಿದು ಗಲಾಟೆ ಸೃಷ್ಟಿಸುತ್ತಿದ್ದ ಯುವಕರನ್ನು ತಡೆಯುವ ಯತ್ನ ಬಿಜೆಪಿ ಮುಖಂಡನ (BJP Leader) ಬಾಳಿಗೆ ಮುಳುವಾಗಿದೆ. ಮನಬಾದ್ ಯುವಕರ ಬಿಜೆಪಿ ಮುಖಂಡ ಪಶುಪತಿ ನಾಥ್ (Pashupatinath) ಅವರನ್ನು ಹೊಡೆದು ಕೊಂದಿದ್ದಾರೆ. ಹತ್ಯೆಯ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿಗಳ ಪತ್ತೆಗೆ 5 ತಂಡಗಳನ್ನು ರಚಿಸಲಾಗಿದೆ. ಹೌದು ಜೈ ಪ್ರಕಾಶ್ ನಗರ ಕಾಲೋನಿಯ ವಿಷಯ ಏನೆಂದರೆ, ಬಿಯರ್ ಶಾಪ್‌ನ (Beer Shop)ಹೊರಗೆ ಕೆಲ ಹುಚ್ಚ ಯುವಕರು ಬಿಯರ್ ಕುಡಿದು ಗಲಾಟೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿ ವಾಸವಾಗಿರುವ ಬಿಜೆಪಿ ಪ್ರಾದೇಶಿಕ ಕಾರ್ಯಕಾರಿ ಸಮಿತಿ ಸದಸ್ಯ ಪಶುಪತಿ ನಾಥ್ ಸಿಂಗ್ ಅವರ ಪುತ್ರ ರಾಜನ್ ಯುವಕರನ್ನು ತಡೆಯಲು ಮುಂದಾಗಿದ್ದಾರೆ. ಹೀಗಿರುವಾಗ ತಂದೆ ಪಶುಪತಿ ನಾಥ್ ಮಗನ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ನಡೆದ ಹಲ್ಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.


ವಯಸ್ಸೂ ನೋಡದೆ ಥಳಿಸಿದ ಯುವಕರು


ತಡೆಯಲು ಬಂದ ಪಶುಪತಿ ನಾಥ್ ಸಿಂಗ್ ಮೇಲೆ ಕೋಪಗೊಂಡ ಯುವಕರು 72 ವರ್ಷದ ಪಶುಪತಿ ಸಿಂಗ್ ಅವರ ವಯಸ್ಸನ್ನೂ ಸಹ ನೋಡದೆಕುಡಿದ ಅಮಲಿನಲ್ಲಿ ಇಟ್ಟಿಗೆಗಳಿಂದ ಹೊಡೆಯಲು ಪ್ರಾರಂಭಿಸಿದರು. ಇದರಿಂದ ತಂದೆ-ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಟುಂಬದವರು ಮತ್ತು ಸ್ಥಳೀಯರು ಇಬ್ಬರನ್ನೂ ಟ್ರಾಮಾ ಸೆಂಟರ್‌ಗೆ ಕರೆದೊಯ್ದರು, ಅಲ್ಲಿ ವೈದ್ಯರು ಪಶುಪತಿ ಸಿಂಗ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.


ಇದನ್ನು ಓದಿ: ಕೇರಳ ಪ್ರವಾಸ ನಡೆಸಿದರೆ, ಈ 3 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ


ಆರೋಪಿಗಳ ಬಂಧನಕ್ಕೆ 5 ತಂಡಗಳನ್ನು ರಚಿಸಲಾಗಿತ್ತು


ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ ಎಂದು ವಾರಣಾಸಿ ಪೊಲೀಸ್ ಆಯುಕ್ತ ಸತೀಶ್ ಗಣೇಶ್ ತಿಳಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕೆಲ ಯುವಕರು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಹಿರಿಯ ಪಶುಪತಿ ನಾಥ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಫೊರೆನ್ಸಿಕ್ ತಂಡದಿಂದ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಿದ್ದಾರೆ. ನಂತರ ನಿರಂತರ ದಾಳಿ ನಡೆಸಲಾಗುತ್ತಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬಹುದು. ಮೃತ ಬಿಜೆಪಿ ಮುಖಂಡ ಪಶುಪತಿ ಅವರ ಜಮೀನಿನಲ್ಲಿ ಬಿಯರ್ ಶಾಪ್ ಇತ್ತು, ಅವರು ಬಾಡಿಗೆಗೆ ನೀಡಿದ್ದರು.


100 ವರ್ಷದ ಹಿಂದೆ ಕಾಶಿ ತೊರೆದಿದ್ದ ಅನ್ನಪೂರ್ಣೆ ಮರಳಿ ವಾರಾಣಸಿಗೆ


ಕಾಶಿ (Kashi ) ವಿಶ್ವನಾಥನ ಸನ್ನಿಧಿಯಲ್ಲಿದ್ದ ಅನ್ನಪೂರ್ಣೆಯ ವಿಗ್ರಹ ಕಡೆಗೂ ವಾರಾಣಸಿ (Varanasi) ತಲುಪಿದೆ. ಅನ್ನಪೂರ್ಣೆ ವಿಗ್ರಹ ಮತ್ತೆ ರಾಜ್ಯಕ್ಕೆ ಮರಳಿರುವುದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ​  ಹರ್ಷ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: 720ಕ್ಕೆ 720 ಅಂಕ ಪಡೆದ ಮೃಣಾಲ್ ಪ್ರತಿದಿನ ಅಭ್ಯಸಿಸಿದ್ದು ಕೇವಲ 4 ಗಂಟೆ..!


ಈ ಕುರಿತು ಮಾತನಾಡಿದ ಅವರು 100 ವರ್ಷಗಳ ಹಿಂದೆ ಕಾಶಿಯಿಂದ ಕಳವಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಅಂತಿಮವಾಗಿ ಅದರ ತವರು ವಾರಣಾಸಿಗೆ ಹಿಂತಿರುಗಿಸಲಾಗುತ್ತಿದೆ. ಸುಮಾರು ಒಂದು ಶತಮಾನದ ಹಿಂದೆ ಭಾರತದಿಂದ ಕಳವು ಮಾಡಲಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾದಿಂದ ಮರಳಿ ತರಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಅದರಂತೆ ಇಂದು ವಿಗ್ರಹ ನಮ್ಮ ರಾಜ್ಯಕ್ಕೆ ತಲುಪಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Published by:Precilla Olivia Dias
First published: