ಜೆಡಿಯು-ಬಿಜೆಪಿ ಸೀಟು ಹಂಚಿಕೆ; ಬಿಹಾರದಲ್ಲಿ ನಿತೀಶ್​ ನಮ್ಮ ನಾಯಕ ಎಂದ ಬಿಜೆಪಿ

ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಇದೇ ಅ.28ರಿಂದ ಚುನಾವಣೆ ನಡೆಯಲಿದೆ. ಮೂರು ಹಂತದಲ್ಲಿ ಮತದಾನ ನಡೆಯಲಿದ್ದು, ನ.10ರಂದು ಮತ ಏಣಿಕೆ ನಡೆಯಲಿದೆ.

ಬಿಹಾರದ ಸಿಎಂ ನಿತೀಶ್‌ ಕುಮಾರ್‌.

ಬಿಹಾರದ ಸಿಎಂ ನಿತೀಶ್‌ ಕುಮಾರ್‌.

 • Share this:
  ರಾಂಚಿ (ಅ6): ಬಿಜೆಪಿ ಜೊತೆ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಜೆಡಿಯು ಇಂದು ಸೀಟು ಹಂಚಿಕೆ ಕುರಿತು ಸ್ಪಷ್ಟಪಡಿಸಿದೆ. ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಯು 122 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಬಿಹಾರ್​ ಮುಖ್ಯಮಂತ್ರಿ ನಿತೀಶ್​ ಕುಮಾರ್​ ತಿಳಿಸಿದ್ದಾರೆ. ಜೆಡಿಯು ತನಗೆ ಹಂಚಿಕೆಯಾಗಿರುವ ಸೀಟುಗಳಲ್ಲಿ ಏಳ ಸ್ಥಾನಗಳನ್ನು ಜೀತಾನ್​ ರಾಮ್​ ಮಾಂಜಿ ಅವರ ಹಿಂದೂಸ್ಥಾನಿ ಅವಮ್​ ಮೋರ್ಚಾ (ಎಚ್​ಎ ಎಂ)ಗೆ ನೀಡಿದೆ. ಇದೇ ವೇಳೆ ಬಿಜೆಪಿ ವಿಕಾಸ್​ಶೀಲ್​ ಇನ್ಸಾನ್​ ಪಕ್ಷಕ್ಕೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದು, ಅಂತಿಮ ತೀರ್ಮಾನವಾಗಿಲ್ಲ. ಆದರೆ, ತನ್ನ 121 ಸೀಟುಗಳಲ್ಲಿ ಆರು ಸೀಟುಗಳನ್ನು ವಿಐಪಿಗೆ ನೀಡುವುದಾಗಿ ತಿಳಿಸಿದೆ. ಈ ಮಧ್ಯೆ ಜೆಡಿಯು ಮತ್ತು ಎನ್​ಡಿಎ ಮಿತ್ರ ಪಕ್ಚವಾದ ಚಿರಾಗ್​ ಪಾಸ್ವಾನ್​ ನೇತೃತ್ವದ ಎಲ್​ಜೆಪಿ ಏಕಾಂಗಿಯಾಗಿ ಹೋರಾಟ ಮಾಡಲು ನಿರ್ಧರಿಸಿದೆ.

  ಕೇಂದ್ರದಲ್ಲಿ ಎಲ್​ಜೆಪಿ ಕೇಂದ್ರದ ಮಿತ್ರ ಪಕ್ಷವಾಗಿದ್ದು, ಬಿಹಾರದಲ್ಲಿ ಮಾತ್ರ ಏಕಾಂಗಿಯಾಗಿ ಹೋರಾಟ ಮಾಡುತ್ತಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಮುಖ್ಯಸ್ಥ ಸಂಜಯ್​ ಜೈಸ್ವಾಲ್​, ಬಿಹಾರದಲ್ಲಿ ನಿತೀಶ್​ ನಮ್ಮ ನಾಯಕರು ಎಂಬುದರಲ್ಲಿ ಅನುಮಾನವಿಲ್ಲ. ಎಲ್​ಜೆಪಿ ಕೇಂದ್ರದಲ್ಲಿ ನಮ್ಮ ಮಿತ್ರಪಕ್ಷ ಎಂದಿದ್ದಾರೆ.  ಜೆಡಿಯುಗೆ ಬೆಂಬಲದೊಂದಿಗೆ ರಾಮ್​ ವಿಲಾಸ್​ ಪಾಸ್ವಾನ್​ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ, ಹೀಗಾಗಿ ನಿತೀಶ್​ ಕುಮಾರ್​ ಅವರೇ ಬಿಹಾರದಲ್ಲಿ ನಮ್ಮ ನಾಯಕರು ಎಂದು ಎಂದು ಘೋಷಿಸಿದ್ದಾರೆ.

  ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಇದೇ ಅ.28ರಿಂದ ಚುನಾವಣೆ ನಡೆಯಲಿದೆ. ಮೂರು ಹಂತದಲ್ಲಿ ಮತದಾನ ನಡೆಯಲಿದ್ದು, ನ.10ರಂದು ಮತ ಏಣಿಕೆ ನಡೆಯಲಿದೆ.
  Published by:Seema R
  First published: