ಆಂಧ್ರ ಪ್ರದೇಶ(ಮಾ.08): ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಅತಿ ಅಪರೂಪದ ಘಟನೆಯೊಂದು ಸಂಭವಿಸಿದೆ. ಕೃಷ್ಣಾ ಜಿಲ್ಲೆಯ ನುಜ್ವಿದ್ ಪ್ರದೇಶದ ಆಸ್ಪತ್ರೆಯಲ್ಲಿ ಮೂರು ಕಾಲಿನ ಹೆಣ್ಣು ಮಗುವೊಂದು ಶುಕ್ರವಾರ ಜನಿಸಿದ್ದು, ಇದು ಅನೇಕರ ಅಚ್ಚರಿಗೆ ಕಾರಣವಾಗಿದೆ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಶೆಟ್ಟಿ ವನಪಲ್ಲಿ ಗ್ರಾಮದ ವೆಂಕಟೇಶ್ವರಮ್ಮಗೆ ಈ ವಿಸ್ಮಯದ ಮಗು ಜನಿಸಿದೆ. ಹೆಣ್ಣು ಮಗು ಹುಟ್ಟಿದಾಗ ಮೂರನೇ ಕಾಲು ನೋಡಿದ ವೈದ್ಯರು ಸಹ ಅಚ್ಚರಿಗೊಳಗಾಗಿದ್ದಾರೆ. ಆದರೆ, ವೆಂಕಟೇಶ್ವರಮ್ಮ ಹಾಗೂ ಮಗುವಿನ ತಂದೆ ಮೋಹನ್ ರಾವ್ ಇಬ್ಬರೂ ಹತ್ತಿರದ ಸಂಬಂಧಿಕರಾಗಿದ್ದು, ಈ ಹಿನ್ನೆಲೆ ಮಗುವಿಗೆ ಅನುವಂಶಿಕ ಸಮಸ್ಯೆಯಿಂದಾಗಿ ಮೂರನೇ ಕಾಲಿನ ರೀತಿಯ ಆಕೃತಿ ಪತ್ತೆಯಾಗಿದೆ ಎಂಬುದು ವೈದ್ಯರಿಗೆ ಬಳಿಕ ಅರಿವಾಗಿದೆ.
ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆ; ಮಹಿಳಾ ರಾಜಕಾರಣಿ, ಮಾತೃ ಹೃದಯಿ ಶಶಿಕಲಾ ಜೊಲ್ಲೆ
ಮೂರು ಕಾಲುಳ್ಳ ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಸೂಪರಿಟೆಂಡೆಂಟ್ ನರೇಂದ್ರ ಸಿಂಗ್ ಹೇಳಿದ್ದಾರೆ. ಅಲ್ಲದೆ, ಉತ್ತಮ ಚಿಕಿತ್ಸೆಗಾಗಿ ಅವರನ್ನು ಆಂಧ್ರ ಪ್ರದೇಶದ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಜತೆಗೆ, ತಾಯಿ ವೆಂಕಟೇಶ್ವರಮ್ಮ ಹಾಗೂ ಹೆಣ್ಣು ಮಗುವನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿಡಲಾಗಿದೆ ಎಂದೂ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ