ಜಿಎಸ್​ಟಿ, ಆರ್ಥಿಕ ಬೆಳವಣಿಗೆ ಕುಸಿತದಿಂದಾಗಿ 10 ಸಾವಿರ ಉದ್ಯೋಗಿಗಳನ್ನು ಕೈ ಬಿಡಲು ನಿರ್ಧರಿಸಿದ ಪಾರ್ಲೆ-ಜಿ

1980 ಮತ್ತು 90ರ ದಶಕದಲ್ಲಿ ಪಾರ್ಲೆ ಜಿ ಬಿಸ್ಕೆಟ್​ ದೇಶಾದ್ಯಂತ ಮನೆ ಮಾತಾಗಿತ್ತು. ಅಷ್ಟೇ ಅಲ್ಲದೇ 2003ರಂದು ಜಗತ್ತಿನಲ್ಲಿ ಅತಿಹೆಚ್ಚು ಬಿಸ್ಕೆಟ್​ ಮಾರಾಟ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

HR Ramesh | news18-kannada
Updated:August 21, 2019, 4:35 PM IST
ಜಿಎಸ್​ಟಿ, ಆರ್ಥಿಕ ಬೆಳವಣಿಗೆ ಕುಸಿತದಿಂದಾಗಿ 10 ಸಾವಿರ ಉದ್ಯೋಗಿಗಳನ್ನು ಕೈ ಬಿಡಲು ನಿರ್ಧರಿಸಿದ ಪಾರ್ಲೆ-ಜಿ
ಪ್ರಾತಿನಿಧಿಕ ರೇಖಾ ಚಿತ್ರ (ಮೀರ್ ಸುಹೈಲ್​)
  • Share this:
ಬೆಂಗಳೂರು: ಬಿಸ್ಕೆಟ್​ ತಯಾರಿಕೆ ಉದ್ಯಮದ ದಿಗ್ಗಜ ಪಾರ್ಲೆ-ಜಿ ಕಂಪನಿ ಆರ್ಥಿಕ ಬೆಳವಣಿಗೆ ಕುಸಿತ ಹಾಗೂ ಅತಿಯಾದ ಜೆಎಸ್​ಟಿ ಹೇರಿಕೆಯಿಂದಾಗಿ ಸಂಸ್ಥೆಯಿಂದ ಹತ್ತು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ಕಂಪನಿಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕ ದೇಶವಾದ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತದಿಂದಾಗಿ ಕಾರಿನಿಂದ ಹಿಡಿದು ಬಟ್ಟೆ ಉದ್ಯಮದವರೆಗೂ ಎಲ್ಲರೂ ತಮ್ಮ ಉತ್ಪಾದನೆಯನ್ನು ಕಡಿತಮಾಡಿದ್ದಾರೆ. ಇದೇ ವೇಳೆ ಆರ್ಥಿಕ ಉತ್ತೇಜನಕ್ಕೆ ಭಾರತ ಸರ್ಕಾರ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.


ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಒಂದು ವೇಳೆ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸದಿದ್ದರೆ ನಾವು ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡಬೇಕಾಗಿದೆ ಎಂದು ಹೇಳಿದ್ದಾರೆ.

1929ರಂದು ಸ್ಥಾಪನೆಯಾದ ಪಾರ್ಲೆ ಕಂಪನಿಯಲ್ಲಿ ನೇರ ಮತ್ತು ಗುತ್ತಿಗೆ ಆಧಾರದ ಮೇಲೆ 1 ಲಕ್ಷ ಉದ್ಯೋಗಿಗಳು ಇದ್ದಾರೆ. ದೇಶಾದ್ಯಂತ 10 ಕಂಪನಿಗಳಿದ್ದು, 125 ಗುತ್ತಿಗೆ ಆಧಾರದ ಮೇಲೆ ತಯಾರಿಕಾ ಘಟಕಗಳನ್ನು ಹೊಂದಿದೆ.

ಇದನ್ನು ಓದಿ: ಕೇಂದ್ರ ಸರ್ಕಾರ ಪಿ. ಚಿದಂಬರಂ ಅವರನ್ನು ಭೇಟೆಯಾಡುತ್ತಿರುವುದು ನಾಚಿಕೆಗೇಡಿನ ಸಂಗತಿ; ಪ್ರಿಯಾಂಕ ಗಾಂಧಿ ಖಂಡನೆ!

2017ರಲ್ಲಿ ದೇಶದಲ್ಲಿ ಜಿಎಸ್​ಟಿ ಜಾರಿಗೆ ಬಂದ ಬಳಿಕ ಪಾರ್ಲೆ-ಜಿ ಕಂಪನಿಗೆ ತೀವ್ರ ಹೊಡೆತ ಬಿತ್ತು. ಹೆಚ್ಚು ತೆರಿಗೆಯಿಂದ ಬಿಸ್ಕೆಟ್​ ಉತ್ಪಾದನೆಯನ್ನು ಕಡಿತಗೊಳಿಸಬೇಕಾಯಿತು. ಇದರಿಂದ ಗ್ರಾಮೀಣ ಭಾಗಗಳಲ್ಲಿ ತಮ್ಮ ಕಂಪನಿಗೆ ತೀವ್ರ ಹಿನ್ನಡೆಯಾಯಿತು ಎಂದು ಶಾ ತಿಳಿಸಿದ್ದಾರೆ.

ಮುಂಬೈನಲ್ಲಿ ಮುಖ್ಯಕಚೇರಿ ಹೊಂದಿರುವ ಪಾರ್ಲೆ ಗ್ಲುಕೊ ಹೆಸರನ್ನು ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಲಾಯಿತು. ಆನಂತರ  1980 ಮತ್ತು 90ರ ದಶಕದಲ್ಲಿ ಪಾರ್ಲೆ ಜಿ ಬಿಸ್ಕೆಟ್​ ದೇಶಾದ್ಯಂತ ಮನೆ ಮಾತಾಗಿತ್ತು. ಅಷ್ಟೇ ಅಲ್ಲದೇ 2003ರಂದು ಜಗತ್ತಿನಲ್ಲಿ ಅತಿಹೆಚ್ಚು ಬಿಸ್ಕೆಟ್​ ಮಾರಾಟ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಇದೀಗ ದೇಶದ ಆರ್ಥಿಕ ಬೆಳವಣಿಗೆ ಕುಂಠಿತದಿಂದಾಗಿ ಪಾರ್ಲೆ-ಜಿ ಸೇರಿದಂತೆ ಎಲ್ಲ ಉದ್ಯಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಶಾ ಆತಂಕ ವ್ಯಕ್ತಪಡಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ