Rajya Sabha Election: ರಾಜ್ಯಸಭೆಗೆ ಜಗ್ಗೇಶ್! ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಬಿಜೆಪಿ ಟಿಕೆಟ್

ಒಕ್ಕಲಿಗ ಸಮುದಾಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜಗ್ಗೇಶ್ ಅವರ ಹೆಸರನ್ನು ಪರಿಗಣನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಗ್ಗೇಶ್​

ಜಗ್ಗೇಶ್​

  • Share this:
    ಬೆಂಗಳೂರು: ರಾಜ್ಯಸಭೆಗೆ ಬಿಜೆಪಿ (BJP) ಟಿಕೆಟ್ ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ (Nirmala Sitharaman) ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಜೊತೆಗೆ ಬಿಜೆಪಿ ನಾಯಕ ಜಗ್ಗೇಶ್ (Jaggesh) ಅವರಿಗೂ ಬಿಜೆಪಿ ರಾಜ್ಯಸಭೆಗೆ ಟಿಕೆಟ್(BJP Rajya Sabha Ticket) ಘೋಷಿಸಿದೆ.  ಬಿ.ಎಲ್. ಸಂತೋಷ್ (BL Santhosh) ಬೆಂಬಲದ ನಡುವೆಯೂ ನಿರ್ಮಲ ಕುಮಾರ್ ಸುರಾನಾಗೂ ಟಿಕೆಟ್ ನೀಡಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಲೆಹರ್ ಸಿಂಗ್​ ಅವರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಬಂದಿದ್ದ ಕೆ.ಸಿ. ರಾಮಮೂರ್ತಿ ಅವರಿಗೂ ಟಿಕೆಟ್ ಸಿಕ್ಕಿಲ್ಲ. ಯಡಿಯೂರಪ್ಪ ಬೆಂಬಲಿಗ ಲೆಹರ್ ಸಿಂಗ್ ಅವರಿಗೂ ಟಿಕೆಟ್ ದೊರೆತಿಲ್ಲ.

    ಕೇವಲ ಇಬ್ಬರು ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಬಿಜೆಪಿ 3ನೇ ಸ್ಥಾನವನ್ನು ಖಾಲಿ ಉಳಿಸಿಕೊಂಡಿದೆ. ಈಮೂಲಕ ಕಾದು ನೋಡುವ ತಂತ್ರವನ್ನು ಬಿಜೆಪಿ ಅನುಸರಿಸಿದೆ.



    ಬಿಜೆಪಿಯಿಂದ ಕಾದು ನೋಡುವ ತಂತ್ರ
    ಜೆಡಿಎಸ್ ನಿಲುವು ನೋಡಿಕೊಂಡು ನಾಳೆ ಮತ್ತೊಂದು ಸೀಟಿನ ಬಗ್ಗೆ ನಿರ್ಧಾರ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗಿದೆ. ಒಕ್ಕಲಿಗ ಸಮುದಾಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜಗ್ಗೇಶ್ ಅವರ ಹೆಸರನ್ನು ಪರಿಗಣನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.


    ಇದನ್ನೂ ಓದಿ: Karnataka High Court: ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ಬೇಗ ಬೇಗ ತನಿಖೆ ನಡೆಸಿ: ಹೈಕೋರ್ಟ್ ಖಡಕ್ ಸೂಚನೆ

    ಚುನಾವಣೆ ಯಾವಾಗ?
    57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದೆ. ಈ ಸ್ಥಾನಗಳು ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

    Electronics City Roads: ಗುಂಡಿ ಇಲ್ಲದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ರಸ್ತೆ, ಇದು ಕನಸಲ್ಲ ನಿಜ!

    ಇತರ ರಾಜ್ಯಗಳಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದೆ?
    ಪಿಯೂಷ್ ಗೋಯಲ್ ಅವರಿಗೆ ಮಹಾರಾಷ್ಟ್ರದಿಂದ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡಿದೆ. ಉತ್ತರ ಪ್ರದೇಶದಿಂದ ಬಿಜೆಪಿ 6 ಅಭ್ಯರ್ಥಿಗಳನ್ನು ಹೆಸರನ್ನು ಘೋಷಿಸಿದೆ. ಉತ್ತರ ಪ್ರದೇಶದಿಂದ ರಾಜ್ಯಸಭಾ ಟಿಕೆಟ್ ಪಡೆದವರಲ್ಲಿ ಡಾ.ಲಕ್ಷ್ಮೀಕಾಂತ್ ಬಾಜಪೇಯ್, ಡಾ.ರಾಧಾ ಮೋಹನ್ ಅಗರ್ವಾಲ್, ಸುರೇಂದ್ರ ಸಿಂಗ್ ನಗರ, ಬಾಬುರಾಮ್ ನಿಶಾದ್, ದರ್ಶನಾ ಸಿಂಗ್, ಸಂಗೀತಾ ಯಾದವ್. ಉತ್ತರಾಖಂಡದಿಂದ ಡಾ.ಕಲ್ಪನಾ ಸೈನಿ ಅವರು ಸೇರಿದ್ದಾರೆ. ಬಿಹಾರದಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಸತೀಶ್ ಚಂದ್ರ ದುಬೆ ಮತ್ತು ಶಂಭು ಶರಣ್ ಪಟೇಲ್ ಬಿಜೆಪಿಯಿಂದ ರಾಜ್ಯಸಭೆಗೆ ಟಿಕೆಟ್ ಪಡೆದಿದ್ದಾರೆ. ಹರಿಯಾಣದಿಂದ ಕ್ರಿಶನ್ ಲಾಲ್ ಪನ್ವಾರ್ ಅವರಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡಿದೆ.
    Published by:guruganesh bhat
    First published: