ಅಲ್ಪಮತಕ್ಕೆ ಕುಸಿದ ಮಧ್ಯಪ್ರದೇಶ ಸರ್ಕಾರ; ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಬಿಜೆಪಿ ಮನವಿ

ಕಳೆದ ಸೋಮವಾರ ಕಾಂಗ್ರೆಸ್​ ಕರೆದಿದ್ದ ಶಾಸಕಾಂಗ ಸಭೆಗೆ ನಾಲ್ವರು ಶಾಸಕರು ಸೇರಿದಂತೆ ಕನಿಷ್ಠ ನೂರು ಶಾಸಕರು ಹಾಜರಾಗಿದ್ದರು. ಕಾಂಗ್ರೆಸ್ ರೆಬೆಲ್ ಶಾಸಕರು, ಬಿಎಸ್​ಪಿ ಮತ್ತು ಎಸ್​ಪಿ ಶಾಸಕರು ಸಭೆಗೆ ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ.

 • Share this:
  ಭೋಪಾಲ್: ಮಧ್ಯಪ್ರದೇಶದ ಸಿಎಂ ಕಮಲನಾಥ್ ಅವರು ಸೋಮವಾರ ಸದನದಲ್ಲಿ  ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡುವಂತೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಬಿಜೆಪಿ ನಿಯೋಗ ಇಂದು ರಾಜ್ಯಪಾಲ ಲಾಲ್​ಜಿ ಟಂಡನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

  230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್​ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ.

  ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಲಿ ಕಾಂಗ್ರೆಸ್​ನಲ್ಲಿ ಕೇವಲ 92 ಶಾಸಕರಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

  ಕಳೆದ ಸೋಮವಾರ ಕಾಂಗ್ರೆಸ್​ ಕರೆದಿದ್ದ ಶಾಸಕಾಂಗ ಸಭೆಗೆ ನಾಲ್ವರು ಶಾಸಕರು ಸೇರಿದಂತೆ ಕನಿಷ್ಠ ನೂರು ಶಾಸಕರು ಹಾಜರಾಗಿದ್ದರು. ಕಾಂಗ್ರೆಸ್ ರೆಬೆಲ್ ಶಾಸಕರು, ಬಿಎಸ್​ಪಿ ಮತ್ತು ಎಸ್​ಪಿ ಶಾಸಕರು ಸಭೆಗೆ ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

  ಇದನ್ನು ಓದಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಪ್ರಧಾನಿ ಮೋದಿ, ಶಾ ಭೇಟಿಯಾದ ಜ್ಯೋತಿರಾದಿತ್ಯ ಸಿಂಧಿಯಾ; ಕಮಲನಾಥ್ ಸರ್ಕಾರ ಪತನ?

  ಸೋಮವಾರದಿಂದ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅದೇ ದಿನ ಕಮಲನಾಥ್ ಸರ್ಕಾರ ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ. ಒಂದು ವೇಳೆ ರಾಜ್ಯಪಾಲರು ಕಮಲನಾಥ್ ಸರ್ಕಾರ ಬಹುಮತ ಸಾಬೀತು ಮಾಡುವಂತೆ ಹೇಳಿದರೆ ಕಾಂಗ್ರೆಸ್ ಸರ್ಕಾರ ಬೀಳುವುದು ಬಹುತೇಕ ಖಚಿತ. ಆದರೆ, ವಿಶ್ವಾಸಮತ ಯಾಚಿಸದಂತೆ ಕಾಂಗ್ರೆಸ್ ಹಲವು ತಂತ್ರಗಳನ್ನು ಹೆಣೆಯುತ್ತಿದೆ. ಕೊರೋನಾ ವೈರಸ್​ ಭೀತಿಯಿಂದ ಅಧಿವೇಶನ ಮುಂದೂಡುವಂತೆ ಸಿಎಂ ಕಲನನಾಥ್ ಕೂಡ ರಾಜ್ಯಪಾಲರಲ್ಲಿ ಕೇಳಿಕೊಂಡಿದ್ದಾರೆ.
  First published: