ಕುದುರೆ ವ್ಯಾಪಾರಕ್ಕಾಗಿ ಬಿಜೆಪಿ ರಾಜ್ಯಸಭಾ ಚುನಾವಣೆಯನ್ನು ವಿಳಂಬಗೊಳಿಸುತ್ತಿದೆ; ಅಶೋಕ್‌ ಗೆಹ್ಲೋಟ್‌ ಆರೋಪ

Ashok Gehlot; ರಾಜ್ಯಸಭಾ ಚುನಾವಣೆ ಸಲುವಾಗಿ ಬಿಜೆಪಿ ಈಗಾಗಲೇ ಗುಜರಾತ್‌ನಲ್ಲಿ 7 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಾಂತರ ಮಾಡಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಜಸ್ಥಾನದಲ್ಲೂ ಇದೇ ತಂತ್ರಕ್ಕೆ ಮುಂದಾಗಿದೆಯೇ? ಎಂಬ ಅನುಮಾನ ಇದೀಗ ದಟ್ಟವಾಗಿದೆ.

MAshok Kumar | news18-kannada
Updated:June 12, 2020, 4:18 PM IST
ಕುದುರೆ ವ್ಯಾಪಾರಕ್ಕಾಗಿ ಬಿಜೆಪಿ ರಾಜ್ಯಸಭಾ ಚುನಾವಣೆಯನ್ನು ವಿಳಂಬಗೊಳಿಸುತ್ತಿದೆ; ಅಶೋಕ್‌ ಗೆಹ್ಲೋಟ್‌ ಆರೋಪ
ಅಶೋಕ್ ಗೆಹ್ಲೋಟ್
  • Share this:
ಜೈಪುರ (ಜೂನ್ 12); ಕೇಂದ್ರದ ಬಿಜೆಪಿ ಸರ್ಕಾರ ಶಾಸಕರನ್ನು ಖರೀದಿಸಲು, ಕುದುರೆ ವ್ಯಾಪಾರ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ರಾಜ್ಯಸಭೆ ಚುನಾವಣೆಯನ್ನು ಎರಡು ತಿಂಗಳಿನಿಂದ ವಿಳಂಬ ಮಾಡುತ್ತಿದ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ರಾಜ್ಯಸಭೆ ಚುನಾಚಣೆ ವಿಳಂಬವಾಗುತ್ತಿರುವ ಕುರಿತು ಇಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಅಶೋಕ್ ಗೆಹ್ಲೋಟ್, "ರಾಜ್ಯಸಭಾ ಚುನಾವಣೆಯನ್ನು ಎರಡು ತಿಂಗಳ ಹಿಂದೆಯೇ ನಡೆಸಬಹುದಿತ್ತು. ಆದರೆ, ವಿನಾಃಕಾರಣ ಈ ಚುನಾವಣೆಯನ್ನು ಮುಂದೂಡಲಾಗಿದೆ. ಏಕೆಂದರೆ ಬಿಜೆಪಿಯ ಕುದುರೆ ವ್ಯಾಪಾರ ಪೂರ್ಣಗೊಂಡಿಲ್ಲ. ಈ ವ್ಯಾಪಾರ ಪೂರ್ಣವಾಗುವವರೆಗೆ ಕೇಂದ್ರ ಸರ್ಕಾರ ಚುನಾವಣೆ ನಡೆಸುವುದಿಲ್ಲ" ಎಂದು ಕಿಡಿಕಾರಿದ್ದಾರೆ.

“ನಾವು ಒಂದಾಗಿದ್ದೇವೆ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಶಾಸಕರ ಒಂದು ಮತವೂ ಬೇರೆಯವರಿಗೆ ಹೋಗುವುದಿಲ್ಲ. ಇದಲ್ಲದೆ, ಇಬ್ಬರು ಸಿಪಿಐ (ಎಂ) ಶಾಸಕರು ಸಹ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಲಿದ್ದಾರೆ. ಹೀಗಾಗಿ ರಾಜಸ್ಥಾನದ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ ”ಎಂದು ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದಲ್ಲಿ ಮೂರು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 26 ರಂದೇ ಚುನಾವಣೆ ನಡೆಯಬೇಕಿತ್ತು. ಆದರೆ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ, ಇದೀಗ ಲಾಕ್‌ಡೌನ್ ತೆರವಾಗಿರುವ ಕಾರಣ ಜೂನ್ 19 ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ.

ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳ ಪೈಕಿ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಒಂದು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತವಾಗಿದೆ. ಆದರೆ, ಬಿಜೆಪಿಯ ಎರಡನೇ ಅಭ್ಯರ್ಥಿಯೂ ಗೆಲುವು ಸಾಧಿಸಲು 12 ಸ್ವತಂತ್ಯ್ರ ಶಾಸಕರ ಬೆಂಬಲದ ಅಗತ್ಯವಿದೆ. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಇದನ್ನೂ ಓದಿ : ಬಿಹಾರದ ಗಡಿಯಲ್ಲಿ ನೇಪಾಳ ಪೊಲೀಸರಿಂದ ಗುಂಡಿನ ದಾಳಿ; ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ
ಏಕೆಂದರೆ ರಾಜ್ಯಸಭಾ ಚುನಾವಣೆ ಸಲುವಾಗಿ ಬಿಜೆಪಿ ಈಗಾಗಲೇ ಗುಜರಾತ್‌ನಲ್ಲಿ 7 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಾಂತರ ಮಾಡಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಜಸ್ಥಾನದಲ್ಲೂ ಇದೇ ತಂತ್ರಕ್ಕೆ ಮುಂದಾಗಿದೆಯೇ? ಎಂಬ ಅನುಮಾನ ಇದೀಗ ದಟ್ಟವಾಗಿದೆ.
First published: June 12, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading