BJP Vs Shivsena: ಹಿಂದುತ್ವದ ಹೆಸರಿನಲ್ಲಿ ಬಾಳ ಠಾಕ್ರೆಗೆ ಮೋಸ ಮಾಡಿರೋದು ಬಿಜೆಪಿ: ಸಿಎಂ ಉದ್ಧವ್ ಠಾಕ್ರೆ

ಬಿಜೆಪಿಯ ಕುತಂತ್ರ ಯಶಸ್ವಿಯಾಗಲು ನಾನು ಬಿಡುವುದಿಲ್ಲ. ಅವರ ಪ್ರತಿಯೊಂದು ಕಾರ್ಯಗಳು ಮತ್ತು ಕಾರ್ಯತಂತ್ರಗಳ ಮೇಲೆ ನನ್ನ ಕಣ್ಣುಗಳು ಮತ್ತು ಕಿವಿಗಳಿವೆ' ಎಂದು ಹೇಳಿದ್ದಾರೆ.

ಸಿಎಂ ಉದ್ಧವ್ ಠಾಕ್ರೆ

ಸಿಎಂ ಉದ್ಧವ್ ಠಾಕ್ರೆ

  • Share this:
ನವದೆಹಲಿ, ಮೇ 2: ಮಹಾರಾಷ್ಟ್ರದಲ್ಲಿ (Maharashtra) ಬಿಜೆಪಿ (BJP) ಮತ್ತು ಶಿವಸೇನೆ (Shivsena) ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಹಿಂದುತ್ವದ (Hindutva) ಮೈತ್ರಿಯ ನೆಪದಲ್ಲಿ ಬಿಜೆಪಿಯು ಈ ಹಿಂದೆ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ (Shivsena Founder Bala Thackeray) ಅವರಿಗೆ ಮೋಸ ಮಾಡಿದೆ ಎಂದು ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Sena president and Maharashtra Chief Minister Uddhav Thackeray) ಅವರು ಬಿಜೆಪಿರ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇಯಲ್ಲ, "ಇನ್ನು ಮುಂದೆ ಎಂದೂ ಕೂಡ ಹಿಂದುತ್ವ ಅಜೆಂಡಾದ ಅಡಿಯಲ್ಲಿ ಬಿಜೆಪಿಯ ಕುತಂತ್ರವನ್ನು ಕಡೆಗಣಿಸುವುದಿಲ್ಲ" ಎಂದು ಹೇಳಿದ್ದಾರೆ.

ಬಿಜೆಪಿ ಅಜೆಂಡಾ ಗೆಲ್ಲಲು ಬಿಡಲ್ಲ

ಮಾಧ್ಯಮವೊಂದರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ, ನಾನು ಅಷ್ಟು ಮುಗ್ಧನಲ್ಲ. ಬಿಜೆಪಿಯ ಕಾರ್ಯಸೂಚಿಯನ್ನು ಚೆನ್ನಾಗಿ ತಿಳಿದಿದ್ದೇನೆ. ತಾಸೆ ಬಾಳಾ ಸಾಹೇಬ್ ಭೋಲೆ ಹೋತೆ, ಪುನ್ ಮೆ ನಹೀ... (ಕೆಲವು ರೀತಿಯಲ್ಲಿ ಬಾಳಾಸಾಹೇಬ್‌ಗೆ ಈ ಮುಗ್ಧತೆಯ ಗೆರೆ ಇತ್ತು. ಆದರೆ ನಾನು ಹಾಗಲ್ಲ) ಬಿಜೆಪಿಯ ಕುತಂತ್ರ ಯಶಸ್ವಿಯಾಗಲು ನಾನು ಬಿಡುವುದಿಲ್ಲ. ಅವರ ಪ್ರತಿಯೊಂದು ಕಾರ್ಯಗಳು ಮತ್ತು ಕಾರ್ಯತಂತ್ರಗಳ ಮೇಲೆ ನನ್ನ ಕಣ್ಣುಗಳು ಮತ್ತು ಕಿವಿಗಳಿವೆ' ಎಂದು ಹೇಳಿದ್ದಾರೆ.

ಶಿವಸೇನೆಗೆ ಹಿಂದುತ್ವ ಉಸಿರಿದ್ದಂತೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದೆ ಎಂದು ಕಿಡಿಕಾರಿರುವ ಉದ್ಧವ್ ಠಾಕ್ರೆ ಅವರು, ಮಹಾರಾಷ್ಟ್ರವನ್ನು ಎಲ್ಲಿಗೆ ಕೊಂಡೊಯ್ದಿದ್ದೀರಿ ಎಂದು ಜನರು ಬಿಜೆಪಿಯನ್ನು ಪ್ರಶ್ನೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  Prashant Kishor: ಯಾರು ಈ ಪ್ರಶಾಂತ್ ಕಿಶೋರ್? ಇವರ I-PAC ಕಂಪನಿ ಚುನಾವಣೆಗಳನ್ನು ಗೆಲ್ಲುತ್ತಿರುವುದು ಹೇಗೆ?

ಹಿಂದುತ್ವದ ಬಗ್ಗೆ ಮಾತನಾಡಿದ ಸಿಎಂ, ''ಶಿವಸೇನೆಗೆ ಹಿಂದುತ್ವ ಉಸಿರಿದ್ದಂತೆ. ನಾವು ಆಗೊಮ್ಮೆ ಈಗೊಮ್ಮೆ ನಮ್ಮ ಹಿಂದುತ್ವವನ್ನು ಸಾರ್ವಜನಿಕವಾಗಿ ಘೋಷಿಸಬೇಕಾಗಿಲ್ಲ. ಶಿವಸೇನೆಯು ಹಿಂದುತ್ವದ ಹೆಸರಿನ ಮೇಲೆ ವಿಲೇಪಾರ್ಲೆ ಯಲ್ಲಿ ತನ್ನ ಮೊದಲ ಉಪಚುನಾವಣೆಯಲ್ಲಿ ಹೋರಾಡಿ ಗೆದ್ದಿತು.

ಗಮನಾರ್ಹ ಸಂಗತಿಯೆಂದರೆ ಶಿವಸೇನೆಯು ಹಿಂದುತ್ವದ ಅಜೆಂಡಾದಲ್ಲಿ ಚುನಾವಣೆಗಳನ್ನು ಎದುರಿಸಿದಾಗ ಬಿಜೆಪಿ ಪಕ್ಷದ ವಿರುದ್ಧ ಅಭ್ಯರ್ಥಿಯನ್ನು ಹಾಕಿತು. ಶಿವಸೇನೆಯ ವಿಜಯದ ನಂತರ ಬಿಜೆಪಿ ನಾಯಕರು ಬಂದು ಬಾಳ್ ಠಾಕ್ರೆ ಅವರನ್ನು ಭೇಟಿ ಮಾಡಿದರು ಮತ್ತು ಹಿಂದುತ್ವದ ಬಗ್ಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟರು ಎಂದು ವಿವರಿಸಿದ್ದಾರೆ.

ಬಿಜೆಪಿಯ ಸೇಡಿನ ರಾಜಕಾರಣದ ಬಗ್ಗೆ ಠಾಕ್ರೆ ಕಿಡಿ

ಶಿವಸೇನೆ ಮತ್ತು ಬಿಜೆಪಿ ಮೈತ್ರಿಯನ್ನು ಹಾಗೇ ಉಳಿಸಿಕೊಳ್ಳಲು ಹಿಂದುತ್ವದ ಹೆಸರನ್ನು ಹೇಳುತ್ತಾ ಬಿಜೆಪಿ ನಾಯಕರು ಬಾಳ್ ಠಾಕ್ರೆಗೆ ಮೋಸ ಮಾಡಿದ್ದಾರೆ. ಹಿಂದುತ್ವ, ರಾಜ್ಯ ಮತ್ತು ದೇಶದ ಹಿತಾಸಕ್ತಿಗಾಗಿ ಬಾಳ್ ಠಾಕ್ರೆ ಅವರು ಬಿಜೆಪಿಯ ಕಿಡಿಗೇಡಿತನ ಮತ್ತು ಮೋಸವನ್ನು ಕಡೆಗಣಿಸಿದ್ದಾರೆ. ಆದರೆ ನಾನು ಅಷ್ಟು ಮುಗ್ಧನಲ್ಲ ಎಂದು ಅಬ್ಬರಿಸಿರುವ ಉದ್ಧವ್ ಠಾಕ್ರೆ, ಬಿಜೆಪಿಯ ಸೇಡಿನ ರಾಜಕಾರಣದ ಬಗ್ಗೆ ಮಾತನಾಡಿ, ಇದು ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯಾಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಸೇಡಿನ ರಾಜಕಾರಣವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  UCC: ಯಾವ ಮುಸ್ಲಿಂ ಮಹಿಳೆಯೂ ಗಂಡನಿಗೆ ಇನ್ನೂ 3 ಹೆಂಡತಿಯರಿರಲು ಬಯಸಲ್ಲ: ಅಸ್ಸಾಂ ಸಿಎಂ

ಎಂಎನ್‌ಎಸ್ ಗೆ ಪ್ರಾಮುಖ್ಯತೆ ಕೊಡಲ್ಲ

ರಾಜ್ ಠಾಕ್ರೆ ನಾಯಕತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಹಿಂದುತ್ವದ ಕಾರ್ಯಸೂಚಿಯನ್ನು ಕೈಗೆತ್ತಿಕೊಳ್ಳುವುದರ ಕುರಿತು ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, ಕೆಲವೊಮ್ಮೆ ಅವರು ಮರಾಠಿ ಕಾರ್ಡ್ ಅನ್ನು ಬಳಸುತ್ತಾರೆ. ಅದು ಇಲ್ಲದ ಸಂದರ್ಭದಲ್ಲಿ ಹಿಂದುತ್ವದ ಹೆಸರು ಹೇಳುತ್ತಾರೆ. ಅವರ ನಡೆಗಳು ಜನರಿಗೆ ಉಚಿತ ಮನರಂಜನೆಯನ್ನು ನೀಡುತ್ತಿವೆ. ನಾನು ಅವರಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
Published by:Mahmadrafik K
First published: