Udaipur Murder: ಉದಯಪುರ ಹತ್ಯೆಯ ಆರೋಪಿ ಜೊತೆ ಬಿಜೆಪಿ ಮುಖಂಡ! ಫೊಟೊ ವೈರಲ್, ಇದೇನು ಹೊಸ ಟ್ವಿಸ್ಟ್?

Udaipur Murder: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉದಯಪುರ ಕನ್ಹಯ್ಯಾ ಹತ್ಯೆ ಮಾಡಿದ ಆರೋಪಿ ಸ್ಥಳೀಯ ಬಿಜೆಪಿ ಮುಖಂಡನ ಜೊತೆಗಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಏನಿದು ಬಿಗ್ ಟ್ವಿಸ್ಟ್?

ಬಿಜೆಪಿ ಮುಖಂಡನ ಜೊತೆ ಆರೋಪಿ

ಬಿಜೆಪಿ ಮುಖಂಡನ ಜೊತೆ ಆರೋಪಿ

  • Share this:
ನವದೆಹಲಿ(ಜು.02): ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ (Kanhaiah Lal) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಸದಸ್ಯ (BJP Member) ಎಂದು ಕಾಂಗ್ರೆಸ್ (Congress) ಮಾಡಿರುವ ಆರೋಪವನ್ನು ರಾಜಸ್ಥಾನದ (Rajastan) ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಶನಿವಾರ ತಳ್ಳಿಹಾಕಿದೆ.
ಉದಯಪುರದ ಕೆಲವು ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಆರೋಪಿ ರಿಯಾಜ್ ಅಖ್ತರಿ ಇರುವ ಫೋಟೋ ಹೊರಬಂದ ನಂತರ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಮೊಹಮ್ಮದ್ ಸಾದಿಕ್ ಖಾನ್ ಅವರು ಪಕ್ಷದ ಸದಸ್ಯ ಎಂದು ತೋರಿಸಲು ಫೋಟೋವನ್ನು (Photo) ಹಿಡಿದಿಡಲು ಸಾಧ್ಯವಿಲ್ಲ ಎಂದು ಹೇಳಿದರು. "ಯಾವುದೇ ನಾಯಕರ ಜೊತೆ ಯಾರು ಬೇಕಾದರೂ ಫೋಟೋ ಹೊಂದಬಹುದು. ಅವರು ಬಿಜೆಪಿಯ ಸದಸ್ಯ ಎಂದು ಅರ್ಥವಲ್ಲ" ಎಂದು ಸಾದಿಕ್ ಸುದ್ದಿಗಾರರಿಗೆ ತಿಳಿಸಿದರು.

‘‘ಪಕ್ಷದ ಯಾವುದಾದರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಸ್ಥಳೀಯ ನಾಯಕರ ಜತೆ ಫೋಟೊ ಕ್ಲಿಕ್ಕಿಸಿಕೊಂಡಿರಬಹುದು. ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಮುಖಂಡರು ಅಥವಾ ಸೆಲೆಬ್ರಿಟಿಗಳ ಜತೆಗಿನ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಸಾಮಾನ್ಯ ಪ್ರವೃತ್ತಿಯಾಗಿರುವುದರಿಂದ ಅವರು ಕೂಡ ಅಪ್‌ಲೋಡ್ ಮಾಡಿರಬಹುದು. ಫೋಟೋ ಆದರೆ ಅವರು ಬಿಜೆಪಿ ಸದಸ್ಯ ಎಂದು ಅರ್ಥವಲ್ಲ" ಎಂದು ಸಾದಿಕ್ ಹೇಳಿದರು.

ಪೊಲೀಸ್ ವೈಫಲ್ಯ

ಸ್ಪಷ್ಟ ಬೆದರಿಕೆಯ ಹೊರತಾಗಿಯೂ ಕನ್ಹಯ್ಯಾ ಲಾಲ್‌ಗೆ ಭದ್ರತೆ ಒದಗಿಸದ ರಾಜ್ಯ ಸರ್ಕಾರದ ವೈಫಲ್ಯವನ್ನು ಕೊಲೆ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಮೂರೂವರೆ ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅಶೋಕ್ ಗೆಹ್ಲೋಟ್ ಸರ್ಕಾರದ ವೈಫಲ್ಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಕೇಸರಿ ಪಕ್ಷದ ಮೇಲೆ ಆರೋಪ ಹೊರಿಸಲು ಬಯಸಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.

ಅಖ್ತಾರಿ ಅವರ ವಾಹನ ಸಂಖ್ಯೆ "2611" ಎಂದು ಸಾದಿಕ್ ಹೇಳಿದರು. ಅವರು 2013 ರಲ್ಲಿ ಉದ್ದೇಶಪೂರ್ವಕವಅಗಿ  ಅದನ್ನು ಪಡೆದರು. ಇದು ಅವರ ಮೂಲಭೂತ ಸಿದ್ಧಾಂತವನ್ನು ಸೂಚಿಸುತ್ತದೆ ಎಂದಿದ್ದಾರೆ.

ವಿಡಿಯೋ ಶೇರ್ ಮಾಡಿದ ಆರೋಪಿಗಳು

ಕನ್ಹಯ್ಯಾ ಲಾಲ್ ಎಂಬ ಟೈಲರ್ ಅವರನ್ನು ಮಂಗಳವಾರ ಮಧ್ಯಾಹ್ನ ಇಬ್ಬರು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅವರು ಕೊಲೆಯ ಹೊಣೆಗಾರಿಕೆ ಹೊತ್ತ ಆರೋಪಿಗಳು ಆನ್‌ಲೈನ್‌ನಲ್ಲಿ ಅಪರಾಧದ ಭಯಾನಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Nupur Supporter Murder: ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ; ಕನ್ಹಯ್ಯಗಿಂತ ಮೊದಲೇ ನಡೆದಿತ್ತು ಮಹಾರಾಷ್ಟ್ರದಲ್ಲಿ ಕೊಲೆ!

ಇಬ್ಬರು ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಅವರನ್ನು ಘಟನೆ ನಡೆದ ಗಂಟೆಗಳ ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗುತ್ತಿದ್ದಾಗ ಬಂಧಿಸಲಾಯಿತು.

ಮಾಲ್ ದಾಸ್ ಸ್ಟ್ರೀಟ್‌ನಲ್ಲಿರುವ ಕನ್ಹಯ್ಯನ ಅಂಗಡಿಯೊಂದರಲ್ಲಿದ್ದಾಗ ಆತನ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ.

ನೂಪುರ್ ಶರ್ಮಾಗೆ ಸುಪ್ರೀಂ ಚಾಟಿ

ಬಿಜೆಪಿ (BJP) ನಾಯಕಿ ನೂಪುರ್ ಶರ್ಮಾ (Nupur Sharma) ಅವರು ಇಡೀ ದೇಶದ ಕ್ಷಮೆ (Apology) ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಹೇಳಿದೆ. ದೇಶದಲ್ಲಿ ಇಷ್ಟೆಲ್ಲಾ ನಡೆಯಲು ಅವರು ಒಬ್ಬರೇ ಕಾರಣ ಎಂದು ಕೋರ್ಟ್​ ಹೇಳಿದೆ. ಅವರ ಹೇಳಿಕೆ ಹೇಗೆ ಪ್ರಚೋದಿಸಲಾಗಿದೆ ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.

ಇದನ್ನೂ ಓದಿ: Explained: ಶಿವಸೇನೆ ಪಕ್ಷ ಹುಟ್ಟಿದ್ದೇಗೆ? ಇಲ್ಲಿದೆ ಇತಿಹಾಸದ ಕುತೂಹಲಕರ ವಿವರ

ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದಾರೆ.
Published by:Divya D
First published: