20 ಸ್ಥಾನಗಳ ಉಪ ಚುನಾವಣೆಗೆ ಸ್ಪರ್ಧಿಸಲು ಸಿದ್ಧ - ಕಮಲ್ ಹಾಸನ್

ಉಪ ಚುನಾವಣೆ ನಡೆಯಲಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಯಾವಾಗ ಚುನಾವಣೆ ಘೋಷಣೆಯಾದರೂ ಸ್ಪರ್ಧಿಸಲು ನಮ್ಮ ಪಕ್ಷ ಸಿದ್ಧವಿದೆ

G Hareeshkumar | news18
Updated:November 7, 2018, 9:27 PM IST
20 ಸ್ಥಾನಗಳ ಉಪ ಚುನಾವಣೆಗೆ ಸ್ಪರ್ಧಿಸಲು ಸಿದ್ಧ - ಕಮಲ್ ಹಾಸನ್
ಕಮಲ್ ಹಾಸನ್
G Hareeshkumar | news18
Updated: November 7, 2018, 9:27 PM IST
ನ್ಯೂಸ್ 18 ಕನ್ನಡ

ಚೆನ್ನೈ  (ನವೆಂಬರ್ 07) : ವಿಧಾನಸಭೆಯಲ್ಲಿ  ಖಾಲಿ ಇರುವ 20 ಸ್ಥಾನಗಳ ಉಪ ಚುನಾವಣೆಗೆ ನಾವು ಸ್ಪರ್ಧಿಸಲು ಸಿದ್ಧ ಎಂದು ಮಕ್ಕಳ್‌ ನೀಧಿ ಮೈಯ್ಯಂ (ಎಂಎನ್‌ಎಂ) ಪಕ್ಷದ ಅಧ್ಯಕ್ಷ ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

64ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಇಂದು ಚೆನ್ನೈನಲ್ಲಿ ಮಾತನಾಡಿದ ನಟ ಕಮಲ್‌ ಹಾಸನ್‌, ಉಪ ಚುನಾವಣೆ ನಡೆಯಲಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಯಾವಾಗ ಚುನಾವಣೆ ಘೋಷಣೆಯಾದರೂ ಸ್ಪರ್ಧಿಸಲು ನಮ್ಮ ಪಕ್ಷ ಸಿದ್ಧವಿದೆ. ನಾನು ಯಾವುದೇ ಭರವಸೆ, ಪ್ರಮಾಣಗಳಲ್ಲಿ ನಂಬಿಕೆ ಇಟ್ಟುಕೊಂಡವನು ಅಲ್ಲ, ಜನರಿಂದ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುವವನು ಎಂದಿದ್ದಾರೆ

ಇದನ್ನು ಓದಿ : ನಾಳೆ ಹೊಸ ಪಕ್ಷ ಘೋಷಣೆ ಮಾಡಲಿರುವ ನಟ ಕಮಲ್ ಹಾಸನ್

ಜನರಿಗೆ ಕೇವಲ ಭರವಸೆಗಳನ್ನು ನೀಡುವ ಪೈಕಿ ನಾನಲ್ಲ. ನಾನು ಜನರಿಂದ ಸಲಹೆಗಳನ್ನು ಕೇಳುತ್ತಿದ್ದೇನೆ. ಮಾದರಿ ರಾಜಕೀಯ ಮಾಡುವುದು ನನ್ನ ಉದ್ದೇಶವಾಗಿದೆ ಎಂದರು.

ಮದ್ರಾಸ್​ ಹೈಕೋರ್ಟ್​​​​ ಕಳೆದ ತಿಂಗಳು ಎಐಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿತ್ತು. ಇನ್ನಿಬ್ಬರು ಶಾಸಕರ ನಿಧನದಿಂದ ಎರಡು ಸ್ಥಾನಗಳು ಖಾಲಿ ಉಳಿದಿದೆ. ಇದರಿಂದ ಈಗ ತಮಿಳುನಾಡು ವಿಧಾನಸಭೆಯ 20 ಸ್ಥಾನಗಳು ಖಾಲಿ ಉಳಿದಂತಾಗಿದೆ.

ನಟ ಕಮಲ್ ಹಾಸನ್​​ ಕಳೆದ ಫೆಬ್ರವರಿಯಲ್ಲಿ ಮಕ್ಕಳ್​ ನೀಧಿ ಮೈಯ್ಯಂ​​ (ಎಮ್​​ಎನ್​​ಎಮ್​​​) ಪಕ್ಷವನ್ನು ಘೋಷಣೆ ಮಾಡಿದ್ದರು.
Loading...

 

ಇದನ್ನು ಓದಿ :  ಇಂದು ಕಮಲ್ ಹಾಸನ್ ಹೊಸ ಪಕ್ಷ ಘೋಷಣೆ 

 

 
First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ