ಮದುವೆ ಆಮಂತ್ರಣ ಪತ್ರಿಕೆ ಮೇಲೆ ಹುಟ್ಟಿದ ವರ್ಷ ಕಡ್ಡಾಯ; ಬಾಲ್ಯವಿವಾಹ ತಡೆಗೆ ರಾಜಸ್ಥಾನ ಸರ್ಕಾರದ ಮಾಸ್ಟರ್ ಪ್ಲಾನ್

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಗ್ರಾಮ ಪಂಚಾಯಿತಿ, ಜಿಲ್ಲಾ ಪರಿಷತ್, ಪಂಚಾಯತ್ ಸಮಿತಿ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಗೃಹ ಇಲಾಖೆ ಈ ಆದೇಶ ಹೊರಡಿಸಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಖತೇಜ್​ ಸಮಯದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ರಾಜಸ್ಥಾನ ಸರ್ಕಾರ ಮೆಗಾ ಪ್ಲಾನ್​ ಒಂದನ್ನು ಜಾರಿಗೆ ತಂದಿದೆ. ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು ಮತ್ತು ವರನ ಹೆಸರನ್ನು ಹಾಕಲಾಗಿರುತ್ತದೆ. ಅದೇ ರೀತಿ ಆಹ್ವಾನ ಪತ್ರಿಕೆಯ ಮುದ್ರಣಕ್ಕೆ ಕೊಡುವಾಗ ವಧು-ವರನ ಜನನ ಪ್ರಮಾಣಪತ್ರವನ್ನು ಮುದ್ರಣ ಮಾಡುವವರಿಗೆ (ಪ್ರಿಂಟಿಂಗ್ ಪ್ರೆಸ್​) ಕಡ್ಡಾಯವಾಗಿ ನೀಡಲೇಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  ಮೇ 14ರಂದು ಅಕ್ಷಯ ತೃತೀಯ ಇದೆ. ಅದಾದ ಬಳಿಕ ಇದೇ ವರ್ಷ ಮೇ 26ರಂದು ಪೀಪಲ್ ಪುರ್ಣಿಮಾ ಆಚರಣೆ ಮಾಡಲಾಗುತ್ತದೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ರಾಜಸ್ಥಾನ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಈ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

  ಅಧಿಕಾರಿಗಳ ಸಹಾಯದಿಂದ, ಬಾಲ್ಯವಿವಾಹವು ಅಪರಾಧ ಎಂದು ಸಾಮಾನ್ಯ ಜನರಿಗೆ ತಿಳಿಸಬೇಕು ಮತ್ತು ಅದರ ವಿರುದ್ಧದ ಕಾನೂನಿನ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಬಾಲ್ಯ ವಿವಾಹವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.


  ಇದನ್ನು ಓದಿ:  ಕೊರೋನಾ ಟೆಸ್ಟ್ ಮಾಡಿಸಿ ಅಂದ್ರೆ ಜಿಕೆವಿಕೆ ಹಾಸ್ಟೆಲ್ ಕಾಂಪೌಂಡ್ ಹಾರಿ ಕಾಲುಕಿತ್ತ ವಿದ್ಯಾರ್ಥಿನಿಯರು!

  ಈ ಕಾಯ್ದೆಯ ಅಡಿಯಲ್ಲಿ ಬಾಲ್ಯ ವಿವಾಹದಲ್ಲಿ ಪಾಲ್ಗೊಂಡ ಜನರು ಸಹ ಜವಾಬ್ದಾರರಾಗಲಿದ್ದು, ಅವರ ವಿರುದ್ಧ ಕ್ರಮಕ್ಕೂ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಾಲ್ಯ ವಿವಾಹದಲ್ಲಿ ಪಾಲ್ಗೊಳ್ಳುವ ಅಡುಗೆ ಮಾಡುವವರು, ಬ್ಯಾಂಡ್​ ಸಂಘಟನೆ, ಶಾಮಿಯಾನ ಮಾಲೀಕರು ಹಾಗೂ ವರನ ಕಡೆಯ ಜನರಿಗೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

  ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಗ್ರಾಮ ಪಂಚಾಯಿತಿ, ಜಿಲ್ಲಾ ಪರಿಷತ್, ಪಂಚಾಯತ್ ಸಮಿತಿ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಗೃಹ ಇಲಾಖೆ ಈ ಆದೇಶ ಹೊರಡಿಸಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
  Published by:HR Ramesh
  First published: