Maharashtra Politics| 'ಬಿಜೆಪಿ-ಶಿವಸೇನೆ ಶತ್ರುಗಳಲ್ಲ'; ಮೈತ್ರಿ ಸಾಧ್ಯತೆಗಳ ಬಗ್ಗೆ ದೇವೇಂದ್ರ ಫಡ್ನವೀಸ್​ ಹೊಸ ರಾಗ

ಮಾಜಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಟ್ಟಿಗೆ ಸೇರಲಿದ್ದಾರೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವಿಸ್, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ-ದೇವೇಂದ್ರ ಫಡ್ನವೀಸ್.

ಉದ್ಧವ್ ಠಾಕ್ರೆ-ದೇವೇಂದ್ರ ಫಡ್ನವೀಸ್.

 • Share this:
  ಮುಂಬೈ (ಜುಲೈ 05); ಒಂದು ಕಾಲದ ಮೈತ್ರಿಯಾಗಿದ್ದ ಬಿಜೆಪಿ ಮತ್ತು ಶಿವಸೇನೆ ಕಳೆದ ಎರಡು ವರ್ಷಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿದೆ. ಸಿಎಂ ಸ್ಥಾನಕ್ಕಾಗಿ ಕಿತ್ತಾಡಿ ಎರಡೂ ಪಕ್ಷಗಳೂ ದೂರವಾಗಿದ್ದವು. ಈ ನಡುವೆ ಶೀವಸೇನೆ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ "ಮಹಾ ವಿಕಾಸ್ ಅಘಾಡಿ" ಹೆಸರಿನಲ್ಲಿ ಕಾಂಗ್ರೆಸ್​ ಮತ್ತು ರಾಷ್ಟ್ರವಾದಿ ಕಾಂಗ್ರೆಸ್​ ಜೊತೆ ಮೈತ್ರಿ ಸಾಧಿಸಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯು ಶಿವಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿತ್ತು. ಅದರಲ್ಲೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಟೀಕಿಗಳ ಸುರಿಮಳೆಯನ್ನೆ ಸುರಿಸುತ್ತಿದ್ದರು. ಆದರೆ ಭಾನುವಾರದಂದು ಅವರು "ಶಿವಸೇನೆ ಎಂದಿಗೂ ಬಿಜೆಪಿಯ ಶತ್ರುವಲ್ಲ" ಎಂದು ಘೋಷಿಸಿದ್ದಾರೆ. ಇದು ಮಹಾರಾಷ್ಟ್ರ ರಾಜಕೀಯ ವಲಯವು ಮಹತ್ವದ ಬೆಳವಣಿಗೆಯತ್ತ ಸಾಗುತ್ತಿದೆ ಎಂಬುದರ ಸೂಚಕವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

  ಮಾಜಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಟ್ಟಿಗೆ ಸೇರಲಿದ್ದಾರೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವಿಸ್, "ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.  ಒಕ್ಕೂಟ ಸರ್ಕಾರದ ಗೃಹ ಸಚಿವರ ಭೇಟಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಶಿವಸೇನೆಯೊಂದಿಗೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯ ಕುರಿತು ಫಡ್ನವಿಸ್‌ ಮಾತನಾಡಿದ್ದಾರೆ. “ನಾವು ಮತ್ತು ಶಿವಸೇನೆ ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು. ಅವರು ಯಾರ ವಿರುದ್ದ ಹೋರಾಟ ನಡೆಸಿದರೂ ಅವರೊಂದಿಗೆ ಸರ್ಕಾರ ರಚಿಸಿ ನಮ್ಮ ತೊರೆದರು” ಎಂದು ಅವರು ಹೇಳಿದ್ದಾರೆ.

  "ರಾಜಕೀಯದಲ್ಲಿ ಚಾಲ್ತಿಯಲ್ಲಿರುವ ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಫಡ್ನವಿಸ್ ಹೇಳಿದ್ದಾರೆ. ಮಹಾರಾಷ್ಟ್ರ ಆಡಳಿತ ಪಕ್ಷದಲ್ಲಿ ಒಂದಾದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕರ ವಿರುದ್ಧ ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳು ಕೈಗೊಂಡ ಕ್ರಮಗಳ ಮಧ್ಯೆ ಸ್ನೇಹದ ಕುರಿತು ಘೋಷಣೆಯಾಗಿದೆ.

  ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮೈತ್ರಿಯನ್ನು ಅಸ್ಥಿರಗೊಳಿಸಲು ಒಕ್ಕೂಟ ಸರ್ಕಾರವು ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಶಿವಸೇನೆ ಮತ್ತು ಎನ್‌ಸಿಪಿ ಹೇಳುತ್ತಲೆ ಬಂದಿದೆ.

  ಈ ಮಧ್ಯೆ ಮಹಾರಾಷ್ಟ್ರ ಸರ್ಕಾರದ ಮತ್ತೊಂದು ಮಿತ್ರಪಕ್ಷವಾದ ಕಾಂಗ್ರೆಸ್‌ನ ನಾಯಕರು ಶಿವಸೇನೆಯೊಂದಿಗಿನ ಮೈತ್ರಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ, ಮುಂದಿನ ಐದು ವರ್ಷಗಳ ಕಾಲ ತಾವು ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿಯೊಂದಿಗೆ ಇದ್ದೇವೆ ಎಂದು ಕಾಂಗ್ರೆಸ್ ನಂತರ ಸ್ಪಷ್ಟಪಡಿಸಿತ್ತು. ಅದಾಗ್ಯೂ ಮೈತ್ರಿಯಲ್ಲಿ ಬಿರುಕು ಮೂಡುತ್ತಿದೆ ಎಂಬ ವದಂತಿಗಳು ಮಾಧ್ಯಮದಲ್ಲಿ ಹರಿದಾಡುತ್ತಲೆ ಇದೆ.

  ಇದನ್ನೂ ಓದಿ: ಜಗತ್ತು ಕೋವಿಡ್‌- 19 ಗಿಂತ ಭೀಕರವಾದ ಮತ್ತೊಂದು ಸಾಂಕ್ರಾಮಿಕಕ್ಕೆ ತುತ್ತಾಗಲಿದೆ: ವಾರೆನ್ ಬಫೆಟ್ ಎಚ್ಚರಿಕೆ

  ಈ ವಾರದ ಆರಂಭದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ್ದರು. ಅದೇ ದಿನ ಕ್ಯಾಬಿನೆಟ್ ಸಚಿವ ಜೀತೇಂದ್ರ ಅವಾದ್, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಆದಿತ್ಯ ಠಾಕ್ರೆ ಅವರಂತಹ ಹಲವಾರು ನಾಯಕರು ಅವರನ್ನು ಭೇಟಿಯಾಗಿದ್ದಾರೆ.

  ಕಳೆದ ತಿಂಗಳು, ಉದ್ದವ್‌‌ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಂದಾದ ಮೇಲೊಂದು ಸಭೆ ನಡೆಸಿದ್ದರು. ಶಿವಸೇನೆ ಇದನ್ನು ವೈಯಕ್ತಿಕ ಮತ್ತು ಶಿಷ್ಟಾಚಾರದ ಸಭೆ, ಪಕ್ಷವು ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ, ವೈಯಕ್ತಿಕ ಸಂಬಂಧಗಳನ್ನು ಗೌರವಿಸುತ್ತದೆ ಎಂದು ಹೇಳಿತ್ತು.

  ಇದನ್ನೂ ಓದಿ: ಎಲ್ಗರ್ ಪರಿಷದ್​ ಪ್ರಕರಣ: ಹೋರಾಟಗಾರ ಫಾದರ್​ ಸ್ಟಾನ್​ ಸ್ವಾಮಿ (84) ನಿಧನ

  ಶನಿವಾರ, ಮೈತ್ರಿಯಲ್ಲಿನ ಬಿರುಕುಗಳ ಊಹಾಪೋಹಗಳನ್ನು ಹೋಗಲಾಡಿಸುವ ಪ್ರಯತ್ನದ ಮಾಡಿದ ಶಿವಸೇನೆ ಸಂಸದ ಸಂಜಯ್ ರಾವತ್, "ಇಂತಹ ವದಂತಿಗಳು ಹೆಚ್ಚು ಹರಡಿದಂತೆ, ಮಹಾವಿಕಾಶ್ ಅಘಾಡಿ ಮೈತ್ರಿ ಬಲಗೊಳ್ಳುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

  "ಬಿಜೆಪಿಯು ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳನ್ನು ಬಳಸಿ ನಮ್ಮನ್ನು ಬೆದರಿಸುತ್ತಿದ್ದು. ನಮ್ಮ ಶಾಸಕರ ಉಳಿವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು" ಎಂದು ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆಗೆ ಪತ್ರ ಬರೆದಿದ್ದರು.
  Published by:MAshok Kumar
  First published: