HOME » NEWS » National-international » BJP FARES POORLY IN UTTAR PRADESH PANCHAYAT ELECTIONS SNVS

ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಕಮಲಕ್ಕೆ ಹಿನ್ನಡೆ; ಪಕ್ಷೇತರರ ಸಂಪರ್ಕಕ್ಕೆ ನಿಂತ ಬಿಜೆಪಿ

ಉತ್ತರ ಪ್ರದೇಶದ 58,176 ಗ್ರಾಮ ಪಂಚಾಯಿತಿಯ 7.32 ಲಕ್ಷ ಸ್ಥಾನಗಳು, 75,852 ಕ್ಷೇತ್ರ ಪಂಚಾಯಿತಿ ಹಾಗೂ 3050 ಜಿಪಂಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗಿಂತ ಸಮಾಜವಾದಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆದ್ದಿದ್ದಾರೆ.

news18
Updated:May 5, 2021, 4:33 PM IST
ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಕಮಲಕ್ಕೆ ಹಿನ್ನಡೆ; ಪಕ್ಷೇತರರ ಸಂಪರ್ಕಕ್ಕೆ ನಿಂತ ಬಿಜೆಪಿ
ಪ್ರಾತಿನಿಧಿಕ ಚಿತ್ರ.
  • News18
  • Last Updated: May 5, 2021, 4:33 PM IST
  • Share this:
ಲಕ್ನೋ(ಮೇ 05): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದೇ ನಿರಾಸೆಗೊಂಡಿರುವ ಬಿಜೆಪಿ ಇದೀಗ ತನ್ನ ಭದ್ರಕೋಟೆಯಲ್ಲಿ ಸೋಲಿನ ಆಘಾತ ಅನುಭವಿಸುತ್ತಿದೆ. ತಾನು ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸುತ್ತಿದೆ. 3050 ಜಿಲ್ಲಾ ಪಂಚಾಯತ್ ವಾರ್ಡ್​ಗಳ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 666 ಸ್ಥಾನಗಳಲ್ಲಿ ಮುಂದಿದ್ದರೆ, ಸಮಾಜವಾದಿ ಪಕ್ಷ ಬೆಂಬಲಿತರು 747 ವಾರ್ಡ್​ಗಳಲ್ಲಿ ಮುಂದಿದ್ದಾರೆ. ಬಿಎಸ್​ಪಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕ್ರಮವಾಗಿ 322 ಮತ್ತು 77 ಜಿ.ಪಂ. ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದು ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ. ಯೋಗಿ ಆದಿತ್ಯನಾಥ್ ಸಿಎಂ ಆಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಇಂಥ ಹಿನ್ನಡೆ ಅನುಭವಿಸಿರುವುದು ಅನಿರೀಕ್ಷಿತವೆನಿಸಿದೆ. ಮುಂದಿನ ವರ್ಷ ಉ.ಪ್ರ. ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಪಂಚಾಯಿತಿ ಚುನಾವಣೆ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ. ಇಲ್ಲಿ ಹಿನ್ನಡೆ ಅನುಭಸಿರುವುದು ಬಿಜೆಪಿ ಶಾಕ್ ಕೊಟ್ಟಿದೆ.

ಉತ್ತರ ಪ್ರದೇಶದಲ್ಲಿ ಒಟ್ಟು 58,176 ಗ್ರಾಮ ಪಂಚಾಯತಿಯ 7.32 ಲಕ್ಷ ಗ್ರಾ.ಪಂ. ಸ್ಥಾನಗಳು, 75,852 ಕ್ಷೇತ್ರ ಪಂಚಾಯತಿ ಹಾಗೂ 3050 ಜಿಪಂ ಗಳಿಗೆ ಕಳೆದ ತಿಂಗಳು ಏಪ್ರಿಲ್ 15ರಿಂದ 28ರವರೆಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿತ್ತು. 3.19 ಲಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ಧಾರೆ.

ಇದನ್ನೂ ಓದಿ: Covid-19 Crisis - ಮುಂಬೈ ನೋಡಿ ಕಲಿಯಿರಿ ಎಂದು ಕೇಂದ್ರಕ್ಕೆ ತಾಕೀತು ಮಾಡಿದ ಸುಪ್ರೀಂ

ಇದೀಗ ಮತ ಎಣಿಕೆ ಬಹುತೇಕ ಅಂತಿಮಗೊಂಡಿದ್ದು ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗಿಂತ ಪಕ್ಷೇತರ ಅಭ್ಯರ್ಥಿಗಳೇ ಬಹುತೇಕ ಕಡೆ ಮುಂದಿದ್ದಾರೆ. ಶೇ. 30ಕ್ಕಿಂತ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಹೆಚ್ಚು ಸ್ಥಾನಗಳನ್ನ ಗೆಲ್ಲಲು ಸಕಲ ರಣನೀತಿ ರೂಪಿಸಿದ್ದ ಪ್ರದೇಶಗಳಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ, ಸಿಎಂ ಯೋಗಿ ಪ್ರತಿನಿಧಿಸುವ ಗೋರಖಪುರ ಹಾಗೂ ಅಯೋಧ್ಯೆ, ಮಥುರಾ, ಇತ್ಯಾದಿ ಜಿಲ್ಲೆಗಳಲ್ಲಿ ಬಿಜೆಪಿ ಹೀನಾಯ ಸಾಧನೆ ತೋರಿದೆ. ಆದರೆ, ಹೆಚ್ಚಿನ ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಪಣತೊಟ್ಟಿರುವ ಬಿಜೆಪಿ ಇದೀಗ ಪಕ್ಷೇತರರನ್ನ ಸಂಪರ್ಕಿಸುವ ಕೆಲಸದಲ್ಲಿ ತೊಡಗಿರುವುದು ವರದಿಯಾಗಿದೆ.

ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆಯಲ್ಲಿ ನಂಬರ್ ಒನ್ ಪಕ್ಷವಾಗಿರುವ ಎಸ್​ಪಿ, ಇದು ತನ್ನ ತತ್ವ ಸಿದ್ಧಾಂತಕ್ಕೆ ಸಿಕ್ಕಿರುವ ಗೆಲುವು ಎಂದು ಬಣ್ಣಿಸಿದೆ. ”ಬಿಜೆಪಿ ಮುಳುಗುತ್ತಿರುವ ಹಡಗು ಎಂಬುದು ಈ ಪಂಚಾಯಿತಿ ಚುನಾವಣೆ ಫಲಿತಾಂಶದಿಂದ ತಿಳಿಯುತ್ತದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಮಾವಶೇಷ ಆಗಲಿದೆ” ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
Published by: Vijayasarthy SN
First published: May 5, 2021, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories