ಆಮೆಗಳಿಗೆ ಮತ್ತು ಪಕ್ಷಿಗಳಿಗೆ ಸುರಕ್ಷಿತ ತಾಣವಾದ ಪಶ್ಚಿಮ ಬಂಗಾಳದ ಈ ಪಕ್ಷಿಧಾಮ..!

ಈ ಇಕೋ ಪಾರ್ಕ್ ಅಧಿಕಾರಿಗಳು, ಹಕ್ಕಿಗಳನ್ನು ಪಂಜರಗಳಲ್ಲಿ ಇಡಬಾರದು ಎಂಬ ಸಂದೇಶವನ್ನು ರವಾನಿಸುವ ಜೊತೆಗೆ, ಅನೇಕ ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಸಹ ಪಂಜರದಿಂದ ಹೊರಗೆ ಹಾರಿ ಬಿಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಪಶ್ಚಿಮ ಬಂಗಾಳ(ಫೆ.25): ಪಕ್ಷಿಗಳು ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಡುತ್ತ ಬದುಕೋದು ನಿಸರ್ಗ ಮಾಡಿದ ನಿಯಮ. ಆದರೆ ಮಾನವ ಅವುಗಳನ್ನು ಹಿಡಿದು ಪಂಜರದಲ್ಲಿ ಬಂಧಿಸಿಡುತ್ತಾನೆ. ಇದರಿಂದ ಪಕ್ಷಿಗಳ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಂತಾಗುತ್ತದೆ. ಅಲ್ಲದೇ ಪಕ್ಷಿಗಳು ಇದರಿಂದ ನೋವನ್ನು ಅನುಭವಿಸುತ್ತವೆ. ಹೀಗಾಗಿ ಇದನ್ನು ಅರಿತ ಪಶ್ಚಿಮ ಬಂಗಾಳದ ಇಕೋ ಪಾರ್ಕ್ನಲ್ಲಿ ಹಕ್ಕಿಗಳನ್ನು ಸ್ವತಂತ್ರವಾಗಿ ಹಾರೋಕೆ ಬಿಡಲಾಗಿದೆ.

  ಹೌದು, ಪಶ್ಚಿಮ ಬಂಗಾಳದ ಇಕೋ ಪಾರ್ಕ್ನ ಪಕಿಬಿತನ್ ಎನ್ನುವ ಪಕ್ಷಿಧಾಮದಲ್ಲಿ ಹಕ್ಕಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಅಲ್ಲದೇ ಪಂಜರಗಳಲ್ಲಿ ಬಂಧಿಯಾಗಿ ವಾಸಿಸುವ ಹಕ್ಕಿಗಳ ನೋವನ್ನು ಮನುಷ್ಯರಿಗೆ ಅರ್ಥ ಮಾಡಿಸಲು ಇಲ್ಲಿ 'ಸಾಂಕೇತಿಕ ಮಾನವ ಪಂಜರ'ವನ್ನೂ ಸ್ಥಾಪಿಸಲಾಗಿದೆ. ಈ ಪಂಜರದೊಳಗೆ ಚಿಕ್ಕ ಮಕ್ಕಳು ಹೋದಾಗ ಅವರಿಗೆ ಆಗುವ ಫೀಲಿಂಗ್ ಹೇಗಿರುತ್ತದೆ? ಅದೇ ರೀತಿ ಹಕ್ಕಿಗಳಿಗೂ ನೋವಾಗುತ್ತದೆ ಎನ್ನುವುದನ್ನು ತಿಳಿಸೋಕೆ ಈ ಸಾಂಕೇತಿಕ ಮಾನವ ಪಂಜರವನ್ನು ಪ್ರದರ್ಶನಕ್ಕೆ ಇಡಲಾಗಿದೆ.

  ಅಲ್ಲದೆ, ಇದು ಪಕ್ಷಿಗಳನ್ನು ಬಲೆಗಳಲ್ಲಿ ಬಂಧಿಸಿ ಇಡಬಾರದು ಎನ್ನುವ ಸಂದೇಶವನ್ನು ಸಾರುತ್ತದೆ. ಈ ಸಾಂಕೇತಿಕ ಮಾನವ ಪಂಜರವು ಚಿನ್ನದ ಬಣ್ಣದ್ದು, ಈ ಪಂಜರದ ಮೇಲೆ ಕೆಲವೊಂದು ಬರೆಹಗಳ ಫಲಕಗಳನ್ನು ಇಂಗ್ಲಿಷ್ ಮತ್ತು ಬಂಗಾಳಿ ಎರಡೂ ಭಾಷೆಗಳಲ್ಲಿ ಹಾಕಲಾಗಿದೆ. 'ನನ್ನ ಆಕಾಶವನ್ನು ನನಗೆ ಬಿಡಿ, ನಾನು ಹಾರಲು ಬಯಸುತ್ತೇನೆ', 'ಪಕ್ಷಿಗಳಿಗೆ ಪಂಜರದ ಅವಶ್ಯಕತೆ ಇಲ್ಲ' ಎನ್ನುವ ಫಲಕಗಳಿವೆ.

  ಪಕ್ಷಿಗಳನ್ನು ಮುಟ್ಟಬಾರದು ಅಥವಾ ಬಲೆಗಳನ್ನು ಅಲ್ಲಾಡಿಸಬಾರದು ಎಂಬ ಸೂಚನೆಯನ್ನೂ ಬರೆಯಲಾಗಿದೆ. ಈ ಸಾಂಕೇತಿಕ ಮಾನವ ಪಂಜರವನ್ನು ಪ್ರಚಾರದ ಸಾಧನವಾಗಿ ಬಳಸಲಾಗಿದೆ ಅಷ್ಟೇ. ಪಕ್ಷಿಗಳನ್ನು ಹಾರಲು ಬಿಡಬೇಕು ಎನ್ನುವ ಸಂದೇಶವನ್ನು ಸಾರಲು ಈ ಪಕ್ಷಿಧಾಮದಲ್ಲಿ ಈ ರೀತಿಯಾದಂತ ಹೊಸ ಬದಲಾವಣೆಯನ್ನು ಮಾಡಲಾಗಿದೆ.

  ತಮಿಳುನಾಡಿನಲ್ಲಿ 9, 10, 11ನೇ ತರಗತಿಗೆ ಪರೀಕ್ಷೆಯೇ ರದ್ದು; ಎಲ್ಲರೂ ಪಾಸ್​

  ಈ ಇಕೋ ಪಾರ್ಕ್ ಅಧಿಕಾರಿಗಳು, ಹಕ್ಕಿಗಳನ್ನು ಪಂಜರಗಳಲ್ಲಿ ಇಡಬಾರದು ಎಂಬ ಸಂದೇಶವನ್ನು ರವಾನಿಸುವ ಜೊತೆಗೆ, ಅನೇಕ ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಸಹ ಪಂಜರದಿಂದ ಹೊರಗೆ ಹಾರಿ ಬಿಟ್ಟಿದ್ದಾರೆ. ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ (HIDCO) ಅಧ್ಯಕ್ಷ ದೇವಶಿಸ್ ಸೇನ್ ಮತ್ತು ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

  ಪರಿಸರ ಉದ್ಯಾನವನದಲ್ಲಿ 'ನೇಚರ್ ಎನ್ವಿರಾನ್ಮೆಂಟ್ & ವೈಲ್ಡ್ಲೈಫ್ ಸೊಸೈಟಿ (NEWS) ಸಹ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರದಲ್ಲಿ ದೇವಶಿಸ್ ಸೇನ್ ಜೊತೆಗೆ ಬಿಸ್ವಾಜಿತ್ ರಾಯ್ ಚೌಧರಿ ಮತ್ತು ನೇಚರ್ ಎನ್ವಿರಾನ್ಮೆಂಟ್ & ವೈಲ್ಡ್ ಲೈಫ್ ಸೊಸೈಟಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಅಜಂತಾ ಡೇ ಉಪಸ್ಥಿತರಿದ್ದರು. ನ್ಯೂ ಟೌನ್ ಕೋಲ್ಕತಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಪರಿಸರ ಉದ್ಯಾನವನದಲ್ಲಿನ ಪಕ್ಷಿಗಳು ಮತ್ತು ಸ್ಥಳೀಯ ಹೂವಿನ ಜಾತಿಗಳ ಕುರಿತು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.

  ಈ ಉದ್ಯಾನವು ವಲಸೆ ಹಕ್ಕಿಗಳಾದ ವ್ರೈನೆಕ್, ಬ್ಲ್ಯಾಕ್ ರೆಡ್ಸ್ಟಾರ್ಟ್ ಮತ್ತು ಕೋಗಿಲೆಗಳ ನೆಲೆಯಾಗಿದೆ. ಸೈಬೀರಿಯನ್ ಸ್ಟೋನ್ ಚಾಟ್ ಎನ್ನುವ ಹಕ್ಕಿ ಕೂಡ ಈ ಉದ್ಯಾನದಲ್ಲಿ ಬಂದು ಕೂರುತ್ತದೆ. ಅಲ್ಲದೇ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಅರಣ್ಯ ಇಲಾಖೆ ಮತ್ತು ಎನ್ಜಿಒ ಸಹಭಾಗಿತ್ವದಲ್ಲಿ ಒಟ್ಟು 170 ಆಮೆಗಳನ್ನು ನೈಸರ್ಗಿಕ ನೀರಿನ ಸಂಪನ್ಮೂಲಗಳಲ್ಲಿ ಬಿಡಲಾಗಿದೆ.

  2012ರಲ್ಲಿಯೇ ಉದ್ಘಾಟನೆಯಾದ ಈ ಪಕ್ಷಿಧಾಮ ಸುಮಾರು 150 ಪಕ್ಷಿಗಳಿಗೆ ಹಾಗೂ 170 ಆಮೆಗಳಿಗೆ ನೆಲೆ ಒದಗಿಸಿದೆ.
  Published by:Latha CG
  First published: