• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಹೊಸ ತಂಡ: ಧರ್ಮೇಂದ್ರ ಪ್ರಧಾನ್​ ಉ.ಪ್ರ. ಜೋಶಿ ಉತ್ತರಾಖಂಡದ ಉಸ್ತುವಾರಿ

ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಹೊಸ ತಂಡ: ಧರ್ಮೇಂದ್ರ ಪ್ರಧಾನ್​ ಉ.ಪ್ರ. ಜೋಶಿ ಉತ್ತರಾಖಂಡದ ಉಸ್ತುವಾರಿ

ಧರ್ಮೇಂದ್ರ ಪ್ರಧಾನ್​ ಫೈಲ್​ ಫೋಟೊ

ಧರ್ಮೇಂದ್ರ ಪ್ರಧಾನ್​ ಫೈಲ್​ ಫೋಟೊ

Vidhan Sabha Election 2022: ಉತ್ತರ ಪ್ರದೇಶ ದೇಶದಲ್ಲೇ ಅತಿದೊಡ್ಡ ರಾಜ್ಯ. 403 ವಿಧಾನಸಭಾ ಕ್ಷೇತ್ರಗಳು, 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಒಟ್ಟೂ 20 ಕೋಟಿಗೂ ಮೀರಿದ ಜನಸಂಖ್ಯೆಯಿದೆ

 • Share this:

  Five State Election: ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿತ್ತು. ಹೊಸ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ (BJP New Team for Five State Elections). ಐದು ರಾಜ್ಯಗಳಲ್ಲಿ ಪ್ರಮುಖ ಎನಿಸಿಕೊಂಡಿರುವ ಉತ್ತರ ಪ್ರದೇಶ ಚುನಾವಣೆಯ ಉಸ್ತುವಾರಿಯನ್ನಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan)​ ಅವರನ್ನು ನೇಮಿಸಿದೆ.


  ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿಗಳ ತಂಡದಲ್ಲಿ ಕರ್ನಾಟಕದ ಶೋಭಾ ಕರಂದ್ಲಾಜೆ (Union Minister Shobha Karandlaje), ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ (Union Sports Minister Anurag Thakur)​, ಅರುಣ್​ ರಾಮ್​ ಮೇಘ್ವಾಲ್​, ಸರೋಜ್​ ಪಾಂಡೇ, ಕ್ಯಾಪ್ಟನ್​ ಅಭಿಮನ್ಯು ಮತ್ತು ವಿವೇಕ್​ ಠಾಕೂರ್​ ಇದ್ದಾರೆ. ಉತ್ತರ ಪ್ರದೇಶ ದೇಶದಲ್ಲೇ ಅತಿದೊಡ್ಡ ರಾಜ್ಯ. 403 ವಿಧಾನಸಭಾ ಕ್ಷೇತ್ರಗಳು, 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಒಟ್ಟೂ 20 ಕೋಟಿಗೂ ಮೀರಿದ ಜನಸಂಖ್ಯೆಯಿದೆ. ಧರ್ಮೇಂದ್ರ ಪ್ರಧಾನ್​ ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ರಾಜ್ಯದ ಉಸ್ತುವಾರಿಯಾಗಿದ್ದರು. ಹಲವು ರಾಜ್ಯಗಳ ಚುನಾವಣೆಯ ನೇತೃತ್ವ ವಹಿಸಿದ ಅನುಭವ ಅವರಿಗಿದೆ.


  ಇನ್ನೂ ಉತ್ತರಾಖಂಡ ರಾಜ್ಯದ ಚುನಾವಣೆ ಉಸ್ತುವಾರಿಯಾಗಿ ಕರ್ನಾಟಕದ ಪ್ರಲ್ಹಾದ್​ ಜೋಶಿ (Union Minister Pralhad Joshi) ಅವರನ್ನು ಬಿಜೆಪಿ ಹೈಕಮಾಂಡ್​ ನೇಮಿಸಿದೆ. ಪ್ರಲ್ಹಾದ್​ ಜೋಶಿ ತಂಡದಲ್ಲಿ ಲಾಕೆಟ್​ ಚಟರ್ಜಿ, ಆರ್​ ಪಿ ಸಿಂಗ್​ ಕೂಡ ಇದ್ದಾರೆ. ಜೋಶಿ ಕಳೆದ ಚುನಾವಣೆಯಲ್ಲಿ ಕೇರಳ ರಾಜ್ಯದ ಉಸ್ತುವಾರಿಯಾಗಿದ್ದರು. ಉತ್ತರಾಖಂಡದಲ್ಲಿ ಒಂದೇ ವಿಧಾನಸಭೆ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾಗಿದ್ದಾರೆ.


  ಮಣಿಪುರ ವಿಧಾನಸಭೆ ಚುನಾವಣೆ ನೇತೃತ್ವವನ್ನು ಕೇಂದ್ರ ಸಚಿವ ಭೂಪೆಂದರ್​ ಯಾದವ್​ ಅವರ ಹೆಗಲಿಗೆ ಬಿಜೆಪಿ ನೀಡಿದೆ. ಈ ಹಿಂದೆ ಬಿಹಾರ ಮತ್ತು ಗುಜರಾತ್​ ಚುನಾವಣೆಯ ಉಸ್ತುವಾರಿಯಾಗಿ ಯಾದವ್​ ಕೆಲಸ ಮಾಡಿದ್ದರು. ಪ್ರತಿಮಾ ಭೌಮಿಕ್​ ಮತ್ತು ಅಸ್ಸಾಂನ ಅಶೋಕ್​ ಸಿಂಘಲ್​ ಯಾದವ್​ ತಂಡದಲ್ಲಿ ಇರಲಿದ್ದಾರೆ.


  ಇದನ್ನೂ ಓದಿ: Explained: ಶ್ರೀಲಂಕಾ ದಿವಾಳಿಯಾಗೋಕೆ ಸಾವಯವ ಕೃಷಿ ಪದ್ಧತಿಯೇ ಕಾರಣವಾ? ತಜ್ಞರು ಹೌದೆನ್ನುತ್ತಿದ್ದಾರೆ!


  ಐದು ರಾಜ್ಯಗಳ ಚುನಾವಣೆಯಲ್ಲಿ ಮತ್ತೊಂದು ಮಹತ್ವ ಪಡೆದುಕೊಂಡಿರುವ ರಾಜ್ಯವೆಂದರೆ ಪಂಜಾಬ್​. ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಮತ್ತು ನವಜೋತ್​ ಸಿಂಗ್​ ಸಿಧು ನಡುವಿನ ಗುದ್ದಾಟ ತಹಬಂದಿಗೆ ಇನ್ನೂ ಬಂದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದೇ ಇನ್ನೂ ಅಂತಿಮವಾಗಿಲ್ಲ ಮತ್ತು ಇವರಿಬ್ಬರ ನಡುವಿನ ಕಿತ್ತಾಟದಿಂದ ಆಮ್​ ಆದ್ಮಿ ಪಕ್ಷ, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಈ ಸ್ಥಿತಿಯಲ್ಲಿರುವ ಪಂಜಾಬ್​ ರಾಜ್ಯದ ಉಸ್ತುವಾರಿಯಾಗಿ ಗಜೇಂದ್ರ ಸಿಂಗ್​ ಶೇಖಾವತ್​ರನ್ನು ಬಿಜೆಪಿ ನೇಮಿಸಿದೆ. ಹರ್ದೀಪ್​ ಸಿಂಗ್​ ಪುರಿ, ಮೀನಾಕ್ಷಿ ಲೇಖಿ, ವಿನೋದ್​ ಚಾವ್ಡಾ ಅವರು ಶೇಖಾವತ್​ ತಂಡದಲ್ಲಿ ಇರಲಿದ್ದಾರೆ.


  ಇದನ್ನೂ ಓದಿ: ಸೆ. 13-24ರವರೆಗೆ ವಿಧಾನಸಭೆ ಅಧಿವೇಶನ; ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ: ಸ್ಪೀಕರ್ ಕಾಗೇರಿ


  ಐದು ರಾಜ್ಯಗಳ ಪೈಕಿ ಬಿಜೆಪಿ ಅಧಿಕಾರದಲ್ಲಿರದ ರಾಜ್ಯ ಪಂಜಾಬ್​ ಒಂದೇ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾಗಳಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ.
  ಇನ್ನೂ ಗೋವಾ ಚುನಾವಣೆ ಉಸ್ತುವಾರಿಯಾಗಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅವರನ್ನು ನೇಮಿಸಲಾಗಿದ್ದು, ಅವರ ತಂಡದಲ್ಲಿ ಕಿಶನ್​ ರೆ್ಎಇ ಮತ್ತು ದರ್ಶನ ಜರ್ದೋಶ್​ ಇರಲಿದ್ದಾರೆ.


  ಮಮತಾ ಉಪಚುನಾವಣೆ:


  ಇನ್ನೊಂದೆಡೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನೂ ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಏಕೆಂದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು, ಸೋತಲ್ಲಿ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಲಿದ್ದಾರೆ. ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಮಮತಾ ಸ್ಪರ್ಧಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏಕಸಭಾ ವ್ಯವಸ್ಥೆ ಇರುವುದರಿಂದ, ಕರ್ನಾಟಕದಂತೆ ಚುನಾವಣೆಯಲ್ಲಿ ಸೋತರೆ ವಿಧಾನ ಪರಿಷತ್​ ಮೂಲಕ ಹಿಂಬದಿ ಮಾರ್ಗ ಅನುಸರಿಸಲು ಸಾಧ್ಯವಿಲ್ಲ.


  ಏಕಸಭಾ ಶಾಸನಸಭೆ ಎಂದರೇನು (Unicameral Legislature)?:


  ಏಕಸಭಾ ಶಾಸನ ಸಭೆ ಎಂದರೆ ವಿಧಾನಸಭೆ ಮತ್ತು ವಿಧಾನ ಪರಿಷತ್​ ಇರುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಲಕ್ಷಣ್​ ಸವಧಿ (Lakshman Savadhi) ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರೂ ಉಪಮುಖ್ಯಮಂತ್ರಿಯಾದರು. ನಂತರ ನೇರ ಚುನಾವಣೆ ಎದುರಿಸದೇ ಪರಿಷತ್​ ಸದಸ್ಯರಾಗಿ ಉಪ ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರೆದರು. ಆದರೆ ಪಶ್ಚಿಮ ಬಂಗಾಳದಲ್ಲಿ ಕೇವಲ ವಿಧಾನಸಭೆ ಮಾತ್ರವಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದೊಂದೇ ಅಧಿಕಾರ ಪಡೆಯಲು ಇರುವ ಮಾರ್ಗ. ಚುನಾವಣೆಯಾದ ಆರು ತಿಂಗಳ ಒಳಗಾಗಿ ವಿಧಾನ ಸಭೆ ಅಥವಾ ಪರಿಷತ್​ ಸದಸ್ಯರಾಗಿ ಸಾಂವಿಧಾನಿಕ ಸ್ಥಾನದಲ್ಲಿ ಮುಂದುವರೆಯಬಹುದು. ಪಶ್ಚಿಮ ಬಂಗಾಳದಲ್ಲಿ ಪರಿಷತ್​ ಇಲ್ಲದ ಕಾರಣ ಮಮತಾ ಬ್ಯಾನರ್ಜಿ ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ.

  Published by:Sharath Sharma Kalagaru
  First published: