ನವದೆಹಲಿ: ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಯು (JDU), ಆಮ್ ಆದ್ಮಿ ಪಾರ್ಟಿ (AAP), ತೃಣಮೂಲ ಕಾಂಗ್ರೆಸ್ (TMC), ಸಮಾಜವಾದಿ ಪಾರ್ಟಿ (SP), ಬಹುಜನ ಸಮಾಜವಾದಿ ಪಾರ್ಟಿ (BSP) ಸೇರಿದಂತೆ ದೇಶದ ಪ್ರಮುಖ ರಾಜಕೀಯ ಪಕ್ಷಗಳ (Political Parties) ದೇಣಿಗೆ (donation) ಸಂಗ್ರಹದ ವಿವರ ಹೊರಬಿದ್ದಿದೆ. ಉಳಿದ ಎಲ್ಲಾ ಪಕ್ಷಗಳಿಗಿಂತ ಬಿಜೆಪಿಯ ದೇಣಿಗೆ ಸಂಗ್ರಹ ಹೆಚ್ಚಿದೆ ಅಂತ ವರದಿಗಳು ತಿಳಿಸಿವೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿಯ (Association for Democratic Reforms report) ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ವಿವಿಧ ರಾಷ್ಟ್ರೀಯ ಪಕ್ಷಗಳಿಗೆ ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. ಈ ಪ್ರಮಾಣ ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 31.50 ರಷ್ಟು ಏರಿಕೆಯಾಗಿದೆ. ಈ ಪೈಕಿ ಬಿಜೆಪಿ ಅಗ್ರಸ್ಥಾನದಲ್ಲಿದ್ದು, 614 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದರೆ, ಕಾಂಗ್ರೆಸ್ 95 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ.
ಒಟ್ಟು ಬರೋಬ್ಬರಿ 187.02 ಕೋಟಿ ದೇಣಿಗೆ ಸಂಗ್ರಹ
2021-22ನೇ ಸಾಲಿನ ಆರ್ಥಿಕ ವರ್ಷದ ವರದಿ ಹೊರಬಿದ್ದಿದೆ. 2021-22ರಲ್ಲಿ ದೇಶದ ವಿವಿಧ ರಾಷ್ಟ್ರೀಯ ಪಕ್ಷಗಳು ವಿವಿಧ ಮೂಲಗಳಿಂದ ಒಟ್ಟು 187.02 ಕೋಟಿ ರೂಪಾಯಿ ಹೆಚ್ಚುವರಿ ದೇಣಿಗೆ ಸಂಗ್ರಹಿಸಿದೆ. ಈ ಪ್ರಮಾಣ ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 31.50 ರಷ್ಟು ಏರಿಕೆಯಾಗಿದೆ.
ಬಿಜೆಪಿ 614 ಕೋಟಿ, ಕಾಂಗ್ರೆಸ್ 95 ಕೋಟಿ ರೂಪಾಯಿ ಸಂಗ್ರಹ
ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಬಿಜೆಪಿ ಅತಿ ಹೆಚ್ಚು ದೇಣಿಗೆಯನ್ನು ಸಂಗ್ರಹಿಸಿದೆ. ಬಿಜೆಪಿ 2021-22ರಲ್ಲಿ 614 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದ್ದರೆ, ಕಾಂಗ್ರೆಸ್ 95 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಚುನಾವಣಾ ಸುಧಾರಣಾ ಸಂಸ್ಥೆ ಎಡಿಆರ್ ತಿಳಿಸಿದೆ.
ಇದನ್ನೂ ಓದಿ: Narendra Modi: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಮೋದಿಯವರಿಂದ ಮಾತ್ರ ಸಾಧ್ಯ! ಅಮೇರಿಕಾ ಶ್ವೇತಭವನದ ಹೇಳಿಕೆ
ದೇಣಿಗೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ
ದೇಣಿಗೆ ಸಂಗ್ರಹದಲ್ಲಿ ಬಿಜೆಪಿಗೆ ಅಗ್ರಸ್ಥಾನ ದೊರೆತಿದೆ. ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ಸ್ಟ್, ಸಿಪಿಐ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ತೃಣಮೂಲ ಕಾಂಗ್ರೆಸ್ ಘೋಷಿಸಿದ ಒಟ್ಟು ದೇಣಿಗೆ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ದೇಣಿಗೆಯನ್ನು ಬಿಜೆಪಿ ಸಂಗ್ರಹಿಸಿದೆ ಅಂತ ವರದಿ ತಿಳಿಸಿದೆ.
ಬಿಜೆಪಿ ದೇಣಿಗೆ ಸಂಗ್ರಹ ಏರಿಕೆ
ಬಿಜೆಪಿಗೆ ದೇಣಿಗೆಗಳು 2020-21ರಲ್ಲಿ 477.55 ಕೋಟಿ ರೂಪಾಯಿ ಇದ್ದರೆ, 2021-22 ರಲ್ಲಿ 614.63 ಕೋಟಿಗೆ ಏರಿದೆ. ಇದು ಒಂದು ವರ್ಷದಲ್ಲಿ ಶೇಕಡಾ 28.71 ರಷ್ಟು ಹೆಚ್ಚಾಗಿದೆ. ಅತ್ತ 2020-21ರ ಹಣಕಾಸು ವರ್ಷದಲ್ಲಿ ಕಾಂಗ್ರೆಸ್‌ನ ದೇಣಿಗೆಗಳು 74.52 ಕೋಟಿ ರೂ.ಗಳಿತ್ತು. ಅದೇ 2021-22ರ ಹಣಕಾಸು ವರ್ಷದಲ್ಲಿ 95.46 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ. 28.09ಕ್ಕೆ ಏರಿಕೆಯಾಗಿದೆ.
ವಿವಿಧ ಪಕ್ಷಗಳ ದೇಣಿಗೆ ಸಂಗ್ರಹ ಎಷ್ಟು?
ಕಳೆದ 16 ವರ್ಷಗಳಿಂದ ಘೋಷಿಸುತ್ತಿರುವಂತೆ 2021-22ರಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಬಹುಜನ ಸಮಾಜ ಪಕ್ಷ ಘೋಷಿಸಿದೆ ಎಂದು ಎಡಿಆರ್ ಹೇಳಿಕೊಂಡಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಸಿಪಿಐ-ಎಂ ಘೋಷಿಸಿದ ದೇಣಿಗೆ 2.85 ಕೋಟಿಯಾಗಿದ್ದು, ಶೇಕಡಾ 22.06 ಆಗಿದೆ. ಹಾಗೆಯೇ ನ್ಯಾಷನಲ್ ಪೀಪಲ್ಸ್ ಪಾರ್ಟಿಯು 24.10 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದೆ.
ಯಾವ ರಾಜ್ಯಗಳಿಂದ ಎಷ್ಟೆಷ್ಟು ದೇಣಿಗೆ ಸಂಗ್ರಹ?
ರಾಷ್ಟ್ರೀಯ ಪಕ್ಷಗಳಿಗೆ ದೆಹಲಿಯಿಂದ ಒಟ್ಟು 395.85 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದ್ದು, ಮಹಾರಾಷ್ಟ್ರದಿಂದ 105.35 ಕೋಟಿ ರೂಪಾಯಿ ಮತ್ತು ಗುಜರಾತ್‌ನಿಂದ 44.96 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ