ಛತ್ತೀಸ್​ಗಢದ ದಾಂತೇವಾಡದಲ್ಲಿ ಬಿಜೆಪಿ ವಾಹನ ಸ್ಪೋಟಿಸಿದ ನಕ್ಸಲರು; ಶಾಸಕ ಸೇರಿ ಐವರು ಪೊಲೀಸ್ ಅಧಿಕಾರಿಗಳ ಸಾವು

ಮೂರು ಹಂತದಲ್ಲಿ ಛತ್ತೀಸ್​ಗಢದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್​ 11ರಂದು ಮೊದಲ ಹಂತ, ಏಪ್ರಿಲ್ 18 ಹಾಗೂ ಏಪ್ರಿಲ್​ 23ರಂದು ಎರಡು, ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

news18
Updated:April 9, 2019, 6:27 PM IST
ಛತ್ತೀಸ್​ಗಢದ ದಾಂತೇವಾಡದಲ್ಲಿ ಬಿಜೆಪಿ ವಾಹನ ಸ್ಪೋಟಿಸಿದ ನಕ್ಸಲರು; ಶಾಸಕ ಸೇರಿ ಐವರು ಪೊಲೀಸ್ ಅಧಿಕಾರಿಗಳ ಸಾವು
ನಕ್ಸಲರು ಸ್ಫೋಟಿಸಿದ ವಾಹನ
  • News18
  • Last Updated: April 9, 2019, 6:27 PM IST
  • Share this:
ದಾಂತೇವಾಡ (ಛತ್ತೀಸ್​ಗಢ): ಲೋಕಸಭೆ ಚುನಾವಣೆಗೆ ಇನ್ನೆರಡು ದಿನ ಬಾಕಿ ಇರುವಾಗಲೇ ಇಲ್ಲಿನ ದಾಂತೇವಾಡದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಚುನಾವಣಾ ಪ್ರಚಾರ ನಿಮಿತ್ತ ತೆರಳುತ್ತಿದ್ದ ಬಿಜೆಪಿ ವಾಹನವನ್ನು ಸ್ಫೋಟಿಸಿದ್ದು,  ಸ್ಫೋಟದಲ್ಲಿ ದಾಂತೇವಾಡ ಕ್ಷೇತ್ರದ ಬಿಜೆಪಿ ಶಾಸಕ ಭೀಮಾ ಮಾಂಡವಿ, ಅವರ ಖಾಸಗಿ ಸಹಾಯಕ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ನಕ್ಸಲರು ಸುಧಾರಿತ ಐಇಡಿ ಬಾಂಬ್​ಅನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಚಾರ ನಿಮಿತ್ತು ತೆರಳುತ್ತಿದ್ದ ಬಿಜೆಪಿ ವಾಹನಗಳಲ್ಲಿ ಕೊನೆಯ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ. ಘಟನೆ ನಡೆದ ತಕ್ಷಣ ಸಿಆರ್​ಪಿಎಫ್​ ಯೋಧರು ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.ಎರಡು ದಿನದ ಹಿಂದೆ ನಕ್ಸಲರು ಇದೇ ವ್ಯಾಪ್ತಿಯಲ್ಲಿ ಕರಪತ್ರಗಳನ್ನು ಎಸೆದುಹೋಗಿದ್ದರು. "ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಜನವಾದಿ ಸಂಘಟನೆ ವ್ಯವಸ್ಥೆ ನಿರ್ಮಾಣಕ್ಕೆ ಈ ದಾಳಿ," ಎಂದು ಕರಪತ್ರದಲ್ಲಿ ವಿವರಿಸಲಾಗಿತ್ತು.

ಮೂರು ಹಂತದಲ್ಲಿ ಛತ್ತೀಸ್​ಗಢದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್​ 11ರಂದು ಮೊದಲ ಹಂತ, ಏಪ್ರಿಲ್ 18 ಹಾಗೂ ಏಪ್ರಿಲ್​ 23ರಂದು ಎರಡು, ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

(ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ...)

First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ