ಕಾಶ್ಮೀರದ ಬಗ್ಗೆ ಹೇಳಿಕೆ ಸಂಬಂಧ ರಾಹುಲ್​ ಗಾಂಧಿಯಿಂದ ಕ್ಷಮಾಪಣೆಗೆ ಬಿಜೆಪಿ ಆಗ್ರಹ

ರಾಹುಲ್​ ಗಾಂಧಿ ಅನುಮತಿ ಇಲ್ಲದೇ ಪಾಕಿಸ್ತಾನಕ್ಕೆ ಏಕೆ ಹೋಗಬೇಕಿತ್ತು. ಅವರ ಉದ್ದೇಶವಾದರೂ ಏನು? ಕಾಂಗ್ರೆಸ್​ ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಜಾವಡೇಕರ್ ಆಗ್ರಹಿಸಿದರು.

HR Ramesh | news18-kannada
Updated:August 28, 2019, 5:34 PM IST
ಕಾಶ್ಮೀರದ ಬಗ್ಗೆ ಹೇಳಿಕೆ ಸಂಬಂಧ ರಾಹುಲ್​ ಗಾಂಧಿಯಿಂದ ಕ್ಷಮಾಪಣೆಗೆ ಬಿಜೆಪಿ ಆಗ್ರಹ
ಪ್ರಕಾಶ್ ಜಾವಡೇಕರ್ ಮತ್ತು ರಾಹುಲ್ ಗಾಂಧಿ
  • Share this:
ನವದೆಹಲಿ: ಆಗಸ್ಟ್​ 24ರಂದು ಜಮ್ಮು-ಕಾಶ್ಮೀರ ಪ್ರವೇಶಿಸಲು ವಿಫಲರಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕಣಿವೆ ರಾಜ್ಯದ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಟುವಾಗಿ ಟೀಕಿಸಿದ್ದಾರೆ. ಅಲ್ಲದೇ, ರಾಹುಲ್​ ಗಾಂಧಿ ಕ್ಷಮಾಪಣೆಗೂ ಆಗ್ರಹಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಕೂಡ, ರಾಜಕೀಯ ಸ್ವಹಿತಾಸಕ್ತಿಗೂ ಮಿತಿ ಇಲ್ಲವೇ ಎಂದು ಕಿಡಿಕಾರಿದೆ. ​ 

ಕಳೆದ ವಾರ ರಾಹುಲ್​ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಿಯೋಗ ಕಣಿವೆ ರಾಜ್ಯಕ್ಕೆ ತೆರಳಿತ್ತು. ಈ ವೇಳೆ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದು, ದೆಹಲಿಗೆ ವಾಪಸ್​ ಕಳಿಸಲಾಗಿತ್ತು. ಆ ಬಳಿಕ ರಾಹುಲ್ ಗಾಂಧಿ ಅವರು ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಕಠಿಣ ಆಡಳಿತ ಜಾರಿಯಲ್ಲಿರುವುದು ನನಗೆ ಅನುಭವವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ, ಮತ್ತು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದ ವಿಚಾರ ಪಾಕಿಸ್ತಾನದ ಮಾಧ್ಯಮಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಪಾಕಿಸ್ತಾನ ಕಾಶ್ಮೀರ ವಿಷಯವಾಗಿ ವಿಶ್ವಸಂಸ್ಥೆಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಹುಲ್​ ಗಾಂಧಿ ಅವರ ಹೇಳಿಕೆಯನ್ನು ಪ್ರಮುಖವಾಗಿ ಉಲ್ಲೇಖಿಸಿರುವುದು ಕಾಂಗ್ರೆಸ್​ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ವಿಚಾರವಾಗಿ ಕಾಂಗ್ರೆಸ್ ಮತ್ತು ರಾಹುಲ್​ ಗಾಂಧಿ ಅವರನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕಾಂಗ್ರೆಸ್​ ಇಡೀ ದೇಶಕ್ಕೆ ಮುಜುಗರವನ್ನು ಉಂಟು ಮಾಡಿದೆ. ರಾಹುಲ್​ ಗಾಂಧಿ ಎಲ್ಲಿಂದ ಈ ಮಾಹಿತಿ ಪಡೆದುಕೊಂಡರು. ಕಾಶ್ಮೀರ ಪರಿಸ್ಥಿತಿ ಸಾಮಾನ್ಯವಾಗಿದೆ. ಇದೀಗ ಪಾಕಿಸ್ತಾನ ರಾಹುಲ್ ಅವರ ಹೇಳಿಕೆಯನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.ರಾಹುಲ್​ ಗಾಂಧಿ ಅನುಮತಿ ಇಲ್ಲದೇ ಪಾಕಿಸ್ತಾನಕ್ಕೆ ಏಕೆ ಹೋಗಬೇಕಿತ್ತು. ಅವರ ಉದ್ದೇಶವಾದರೂ ಏನು? ಕಾಂಗ್ರೆಸ್​ ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಜಾವಡೇಕರ್ ಆಗ್ರಹಿಸಿದರು.

ಇದನ್ನು ಓದಿ: ರಾಹುಲ್​ ರಾಜಕೀಯ ಗೊಂದಲದಲ್ಲಿದ್ದಾರೆ, ಅವರು ಮುತ್ತಾತಾನಿಂದ ಕಲಿಯುವುದು ಸಾಕಷ್ಟಿದೆ; ಪಾಕ್​ ಸಚಿವ ತಿರುಗೇಟು

ಜಾವಡೇಕರ್​ ಆರೋಪಕ್ಕೆ ಕಾಂಗ್ರೆಸ್​ ಕೂಡ ತಿರುಗೇಟು ನೀಡಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುವ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಇದೀಗ ಭಾರತದಲ್ಲಿ ರಾಜಕೀಯ ಧ್ರುವೀಕರಣದ ಮೂಲಕ ಅಧಿಕೃತ ದಾಖಲೆ ನೀಡಿ, ಪಾಕಿಸ್ತಾನಕ್ಕೆ ಬೆಂಬಲಿಸಿದೆ. ರಾಜಕೀಯ ಸ್ವಹಿತಾಸಕ್ತಿಗೆ ಮಿತಿಯೇ ಇಲ್ಲವೇ? ಎಂದು ಕಾಂಗ್ರೆಸ್​ ಪ್ರಶ್ನೆ ಮಾಡಿದೆ.ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ತನ್ನ ಹೇಳಿಕೆಯನ್ನು ಉಲ್ಲೇಖಿಸಿರುವುದಕ್ಕೆ ಕೆಂಡಮಂಡಲರಾಗಿರುವ ರಾಹುಲ್ ಗಾಂಧಿ, ಸರ್ಕಾರದ ಹಲವು ವಿಚಾರಗಳಿಗೆ ವಿರೋಧ ಪಕ್ಷದ ನಾಯಕನಾದ ನನಗೆ ಒಪ್ಪಿಗೆ ಇಲ್ಲ. ಕಾಶ್ಮೀರ ವಿಚಾರ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ. ಇದರಲ್ಲಿ ಪಾಕಿಸ್ತಾನ ಮೂಗು ತೂರಿಸಬೇಕಾಗಿಲ್ಲ ಎಂದು ಹೇಳಿಕೆ ನೀಡಿದ್ದರು.

First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ