ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬೆನ್ನಿಗೆ ನಿಂತ ಬಿಜೆಪಿ; ಸಿಎಂ ಜಗನ್​​ ವಿರುದ್ಧ ವಾಗ್ದಾಳಿ

ಈ ಮಧ್ಯೆ ತನ್ನ ಸರ್ಕಾರದ ಮೇಲೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೂಡ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಕೂಡ ಸಿಎಂ ಜಗನ್​​ ಮೋಹನ್​​ ರೆಡ್ಡಿ ಅವರಿಗೆ ಇದೇ ಬೇಡಿಕೆ ಇಟ್ಟಿರುವುದು ಗಮನಾರ್ಹ ಸಂಗತಿ.

Ganesh Nachikethu | news18
Updated:August 9, 2019, 4:33 PM IST
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬೆನ್ನಿಗೆ ನಿಂತ ಬಿಜೆಪಿ; ಸಿಎಂ ಜಗನ್​​ ವಿರುದ್ಧ ವಾಗ್ದಾಳಿ
ಸಿಎಂ ಚಂದ್ರಬಾಬು ನಾಯ್ಡು, ವೈಎಸ್​​​ ಜಗನ್​​ ಮೋಹನ್​ ರೆಡ್ಡಿ
  • News18
  • Last Updated: August 9, 2019, 4:33 PM IST
  • Share this:
ಹೈದರಾಬಾದ್​​(ಆಗಸ್ಟ್​​.09): ಮುಖ್ಯಮಂತ್ರಿ ವೈ.ಎಸ್​​ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಬಿಜೆಪಿಯ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕನ್ನಾ ಲಕ್ಷ್ಮೀನಾರಾಯಣ ಅವರು, ವೈಎಸ್​​ಆರ್​​ ಕಾಂಗ್ರೆಸ್​​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೀಗ, ಕನ್ನಾ ಲಕ್ಷ್ಮೀನಾರಾಯಣ ನೀಡಿರುವ ಹೇಳಿಕೆಯೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷಕ್ಕೆ ಅನುಕೂಲಕರವಾಗಿದೆ ಎಂಬುದು ವಿಶೇಷ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕನ್ನಾ ಲಕ್ಷ್ಮೀನಾರಾಯಣ, "ಸಿಎಂ ಜಗನ್​​ ಮೋಹನ್​​ ರೆಡ್ಡಿಯವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಹಿಂದಿನ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಅಪಾರ ಪ್ರಮಾಣದಲ್ಲಿ ಭ್ರಷ್ಟಚಾರ ಮಾಡಿದೆ ಎಂದು ವೈಎಸ್​​ಆರ್​​​ ಕಾಂಗ್ರೆಸ್​ ಸರ್ಕಾರ ಆರೋಪಿಸಿದೆ. ಆದರೆ, ಇಲ್ಲಿಯವರೆಗೂ ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಕಡತಗಳನ್ನು ಯಾಕೇ ಬಿಡುಗಡೆ ಮಾಡಿಲ್ಲ?" ಎಂದು ಪ್ರಶ್ನಿಸಿದ್ದಾರೆ.

ಇನ್ನು ವೈಎಸ್​ಆರ್​​ ಕಾಂಗ್ರೆಸ್​​ ಸರ್ಕಾರ ಚಂದ್ರಬಾಬು ನಾಯ್ಡು ಸರ್ಕಾರದ ಮೇಲೆ ಅಪಾರ ಪ್ರಮಾಣದ ಭ್ರಷ್ಟಚಾರ ಆರೋಪ ಎಸಗಿದೆ. ಹಾಗೆಯೇ, ಈ ಭ್ರಷ್ಟಚಾರದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿ ವಿಸ್ತೃತ ವರದಿ ತಯಾರಿಸಲು ಸಮಿತಿ ಕೂಡ ರಚಿಸಲಾಗಿದೆ. ಸದ್ಯ ಸಿಎಂ ಜಗನ್​​ ಮೋಹನ್​​ ರೆಡ್ಡಿ ಅವರು, ಸಮಿತಿ ಆಧಾರದ ಮೇಲೆಯೇ ಚಂದ್ರಬಾಬು ನಾಯ್ಡು ಸರ್ಕಾರ ಭ್ರಷ್ಟಚಾರ ಮಾಡಿತ್ತು ಎಂದು ಘೋಷಿಸಿದೆ. ಯಾವುದೇ ದಾಖಲೆ ಬಿಡುಗಡೆ ಮಾಡದೆ, ಹೀಗೆ ಆರೋಪ ಮಾಡಿದ ವೈಎಸ್​ಆರ್​​ ಕಾಂಗ್ರೆಸ್​​ ಸರ್ಕಾರದ ನಡೆ ಮೇಲೆ ಶಂಕೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಪೋಲವರಂ ಕಾಂಟ್ರಾಕ್ಟ್​ ಕೈಬಿಡುವಂತೆ ಗುತ್ತಿಗೆದಾರನಿಗೆ ನೋಟಿಸ್​​; ಸಿಎಂ ಜಗನ್​​​ ಮಹತ್ವದ ಆದೇಶ

ಆಂಧ್ರ ಪ್ರದೇಶದ ಮಹತ್ವಾಕಾಂಕ್ಷಿ ಪೊಲವರಂ ನೀರಾವರಿ ಯೋಜನೆ ವಿಚಾರದಲ್ಲಿ ಸಿಎಂ ಜಗನ್​​ ಮೋಹನ್​​ ರೆಡ್ಡಿ ನಡೆದುಕೊಳ್ಳುತ್ತಿರುವ ನೀಡಿ ನೋಡಿದರೆ ಅನುಮಾನ ಮೂಡುತ್ತಿದೆ. ಈ ತಿಂಗಳ ಮೊದಲ ವಾರದಿಂದ ಪೋಲವರಂ ಯೋಜನೆ ಕಾಮಗಾರಿ ಶುರುವಾಗಲಿದೆ ಎಂದಿದ್ದರು. ಇದಕ್ಕೆ ಸಂಬಂಧ ಇನ್ನೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಹಿಂದಿನ ಟಿಡಿಪಿ ಸರ್ಕಾರ ಈ ಯೋಜನೆ ಹೆಸರಿನಲ್ಲಿ ಭ್ರಷ್ಟಚಾರ ಮಾಡಿದೆ. ಅನುದಾನ ಬಿಡುಗಡೆ ಮಾಡಿ ಪರ್ಸೆಂಟೇಜ್​​ ಲೆಕ್ಕದಲ್ಲಿ ಕಮೀಷನ್ ತಿಂದಿದೆ ಎಂದು ಜಗನ್​​ ಆರೋಪಿಸಿದ್ದಾರೆ. ಕೇವಲ ಆರೋಪ ಎಸಗುತ್ತಿರುವ ಸರ್ಕಾರ ದಾಖಲೆ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಿಲ್ಲ ಎಂದು ಕನ್ನಾ ಲಕ್ಷ್ಮೀನಾರಾಯಣ ಕುಟುಕಿದರು.

ಈ ಮಧ್ಯೆ ತನ್ನ ಸರ್ಕಾರದ ಮೇಲೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೂಡ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಕೂಡ ಸಿಎಂ ಜಗನ್​​ ಮೋಹನ್​​ ರೆಡ್ಡಿ ಅವರಿಗೆ ಇದೇ ಬೇಡಿಕೆ ಇಟ್ಟಿರುವುದು ಗಮನಾರ್ಹ ಸಂಗತಿ.
------------
First published:August 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ