Kapil Sibal| ಉತ್ತರಪ್ರದೇಶ ಚುನಾವಣೆ ಲಾಭಕ್ಕಾಗಿ ಬಿಜೆಪಿ ತಾಲಿಬಾನ್ ವಿಷಯವನ್ನು ಬಳಸಲಿದೆ; ಕಪಿಲ್ ಸಿಬಲ್

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಭಾರತದ ಪಾತ್ರವಿಲ್ಲ. ಆದರೆ, ಇದನ್ನು ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎನ್ನುವುದನ್ನು ಒಕ್ಕೂಟ ಸರ್ಕಾರ ಯೋಜಿಸುತ್ತಿದೆ ಎಂದು ಕಪಿಲ್ ಸಿಬಲ್ ಆರೋಪಿಸಿದ್ದಾರೆ.

ಕಪಿಲ್ ಸಿಬಲ್.

ಕಪಿಲ್ ಸಿಬಲ್.

 • Share this:
  ನವ ದೆಹಲಿ (ಸೆಪ್ಟೆಂಬರ್ 10); ಸತತ 20 ವರ್ಷಗಳ ಉಗ್ರಗಾಮಿ ಹೋರಾಟದ ನಂತರ ಕೊನೆಗೂ ತಾಲಿಬಾನಿಗಳು (Taliban) ಅಫ್ಘಾನಿಸ್ತಾನವನ್ನು (Afghanistan) ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಹೊಸ ಸರ್ಕಾರವನ್ನೂ ರಚನೆ ಮಾಡಿದ್ಧಾರೆ. ತಾಲಿಬಾನ್ ಸರ್ಕಾರಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಈವರೆಗೆ ಮನ್ನಣೆ ನೀಡಿಲ್ಲ. ಈ ನಡುವೆ ತಾಲಿಬಾನಿಗಳ ಕ್ರೌರ್ಯತೆ ಮತ್ತು ಮತಾಂಧತೆ ಇಡೀ ವಿಶ್ವದಾದ್ಯಂತ ಈಗ ಮತ್ತೆ ಚರ್ಚಾಸ್ಪದ ವಿಚಾರವಾಗಿ ಬದಲಾಗಿದೆ. ಈ ನಡುವೆ ಭಾರತದಲ್ಲಿ ಮಹತ್ವದ ಉತ್ತರಪ್ರದೇಶ (Uttarapradesh Election) ವಿಧಾನಸಭೆಗೆ ಚುನಾವಣೆ ಎದುರಾಗಲಿದ್ದು, "ಈ ಚುನಾವಣೆಯಲ್ಲಿ ಬಿಜೆಪಿ ತನ್ನ ಅನುಕೂಲಕ್ಕಾಗಿ ಪ್ರಚಾರದ ವೇಳೆ ತಾಲಿಬಾನ್ ವಿಷಯವನ್ನು ಪ್ರಸ್ತಾಪಿಸಲಿದೆ. ಅಫ್ಘನ್ ಭಿಕ್ಕಟ್ಟನ್ನು ತಿರುಚಿ ಲಾಭ ಮಾಡಿಕೊಳ್ಳಲು ಕೇಂದ್ರ ಸರ್ಕಾರ (Central Government) ಪ್ರಯತ್ನಿಸುತ್ತದೆ" ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಶುಕ್ರವಾರ ಆರೋಪಿಸಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಕಪಿಲ್ ಸಿಬಲ್, "ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಭಾರತದ ಪಾತ್ರವಿಲ್ಲ. ಇದನ್ನು ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎನ್ನುವುದನ್ನು ಒಕ್ಕೂಟ ಸರ್ಕಾರ ಯೋಜಿಸುತ್ತಿದೆ. ಇದು ಕಹಿ ಸತ್ಯ! ಇದಕ್ಕಾಗಿ ಮಾಧ್ಯಮ ಈಗಾಗಲೇ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ!" ಎಂದು ಕಪಿಲ್‌ ಸಿಬಲ್ ಟ್ವೀಟ್ ಮಾಡಿದ್ದಾರೆ.

  ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಗುರುವಾರದಂದು ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು, ದಾಳಿ ಮಾಡಲು, ಭಯೋತ್ಪಾದಕರಿಗೆ ಆಶ್ರಯ ನೀಡಲು, ತರಬೇತಿ ನೀಡಲು, ತಾಲಿಬಾನ್ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲು ಹಾಗೂ ಹಣಕಾಸು ಒದಗಿಸಲು ಬಳಸಬಾರದು ಎಂದು ಹೇಳಿದ್ದಾರೆ.

  ಅಫ್ಘಾನಿಸ್ತಾನದ ಜನರ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಭಾರತ ಒತ್ತು ನೀಡಿದೆ. ಭಾರತವು ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ 500 ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾಡಿದ ಭಾಷಣದಲ್ಲಿ ತಿರುಮೂರ್ತಿಯವರು ಮಾಹಿತಿ ನೀಡಿದ್ದರು.

  ಇದನ್ನೂ ಓದಿ: ಅವರಿವರಿಂದ ಶೂ ಪಡೆದು ಬೌಲಿಂಗ್ ಮಾಡುತ್ತಿದ್ದೆ: ಕಷ್ಟದ ದಿನಗಳನ್ನ ನೆನೆದ ಭಾರತದ ಆಲ್​ರೌಂಡರ್

  ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌‌ ಸರ್ಕಾರವನ್ನು ರಚಿಸಿರುವುದಾಗಿ ಘೋಷಿಸಿದೆ. ಇದರ ನಡುವೆಯೆ ನೆರೆಯ ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಭುಗಿಲೆದ್ದಿದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ, ಜನರಿಂದ ತೀವ್ರ ಆಕ್ರೋಶವನ್ನು ತಾಲಿಬಾನ್‌ ಎದುರಿಸುತ್ತಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸೇರಿದಂತೆ ಪತ್ರಕರ್ತರು, ಮಹಿಳೆಯರು ಮತ್ತು ಹೋರಾಟಗಾರರು ದೇಶದ ಹೊಸ ಸರ್ಕಾರದ ವಿರುದ್ದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
  Published by:MAshok Kumar
  First published: