ನಿರ್ಭಯಾ ಅತ್ಯಚಾರಿಗಳ ರಕ್ಷಣೆಗೆ ದೆಹಲಿ ಎಎಪಿ​​ ಸರ್ಕಾರ ಯತ್ನಿಸುತ್ತಿದೆ: ಬಿಜೆಪಿ ಆರೋಪ

ಅತ್ಯಾಚಾರಿಗಳಿಗೆ ಶಿಕ್ಷೆ ನೀಡದಂತೆ ತಡೆಯಲು ಆಪ್​​ ಸರ್ಕಾರ ಉದ್ದೇಶಪೂರ್ವಕಾಗಿ ಎರಡು ವರ್ಷಗಳಿಂದ ಯತ್ನಿಸುತ್ತಿದೆ. ಎರಡು ವರ್ಷಗಳ ಹಿಂದೆಯೇ ಪ್ರಕರಣ ಸಂಬಂಧ ಕೋರ್ಟ್​ಗೆ ನೀಡ ಬೇಕಾಗಿದ್ದ ಮಾಹಿತಿಯನ್ನು 2019ರಲ್ಲಿ ನೀಡಿದೆ ಎಂದು ಮನೋಜ್​​ ತಿವಾರಿ ದೂರಿದ್ದಾರೆ.

news18-kannada
Updated:January 20, 2020, 11:40 AM IST
ನಿರ್ಭಯಾ ಅತ್ಯಚಾರಿಗಳ ರಕ್ಷಣೆಗೆ ದೆಹಲಿ ಎಎಪಿ​​ ಸರ್ಕಾರ ಯತ್ನಿಸುತ್ತಿದೆ: ಬಿಜೆಪಿ ಆರೋಪ
ರೇಖಾಚಿತ್ರ- ಮೀರ್ ಸುಹೈಲ್
  • Share this:
ನವದೆಹಲಿ(ಜ.19): ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ದೋಷಿಗಳ ರಕ್ಷಣೆಗೆ ದೆಹಲಿಯ ಆಪ್​​ ಸರ್ಕಾರ ಯತ್ನಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್​​​ ತಿವಾರಿ, ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ದೋಷಿಗಳನ್ನು ರಕ್ಷಿಸಲು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಪ್ರಯತ್ನಿಸುತ್ತಿದೆ. ನ್ಯಾಯಲಯ ತೀರ್ಪಿನ ಪ್ರಕ್ರಿಯೆಗೆ ಅಡ್ಡಿಪಡಿಸುವ ಮೂಲಕ ಆಪ್​​ ಹೀಗೆ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಅತ್ಯಾಚಾರಿಗಳಿಗೆ ಶಿಕ್ಷೆ ನೀಡದಂತೆ ತಡೆಯಲು ಆಪ್​​ ಸರ್ಕಾರ ಉದ್ದೇಶಪೂರ್ವಕಾಗಿ ಎರಡು ವರ್ಷಗಳಿಂದ ಯತ್ನಿಸುತ್ತಿದೆ. ಎರಡು ವರ್ಷಗಳ ಹಿಂದೆಯೇ ಪ್ರಕರಣ ಸಂಬಂಧ ಕೋರ್ಟ್​ಗೆ ನೀಡ ಬೇಕಾಗಿದ್ದ ಮಾಹಿತಿಯನ್ನು 2019ರಲ್ಲಿ ನೀಡಿದೆ ಎಂದು ಮನೋಜ್​​ ತಿವಾರಿ ದೂರಿದ್ದಾರೆ.

ಈ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೌದು, ಜನವರಿ 22ನೇ ತಾರೀಕಿನಂದು ತಿಹಾರ್ ಜೈಲಿನಲ್ಲಿ ನಾಲ್ವರು ದೋಷಿಗಳಿಗೆ ನೇಣಿಗೆ ಹಾಕಬೇಕಿದೆ. ಆದರೀಗ, ಇನ್ನೂ ಕ್ಷಮಾದಾನ ಅರ್ಜಿಗಳು ಇತ್ಯರ್ಥವಾಗಿಲ್ಲ. ಪ್ರಮುಖ ಅಪರಾದಿ ಮುಕೇಶ್ ಎಂಬಾತನ ಕ್ಷಮಾದಾನ ಅರ್ಜಿ ಬಾಕಿ ಇದೆ. ನಾಲ್ವರ ಪೈಕಿ ಒಬ್ಬರು ಹೊರತುಪಡಿಸಿ ಮೂವರು ಇಲ್ಲಿಯವರೆಗೂ ಕ್ಷಮಾದಾನ ಅರ್ಜಿ ಸಲ್ಲಿಸಿಯೇ ಇಲ್ಲ. ರಾಷ್ಟ್ರಪತಿಗೆ ಆರೋಪಿಗಳು ಕ್ಷಮಾದಾನ ಅರ್ಜಿ ಸಲ್ಲಿಸದೆ ನೇಣಿಗೇರಿಸಲು ಸಾಧ್ಯವಿಲ್ಲ. ತಾಂತ್ರಿಕ ದೋಷಗಳ ಕಾರಣಕ್ಕೆ ಗಲ್ಲುಶಿಕ್ಷೆ ವಿಳಂಬ ಮುಂದೂಡಬೇಕು. ಮತ್ತೊಂದು ಡೆತ್​​​ ವಾರೆಂಟ್​​​​ ನೀಡಬೇಕೆಂದು ಹೈಕೋರ್ಟ್​ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಅಲ್ಲದೇ ಈ ಸಂಬಂಧ ಕೆಳನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿಯೂ ಹೇಳಿತ್ತು.

ಇದನ್ನೂ ಓದಿ: ಬಿಎಸ್​ ಯಡಿಯೂರಪ್ಪ ನಿಜವಾದ ಮಣ್ಣಿನ ಮಗ; ಕಲ್ಲಡ್ಕ ಪ್ರಭಾಕರ್​ ಭಟ್​ ಪ್ರಶಂಸೆ

ನಂತರ ಪ್ರಕರಣದ ನಾಲ್ವರು ಅತ್ಯಾಚಾರಿಗಳ ಪೈಕಿ ಮುಕೇಶ್ ಸಿಂಗ್ ಎಂಬಾತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದರು. ದೋಷಿ ಮುಕೇಶ್ ಸಿಂಗ್ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ ಬಗ್ಗೆ ಕೇಂದ್ರ ಗೃಹ ಸಚಿವಾಲಯವೇ ತಿಳಿಸಿತ್ತು. ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳ ಪೈಕಿ ಮುಕೇಶ್ ಸಿಂಗ್ ಎಂಬಾತ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಿಕೊಡಲಾಗಿತ್ತು. ಆದರೆ, ಮುಕೇಶ್ ಸಿಂಗ್​ನ ಈ ಮನವಿಯನ್ನು ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವಾಲಯ ಶಿಫಾರಸೂ ಕೂಡ ಮಾಡಿತ್ತು. ಅದರಂತೆಯೇ ಈಗ ದೆಹಲಿ ಹೈಕೋರ್ಟ್​ ಈ ಎಲ್ಲಾ ಪ್ರಕ್ರಿಯೆ ಬಳಿಕ ಮತ್ತೊಮ್ಮೆ ಗೆಲ್ಲುಶಿಕ್ಷೆ ಮುಂದೂಡಿದೆ. ನಾಲ್ವರು ಅಪರಾಧಿಗಳಿಗೆ ಫೆಬ್ರವರಿ 1ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸುವಂತೆ ಸೂಚಿಸಿದೆ.
First published: January 19, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading