ಆರನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; ಮಂಡ್ಯದಲ್ಲಿ ಸುಮಲತಾಗೆ ಬೆಂಬಲ

"ಕರ್ನಾಟಕದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಮುಂದೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿಲ್ಲ. ಅವರಿಗೆ ಬಿಜೆಪಿ ಬೆಂಬಲ ನೀಡಲು ನಿರ್ಧರಿಸಿದೆ," ಎಂದರು

news18
Updated:March 28, 2019, 9:11 PM IST
ಆರನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; ಮಂಡ್ಯದಲ್ಲಿ ಸುಮಲತಾಗೆ ಬೆಂಬಲ
ಸಾಂದರ್ಭಿಕ ಚಿತ್ರ
news18
Updated: March 28, 2019, 9:11 PM IST
ನವದೆಹಲಿ: ಕೇಂದ್ರ ಸಚಿವ ಜಗತ್​ ಪ್ರಕಾಶ್​ ನಡ್ಡಾ ನವೆದಹಲಿಯಲ್ಲಿ ಇಂದು ಬಿಜೆಪಿಯ ಆರನೇ ಸುತ್ತಿನ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಜತೆಗೆ ಸುಮಲತಾಗೆ ಬೆಂಬಲ ನೀಡಲು ಅಧಿಕೃತವಾಗಿ ನಿರ್ಧರಿಸಲಾಗಿದೆ. ಈ ಬಗ್ಗೆಯೂ ಮಾತನಾಡಿದ ಜೆಪಿ ನಡ್ಡಾ, "ಕರ್ನಾಟಕದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಮುಂದೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿಲ್ಲ. ಅವರಿಗೆ ಬಿಜೆಪಿ ಬೆಂಬಲ ನೀಡಲು ನಿರ್ಧರಿಸಿದೆ," ಎಂದರು.

ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗೆ ಮಾಡಿತ್ತು. ಆದರೆ ಈ ಬಾರಿಯೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್​ ಕುಮಾರ್​ಗೆ ಟಿಕೆಟ್​ ನೀಡಿಲ್ಲ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಲ್ಲಿ ನಿಲ್ಲುತ್ತಾರೆ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಜತೆಗೆ ಕೋಲಾರ ಕ್ಷೇತ್ರದಿಂದ ಮುನಿಸ್ವಾಮಿಯವರಿಗೆ ಟಿಕೆಟ್​ ನೀಡಲಾಗಿದೆ. ಗೋವಾದ ಎರಡು ಕ್ಷೇತ್ರ, ಮಧ್ಯಪ್ರದೇಶದ 17 ಕ್ಷೇತ್ರ, ಜಾರ್​ಖಂಡ್​ನ 10 ಕ್ಷೇತ್ರ, ಗುಜರಾತ್​ನ 14 ಕ್ಷೇತ್ರ, ಹಿಮಾಚನ ಪ್ರದೇಶದ ನಾಲ್ಕು ಕ್ಷೇತ್ರ, ಕರ್ನಾಟಕದ ಕೋಲಾರ ಕ್ಷೇತ್ರ ಮತ್ತು ಸುಮಲತಾಗೆ ಬೆಂಬಲ ಘೋಷಿಸಲಾಗಿದೆ. ಮತ್ತು ಗೋವಾದ ಮೂರು ಮತ್ತು ಗುಜರಾತ್​ನ ಮೂರು ವಿಧಾನಸಭೆ ಉಪಚುನಾವಣೆಗಳಿಗೂ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಇನ್ನಷ್ಟು ಮಾಹಿತಿ ಶೀಘ್ರದಲ್ಲಿ...
First published:March 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...