HOME » NEWS » National-international » BITCOIN UK MAN MISTAKENLY THROWS AWAY HARD DRIVE CONTAINING BITCOIN WORTH 230 MILLION EUROS SCT

Bitcoin: 2 ಸಾವಿರ ಕೋಟಿ ರೂ. ಬಿಟ್​ಕಾಯಿನ್ ಇದ್ದ ಹಾರ್ಡ್​ ಡಿಸ್ಕ್ ಬಿಸಾಡಿದ ಐಟಿ ಉದ್ಯೋಗಿ!

Bitcoin Price: ತಾನು ಬಿಸಾಡಿದ 2032 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಇದ್ದ ಹಾರ್ಡ್​ ಡಿಸ್ಕ್ ಯಾರ ಬಳಿಯಾದರೂ ಇದ್ದರೆ ಅಥವಾ ಅದನ್ನು ಹುಡುಕಿಕೊಟ್ಟವರಿಗೆ ಲಕ್ಷಾಂತರ ರೂ. ಬಹುಮಾನ ನೀಡುವುದಾಗಿ ಹಾವೆಲ್ಸ್​ ಘೋಷಿಸಿದ್ದಾರೆ.

Sushma Chakre | news18-kannada
Updated:January 18, 2021, 9:58 AM IST
Bitcoin: 2 ಸಾವಿರ ಕೋಟಿ ರೂ. ಬಿಟ್​ಕಾಯಿನ್ ಇದ್ದ ಹಾರ್ಡ್​ ಡಿಸ್ಕ್ ಬಿಸಾಡಿದ ಐಟಿ ಉದ್ಯೋಗಿ!
ಬಿಟ್​ಕಾಯಿನ್
  • Share this:
ಬ್ರಿಟನ್ (ಜ. 18): ನೀವು ಎಂದಾದರೂ ನಿಮಗೆ ಅತಿ ಮುಖ್ಯವಾದುದನ್ನು ಬಿಸಾಡಿ, ಪಶ್ಚಾತ್ತಾಪ ಪಟ್ಟಿದ್ದೀರಾ? ಆಮೇಲೆ ಅದಕ್ಕೆ ಹುಡುಕಾಡಿ, ಒದ್ದಾಡಿದ್ದೀರಾ? ಇಂಗ್ಲೆಂಡ್​ನಲ್ಲೊಬ್ಬರು ಐಟಿ ಉದ್ಯೋಗಿ 2032 ಕೋಟಿ ರೂ. (230 ಮಿಲಿಯನ್ ಯೂರೋ) ಮೌಲ್ಯದ ಬಿಟ್ ಕಾಯಿನ್ ಇದ್ದ ಹಾರ್ಡ್​ ಡಿಸ್ಕ್ ಬಿಸಾಡಿದ್ದಾರೆ! ಆಮೇಲೆ ಎಷ್ಟೇ ಹುಡುಕಾಡಿದರೂ ಆ ಹಾರ್ಡ್​ ಡಿಸ್ಕ್ ಸಿಕ್ಕಿಲ್ಲ. ಯೋಚಿಸದೆ ಮಾಡಿದ ಆ ಒಂದು ತಪ್ಪಿನಿಂದ ಒಂದೇ ಒಂದು ಕ್ಷಣದಲ್ಲಿ ಅವರು ಸಾವಿರಾರು ಕೋಟಿ ರೂ. ಕಳೆದುಕೊಂಡಿದ್ದಾರೆ! ಆ ಹಾರ್ಡ್​ ಡಿಸ್ಕ್ ಹುಡುಕಿಕೊಟ್ಟವರಿಗೆ ಈಗ ಆತ ಭಾರೀ ಮೊತ್ತದ ಬಹುಮಾನವನ್ನು ಘೋಷಿಸಿದ್ದಾರೆ.

ಇಂಗ್ಲೆಂಡ್​ನ ನ್ಯೂಪೋರ್ಟ್​ನ ಐಟಿ ಉದ್ಯೋಗಿಯಾಗಿರುವ 35 ವರ್ಷದ ಜೇಮ್ಸ್​ ಹಾವೆಲ್ಸ್​ ತನ್ನ ಮರೆವಿನಿಂದಾಗಿ 2032 ಕೋಟಿ ರೂ. ಕಳೆದುಕೊಂಡಿದ್ದಾರೆ. 2013ರಲ್ಲಿ ತನ್ನ ಹಾರ್ಡ್​ ಡಿಸ್ಕ್ ಬಿಸಾಡಿದ್ದ ಜೇಮ್ಸ್​ ಹಾವೆಲ್ಸ್​ ಅದರಲ್ಲಿದ್ದ ಡೇಟಾ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆಗ ಅದರಲ್ಲಿ 7,500 ಯೂನಿಟ್ ಡಿಜಿಟಲ್ ಕರೆನ್ಸಿಯಿತ್ತು. ಆಗ ಅವುಗಳ ಬೆಲೆ ನೂರು ಪೌಂಡ್ಸ್​ಗಳಲ್ಲಿದ್ದ ಆ ಬಿಟ್ ಕಾಯಿನ್ ಬೆಲೆ ಈಗ 2,032 ಕೋಟಿ ರೂ. ಆಗಿದೆ.

ಇದನ್ನೂ ಓದಿ: Crime News: ಮಧ್ಯಪ್ರದೇಶದಲ್ಲಿ 13 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ 8 ಜನ ಬಂಧನ

ತನ್ನ ಹಾರ್ಡ್​ ಡಿಸ್ಕ್​ನಲ್ಲಿ ಬಿಟ್ ಕಾಯಿನ್​ಗಳ ಸಂಪೂರ್ಣ ಮಾಹಿತಿ ಇತ್ತೆಂಬುದು ನೆನಪಾದ ಕೂಡಲೆ ಕಳೆದ 7 ವರ್ಷಗಳಿಂದ ಅದನ್ನು ಹುಡುಕಿಸಿಕೊಡಲು ಜೇಮ್ಸ್​ ಹಾವೆಲ್ಸ್​ ನ್ಯೂಪೋರ್ಟ್​ ಸಿಟಿ ಕೌನ್ಸಿಲ್​ನಲ್ಲಿ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಇನ್ನೂ ಆ ಹಾರ್ಡ್​ ಡಿಸ್ಕ್ ಆತನ ಕೈಸೇರಿಲ್ಲ. ಹೀಗಾಗಿ, ತಾನು ಬಿಸಾಡಿದ ಹಾರ್ಡ್​ ಡಿಸ್ಕ್ ಯಾರ ಬಳಿಯಾದರೂ ಇದ್ದರೆ ಅಥವಾ ಅದನ್ನು ಹುಡುಕಿಕೊಟ್ಟವರಿಗೆ ಲಕ್ಷಾಂತರ ರೂ. ಬಹುಮಾನ ನೀಡುವುದಾಗಿ ಹಾವೆಲ್ಸ್​ ಘೋಷಿಸಿದ್ದಾರೆ.

ಇತ್ತೀಚೆಗಷ್ಟೆ ಸ್ಯಾನ್​​ ಫ್ರಾನ್ಸಿಸ್ಕೋದಲ್ಲೊಬ್ಬರು ಪಾಸ್​ವರ್ಡ್​ ಮರೆತು, 1800 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಕಳೆದುಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಸ್ಯಾನ್​ ಫ್ರಾನ್ಸಿಸ್ಕೋದ ಜರ್ಮನ್ ಪ್ರೋಗ್ರಾಮರ್ ಒಬ್ಬರು ಹಾರ್ಡ್​ ಡ್ರೈವ್​ನ ಐರನ್ ಕೀ ಡಿಜಿಟಲ್ ವ್ಯಾಲೆಟ್​ನಲ್ಲಿ 220 ಮಿಲಿಯನ್ ಡಾಲರ್ (1,800 ಕೋಟಿ ರೂ.) ಮೌಲ್ಯದ ಬಿಟ್ ಕಾಯಿನ್ ಇಟ್ಟಿದ್ದರು. ಅದರ ಪಾಸ್​ವರ್ಡ್​ ಅನ್ನು ಪೇಪರ್​ನಲ್ಲಿ ಬರೆದು, ಭದ್ರವಾಗಿಟ್ಟುಕೊಂಡಿದ್ದರು. ಆದರೆ, ಆ ಪೇಪರ್ ನಾಪತ್ತೆಯಾಗಿದ್ದು, ಅವರು ಪಾಸ್​ವರ್ಡ್ ಅನ್ನು ಕೂಡ ಮರೆತಿದ್ದರು. ಇದರಿಂದ 1,800 ಕೋಟಿ ರೂ. ಕಳೆದುಕೊಂಡಿದ್ದರು.
Published by: Sushma Chakre
First published: January 18, 2021, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories