ವಿಚಿತ್ರ ಘಟನೆ: ಪ್ರೇಯಸಿಯ ಹುಟ್ಟುಹಬ್ಬಕ್ಕೆ ಒಂಟೆಮರಿ ಗಿಫ್ಟ್ ನೀಡಿ ಜೈಲು ಪಾಲಾದ ಯುವಕ..!

ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕು ಎಂದು ಹಠ ಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡೋದೆಂದು ಕೈಕೈ ಹಿಚುಕಿಕೊಂಡಿದ್ದಾನೆ. ಒಂಟೆಯನ್ನು ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆಯನ್ನು ಕದ್ದು ಆಕೆಗೆ ನೀಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದುಬೈ(ಫೆ.18): ಹುಟ್ಟುಹಬ್ಬಕ್ಕೆ ಬೆಲೆಬಾಳುವ ಗಿಫ್ಟ್ ಗಳನ್ನು ಕೊಡುವುದರ ಬಗ್ಗೆ ಕೇಳಿದ್ದೀರಿ. ಆದರೆ ವ್ಯಕ್ತಿಯೊಬ್ಬ ತನ್ನ ಗಳೆತಿಯ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ ಬಗ್ಗೆ ಕೇಳಿದರೆ ನಿಮ್ಮ ಹೊಟ್ಟೆ ಹುಣ್ಣಾಗುವುದು ಗ್ಯಾರಂಟಿ. ಅರೇ, ಅದ್ಯಾವ ಉಡುಗೊರೆ ಅಂತಿರಾ..? ಒಂಟೆ… ಹೌದು, ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ ವ್ಯಕ್ತಿಯೊಬ್ಬ ಒಂಟೆಯನ್ನು ಗಿಫ್ಟ್ ಆಗಿ ನೀಡಿದ್ದಾನೆ. ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ದುಬೈ.

  ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕು ಎಂದು ಹಠ ಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡೋದೆಂದು ಕೈಕೈ ಹಿಚುಕಿಕೊಂಡಿದ್ದಾನೆ. ಒಂಟೆಯನ್ನು ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆಯನ್ನು ಕದ್ದು ಆಕೆಗೆ ನೀಡಿದ್ದಾನೆ. ತಾನು ಮಾಡಿದ ತಪ್ಪಿಗೆ ಇದೀಗ ಜೈಲುಪಾಲಾಗಿದ್ದಾನೆಂದು ಯುಎಇಯ ಅರೇಬಿಕ್ ದಿನಪತ್ರಿಕೆ ಅಲ್ ಬಯಾನ್ ವರದಿ ಮಾಡಿದೆ.

  Viral Video: ಸಖತ್ ವೈರಲ್ ಆದ ಬೆಳ್ಳುಳ್ಳಿ ಬಿಡಿಸುವ ವಿಡಿಯೋ; ನೀವು ನೋಡಿ ಸಿಪ್ಪೆ ಬಿಡಿಸುವ ವಿಧಾನ

  ತನ್ನ ಮನೆಯಿರುವ ಸ್ಥಳದ ಬಳಿಯ ಜಮೀನಿನಲ್ಲಿ ಒಂಟೆಗಳು ಇರುವುದನ್ನು ಗಮನಿಸಿದ್ದ ಆತ ಹೇಗಾದರೂ ಮಾಡಿ ಕದಿಯಬೇಕೆಂದು ನಿರ್ಧರಿಸಿದ್ದ. ಒಂದು ನವಜಾತ ಒಂಟೆ ಮರಿಯನ್ನು ಕದ್ದು ಎಸ್ಕೇಪ್ ಆಗಿದ್ದ ಆತ ತನ್ನ ಪ್ರೇಯಸಿಗೆ ನೀಡಿದ್ದ. ಒಂಟೆ ಕಣ್ಮರೆಯಾದ ಬಗ್ಗೆ ಜಮೀನಿನ ಮಾಲೀಕರು ದುಬೈ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಹುಡುಕಾಟ ನಡೆಸಿದರೂ ಒಂಟೆಯ ಯಾವುದೇ ಕುರುಹು ಸಿಕ್ಕಿರಲಿಲ್ಲ. ಒಂಟೆಯನ್ನು ಯಾರೋ ಕದ್ದಿರಬೇಕೆಂದು ಶಂಕಿಸಿದ ಅವರು ಈ ಬಗ್ಗೆ ತನಿಖೆ ಕೈಗೊಂಡಿದ್ದರು.

  ಒಂದು ದಿನ ತಮ್ಮ ಕೃಷಿಭೂಮಿಯ ಬಳಿ ನವಜಾತ ಒಂಟೆ ಇರುವ ಬಗ್ಗೆ ವ್ಯಕ್ತಿಯೊಬ್ಬರು ಬುರ್ ದುಬೈ ಪೊಲೀಸ್ ಠಾಣೆಯ ನಿರ್ದೇಶಕ, ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾ ಖಾದಿಮ್ ಬಿನ್ ಸುರೂರ್ ಅಲ್-ಉಮರ್ ಅವರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಒಂಟೆ ಇರುವುದನ್ನು ಖಚಿತಪಡಿಸಿಕೊಂಡರು. ಆದರೆ ಒಂಟೆ ಕದ್ದವನ ಕಥೆ ಕೇಳಿ ಅದನ್ನು ಮರಳಿ ತೆಗೆದುಕೊಂಡು ಹೋಗಲು ನಿರಾಕರಿಸಿದರು. ಒಂಟೆ ಕಳ್ಳತನವಾದ ಪ್ರದೇಶದಿಂದ ಸುಮಾರು 3 ಕಿ.ಮೀ ದೂರ ಇದ್ದಿದ್ದರಿಂದ ಅದನ್ನು ತೆಗೆದುಕೊಂಡು ಹೋಗುವುದು ಅಸಾಧ್ಯವೆಂದು ಪೊಲೀಸರು ಹೇಳಿದರು.

  ಹುಟ್ಟುಹಬ್ಬದಂದು ತನ್ನ ಗೆಳತಿಯನ್ನು ಸಂತೋಷ ಪಡಿಸಲು ಒಂಟೆ ಕದ್ದಿರುವುದಾಗಿ ಪೊಲೀಸರ ಬಳಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ರಾತ್ರಿ ವೇಳೆ ಜಮೀನಿಗೆ ನುಗ್ಗಿ ಒಂಟೆ ಮರಿಯನ್ನು ಕದ್ದಿರುವುದಾಗಿ ತಿಳಿಸಿದ್ದಾನೆ. ನಿಜವನ್ನು ಹೇಳಿದರೆ ಅಪರಾಧದಿಂದ ಪಾರಾಗಬಹುದೆಂದು ಯೋಚಿಸಿದ ಪೊಲೀಸರ ಬಳಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿದ್ದಾನೆ. ಆದರೆ ಮಾಡಿದ ಅಪರಾಧಕ್ಕೆ ದುಬೈ ಪೊಲೀಸರು ಒಂಟೆ ಕದ್ದ ಆರೋಪಿ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ. ಬಳಿಕ ಒಂಟೆಯನ್ನು ಅದರ ಮಾಲೀಕರಿಗೆ ನೀಡಲಾಯಿತು.
  Published by:Latha CG
  First published: