ಬಿಜೆಪಿಯ ’ಜನ ಆಶೀರ್ವಾದ ಯಾತ್ರೆ’ ಕೋವಿಡ್​ ಮೂರನೇ ಅಲೆಗೆ ಕಾರಣವಾಗಲಿದೆ: ಶಿವಸೇನೆ ಸಂಸದ ರಾವತ್​ ಕಿಡಿ

ಮುಂದಿನ ದಿನಗಳಲ್ಲಿ ಠಾಕ್ರೆ ದೇಶದ ಅಗ್ರ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಕರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಠಾಕ್ರೆ ಸಾರ್ವಜನಿಕರಿಂದ ಅತ್ಯಂತ  ಕಡಿಮೆ ಟೀಕೆಗೆ ಒಳಗಾದ ವ್ಯಕ್ತಿ ಹಾಗೂ ಜನರಿಂದ ತಮ್ಮ ಕೆಲಸಗಳಿಗೆ ಹೊಗಳಿಸಿಕೊಂಡಿದ್ದಾರೆ ಎಂದು ರಾವತ್​ ಹೇಳಿದರು.

ಸಂಜಯ್ ರಾವತ್

ಸಂಜಯ್ ರಾವತ್

 • Share this:
  ಶಿವಸೇನಾ ಸಂಸದ ಸಂಜಯ್ ರಾವತ್​ ಬುಧವಾರ ವಿವಿಧ ರಾಜ್ಯಗಳಲ್ಲಿ ಹಲವಾರು ಕಡೆ ಬಿಜೆಪಿಯ ಕೇಂದ್ರ ಸಚಿವರು ನಡೆಸುತ್ತಿರುವ 'ಜನ್ ಆಶೀರ್ವಾದ್ ಯಾತ್ರೆ' "ಕೋವಿಡ್ -19 ರ ಮೂರನೇ ಅಲೆಗೆ ಆಹ್ವಾನ" ನೀಡುತ್ತಿದೆ ಎಂದು ಕೇಂದ್ರ ಸರ್ಕಾರದ ಧೋರಣೆ ವಿರುದ್ದ ಚಾಟಿ ಬೀಸಿದ್ದಾರೆ.

  ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಅವರು ಅಧಿಕಾರದಲ್ಲಿ ಇರುವ ಪಕ್ಷ ತಾಳ್ಮೆಯಿಂದ ವರ್ತಿಸಬೇಕು ಅಲ್ಲದೇ, ಜನರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕು, ಇದು ನಾನು ಬಿಜೆಪಿಗೆ ಹೇಳುತ್ತಿರುವ ಕಿವಿ ಮಾತು ಎಂದು ಹೇಳಿದರು.

  'ಜನ ಆಶೀರ್ವಾದ ಯಾತ್ರೆ' ಕೋವಿಡ್ -19 ರ ಮೂರನೇ ಅಲೆಗೆ ಆಹ್ವಾನವಾಗಿದೆ. ಬಿಜೆಪಿ ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದೆ, "ಎಂದು ರಾಜ್ಯಸಭಾ ಸದಸ್ಯ ಕಿಡಿಕಾರಿದ್ದಾರೆ.

  ವಿಶೇಷವಾಗಿ ಹೊಸದಾಗಿ ಸಂಪುಟಕ್ಕೆ ಸೇರ್ಪಡೆಗೊಂಡ ಕೇಂದ್ರ ಸಚಿವರಾದ ಭಾರತಿ ಪವಾರ್, ಕಪಿಲ್ ಪಾಟೀಲ್ ಮತ್ತು ಭಗವತ್ ಕರದ್ ಅವರು ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಜನರನ್ನು ತಲುಪಲು 'ಜನ ಆಶೀರ್ವಾದ' ಯಾತ್ರೆಗಳನ್ನು ಕೈಗೊಂಡಿದ್ದರು ಮತ್ತು ಇತ್ತೀಚೆಗೆ ನಡೆದ ಒಂದಷ್ಟು ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸಿದ ಜನರಿಗೆ ಧನ್ಯವಾದ ತಿಳಿಸಲು ಈ ಯೋಜನೆ ಹಾಕಿಕೊಳ್ಳಲಾಗಿದೆ.

  ಕೋವಿಡ್​ ಎರಡನೇ ಅಲೆಯ ಹೊತ್ತಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಿಂದ ಕೊರೋನಾ ವ್ಯಾಪಕವಾಗಿ ಹರಡಿ ಇಡೀ ಜಗತ್ತೇ ಭಾರತದ ಕಡೆಗೆ ನೋಡುವಂತೆ ಮಾಡಿ, ದೇಶದ ಕೆಟ್ಟ ಆರೋಗ್ಯ ವ್ಯವಸ್ಥೆ ಬಟಾಬಯಲಾಗಲು ಕಾರಣವಾಯಿತು, ಈಗ ಮತ್ತೆ ಮೂರನೇಅಲೆಯ  ಹೊತ್ತಿನಲ್ಲಿ ಬಿಜೆಪಿ ಕೆಟ್ಟ ಕೆಲಸಕ್ಕೆ ಕೈ ಹಾಕಿದೆ ಎಂದು ಟೀಕಿಸಿದರು.

  ಮಾಧ್ಯಮ ಸಂಸ್ಥೆಯೊಂದು ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೇಶದ ಟಾಪ್ 5 ಸಿಎಂಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, ಈ ಅಭಿಪ್ರಾಯ ಸಂಗ್ರಹವನ್ನು ಬಿಜೆಪಿ ಅಪಪ್ರಚಾರ ಮಾಡಲು ಯತ್ನಿಸುತ್ತಿದೆ, ಏಕೆಂದರೆ ಒಬ್ಬ ಬಿಜೆಪಿ ಮುಖ್ಯಮಂತ್ರಿಯೂ ಟಾಪ್​ 5 ಪಟ್ಟಿಯಲ್ಲಿ ಕಾಣುತ್ತಿಲ್ಲ. "ಈ ಟಾಪ್ ಫೈವ್ ಪಟ್ಟಿಯಲ್ಲಿ ಏಕೆ ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಸಿಎಂ ಇಲ್ಲ? ನಾವು ಕೆಲವು ಪ್ರಶ್ನೆಗಳನ್ನು ಬಿಜೆಪಿಗೆ ಕೇಳಬೇಕಿದೆ ಎಂದು ಶಿವಸೇನೆಯ ಮುಖ್ಯ ವಕ್ತಾರರು ಹೇಳಿದರು.

  ಮುಂದಿನ ದಿನಗಳಲ್ಲಿ ಠಾಕ್ರೆ ದೇಶದ ಅಗ್ರ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಕರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಠಾಕ್ರೆ ಸಾರ್ವಜನಿಕರಿಂದ ಅತ್ಯಂತ  ಕಡಿಮೆ ಟೀಕೆಗೆ ಒಳಗಾದರು ಹಾಗೂ ಜನರಿಂದ ತಮ್ಮ ಕೆಲಸಗಳಿಗೆ ಹೊಗಳಿಸಿಕೊಂಡರು ಎಂದು ರಾವತ್​ ಹೇಳಿದರು.

  ಮೊದಲ ಐದು ಸ್ಥಾನದಲ್ಲಿರುವ ಇತರ ಮುಖ್ಯಮಂತ್ರಿಗಳ ಬಗ್ಗೆ (ಸಮೀಕ್ಷೆಯ ಪಟ್ಟಿ)? ಅವರು ಮನೆಯಲ್ಲಿ ಸುಮ್ಮನೆ ಕುಳಿತಿದ್ದಾರೆಯೇ ಮತ್ತು ಮೊದಲ ಐದು ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಕೆಲಸ ಮಾಡದೇ ಈ ಪ್ರಶಂಸೆಗೆ ಒಳಗಾದರೆ? ಇಲ್ಲ, ಕೆಲಸ ಮಾಡಿದರು, ಹೆಸರು ಗಳಿಸಿದರು.

  ಇದನ್ನೂ ಓದಿ: LPG Price Hike: ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್; LPG ಸಿಲಿಂಡರ್​ ಬೆಲೆಯಲ್ಲಿ ಏರಿಕೆ

  ಕೋವಿಡ್ -19 ಪರಿಸ್ಥಿತಿಯಿಂದ ಜನರನ್ನು ಹೊರಗೆ ತರಲು ಸಿಎಂ ಠಾಕ್ರೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಠಾಕ್ರೆ ಬಲವಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅವರ ಕೆಲಸವನ್ನು ನ್ಯಾಯಾಲಯವು ಪ್ರಶಂಸಿಸಿದೆ. ಶಿಕ್ಷಣ, ಅಭಿವೃದ್ಧಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅವರ ಕೆಲಸವನ್ನು ಎಲ್ಲರೂ ಗುರುತಿಸಿದ್ದಾರೆ ಮತ್ತು ಇಡೀ ದೇಶವು ಅದನ್ನು ನೋಡುತ್ತಿದೆ ಎಂದು ರಾವತ್​ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: