ಸ್ಟಾರ್ ಸಂಸದೆಯಾಗಿರುವ ನುಸ್ರತ್ ಜಹಾನ್ 2019ರಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಟರ್ಕಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆ ಬಳಿಕ ಸಂಸತ್ನಲ್ಲಿ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಅವರು, ನಾನು ನುಸ್ರತ್ ಜಹಾನ್ ರುಹಿ ಜೈನ್ ಎಂದೇ ಪರಿಚಯಿಸಿಕೊಂಡಿದ್ದರು. ಆ ಮೂಲಕ ನಿಖಿಲ್ ಜೈನ್ ಜೊತೆ ಮದುವೆಯಾಗಿರುವುದನ್ನು ತಿಳಿಸಿದ್ದರು. ಆದರೆ, ಈಗ ಸ್ಟಾರ್ ಸಂಸದೆ, ಟರ್ಕಿ ಕಾನೂನು ಪ್ರಕಾರದ ತಮ್ಮ ಈ ಮದುವೆ ಭಾರತದ ಕಾನೂನಿನ ಪ್ರಕಾರ ಮಾನ್ಯವಲ್ಲ. ನಾವು ಲಿವಿಂಗ್ ಇನ್ ರಿಲೇಷನ್ ಶಿಪ್ನಲ್ಲಿದ್ದೇವು ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ, ಹಾಗಾದ್ರೆ ಸಂಸದರು ಸಂಸತ್ನಲ್ಲಿ ಸುಳ್ಳು ಹೇಳಿದ್ರಾ ಎಂದು ಅವರ ಪ್ರಮಾಣವಚನದ ವಿಡಿಯೋ ಹಾಕಿ ಪ್ರಶ್ನಿಸಿದ್ದಾರೆ.
ಬಸ್ರಿಹತ್ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದ ಬಳಿಕ ನುಸ್ರತ್ ಮದುವೆಯಾದ ಬಳಿಕ ಪ್ರಮಾಣವಚನ ಸ್ವೀಕರಿಸಿದ ಅವರು, ಇದೇ ವೇಳೆ ಸಿಂಧೂರ ಇಟ್ಟು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಅಂತರ ಧರ್ಮೀಯ ಇವರ ವಿವಾಹ ಸಾಕಷ್ಟು ಸುದ್ದಿ ಮಾಡಿತ್ತು. ಇದಾದ ಬಳಿಕವೂ ಮಾತನಾಡಿದ ಅವರು, ನಮ್ಮ ಪ್ರೀತಿ ಧರ್ಮವನ್ನು ಮೀರಿದ್ದು. ತಾನು ಮುಸ್ಲಿಮ್ ಆದರೂ ಎಲ್ಲಾ ಧರ್ಮಕ್ಕೂ ತಲೆಬಾಗುತ್ತೇನೆ ಎಂದು ಕೂಡ ತಿಳಿಸಿದ್ದರು.
ಆದರೆ, ಈಗ ಅವರ ವಿವಾಹದಲ್ಲಿ ಬಿರುಕು ಮೂಡಿದ್ದು, ಕಳೆದ ನವಂಬರ್ನಲ್ಲಿ ಈ ದಂಪತಿ ದೂರಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾತನಾಡಿರುವ ನುಸ್ರತ್, ನಮ್ಮ ಮದುವೆ ವಿಶೇಷ ವಿವಾಹ ಕಾಯ್ದೆ ಅಡಿ ಬರಲಿದ್ದು, ಭಾರತದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. ಕಾನೂನಿನ ಪ್ರಕಾರ ಅದು ಮದುವೆಯೇ ಅಲ್ಲ, ಆದರೆ, ನಮ್ಮದು ಲೀವಿಂಗ್ ರಿಲೇಷನ್ಶಿಪ್ ಎಂದಿದ್ದಾರೆ,
ಅಷ್ಟೇ ಅಲ್ಲದೇ, ನಿಖಿಲ್ ಜೈನ್ ವಿರುದ್ಧ ಆರೋಪಿಸಿರುವ ನುಸ್ರತ್ ಆಕೆಯ ಒಡವೆ, ವಸ್ತ್ರಗಳನ್ನು ಅಕ್ರವಾಗಿ ಅವರ ಕುಟುಂಬ ಪಡೆದಿತ್ತು, ನಿಖಿಲ್ ತಮ್ಮ ಬ್ಯಾಂಕ್ ಖಾತೆಯನ್ನು ಅಕ್ರಮವಾಗಿ ಬಳಸಿದ್ದಾರೆ. ತಮ್ಮ ಖಾತೆಯಲ್ಲಿನ ಹಣವನ್ನು ಅಕ್ರಮ ಬಳಕೆ ಮಾಡಿದ ಕಾರಣ ಬ್ಯಾಂಕ್ ಗಳ ನೋಟಿಸ್ನ್ನು ನಾನು ಎದುರಿಸಿದ್ದೇನೆ. ಇದಕ್ಕೆ ಪುರಾವೆಗಳು ತನ್ನ ಬಳಿ ಇವೆ ಎಂದಿದ್ದಾರೆ
ಇದನ್ನು ಓದಿ: ಎರಡೇ ವರ್ಷದಲ್ಲಿ ಟಿಎಂಸಿ ಸ್ಟಾರ್ ಸಂಸದೆ ಮದುವೆಯಲ್ಲಿ ಬಿರುಕು; ಅಸಲಿ ಕಾರಣವೇನು?
ಸಂಸದೆಯ ಹೆಸರು ಈಗ ಖ್ಯಾತ ಬಂಗಾಳಿ ನಟ ಯಶ್ ದಾಸ್ ಗುಪ್ತಾ ಅವರ ಹೆಸರಿನ ಜತೆ ತಳುಕು ಹಾಕಿಕೊಂಡಿದೆ. ಅಷ್ಟೇ ಅಲ್ಲದೇ, ಗರ್ಭಿಣಿಯಾಗಿರುವ ಸಂಸದೆಯಾಗಿರುವ ಅವರ ಮಗು ನಿಖಿಲ್ ಜೈನ್ ಅವರದು ಎಲ್ಲಾ ಎಂಬ ಆಪಾದನೆಗಳು ಕೇಳಿ ಬಂದಿದೆ. ನುಸ್ರತ್ ಮಾತ್ರ ನಟ ಯಶ್ ದಾಸ್ ಗುಪ್ತಾ ವಿಚಾರವಾಗಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ನಟಿ, ಸಂಸದೆ ನುಸ್ರತ್ ಜೊತೆಗಿನ ಮದುವೆ ಸಂಬಂಧ ಮುರಿದು ಬಿದ್ದ ಕುರಿತು ಉದ್ಯಮಿ ನಿಖಿಲ್ ಜೈನ್ ಯಾವುದೇ ಹೇಳಿಕೆ ನೀಡಿಲ್ಲ. ಬದಲಾಗಿ ಈ ಸಂಬಂಧ ಕುರಿತ ಇತ್ಯರ್ಥ ಮಾಡಿಕೊಂಡಿದ್ದು, ತಾವು 2020ರಿಂದಲೇ ನುಸ್ರತ್ನಿಂದ ದೂರಾಗಿರುವುದಾಗಿ ತಿಳಿಸಿದ್ದಾರೆ. ಆದರೆ, ಸಬ್ ಜ್ಯೂಡಿಶಿಯಲ್ ನ್ಯಾಯಾಲಯದಲ್ಲಿ ಇವರಿನ್ನರ ಪ್ರಕರಣ ನಡೆಯುತ್ತಿದ್ದು, ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ