Birds: ಆಕಾಶದಿಂದ ಭೂಮಿಗೆ ಬೀಳುತ್ತಿವೆಯಂತೆ ಪಕ್ಷಿಗಳು! ಏನು ಕಾರಣ?

ಗುಜರಾತ್‍ನಲ್ಲಿ ಬಿಸಿಲಿನ ಬೇಗೆಗೆ ದಣಿದ ಹಕ್ಕಿಗಳು, ಹಾರಾಡಲಾಗದೆ ಆಕಾಶದಿಂದ ಕೆಳಗೆ ಬೀಳುತ್ತಿವೆಯಂತೆ. ಅಂತಹ ಪಕ್ಷಿಗಳ ಸಂಖ್ಯೆ ಒಂದಲ್ಲ, ಎರಡಲ್ಲ ಸಾವಿರಕ್ಕೆ ತಲುಪಿದೆ. ಆ ರಾಜ್ಯದಲ್ಲಿನ ಪಕ್ಷಿ ರಕ್ಷಕರು ಪ್ರತೀ ದಿನ ದಣಿದ ಹಾಗೂ ನಿರ್ಜಲೀಕರಣಕ್ಕೆ ಒಳಗಾದ ಹತ್ತಾರು ಪಕ್ಷಿಗಳನ್ನು ಚಿಕಿತ್ಸೆ ಕೊಡಿಸಲು ತೆಗೆದುಕೊಂಡು ಹೋಗುತ್ತಿದ್ದಾರೆ.

ಸಂಕಷ್ಟದಲ್ಲಿರುವ ಪಕ್ಷಿಗಳು

ಸಂಕಷ್ಟದಲ್ಲಿರುವ ಪಕ್ಷಿಗಳು

  • Share this:
ಅಹಮದಾಬಾದ್: ಕಳೆದ ಕೆಲವು ತಿಂಗಳುಗಳಿಂದ ತೀವ್ರ ತಾಪಮಾನದ (Temperature) ಏರಿಕೆಯಿಂದ ಭಾರತದ (India) ಅನೇಕ ರಾಜ್ಯಗಳು ತತ್ತರಿಸಿವೆ. ಈಗಲೂ ಉತ್ತರದ ಹಲವಾರು ರಾಜ್ಯಗಳಲ್ಲಿ ಆ ಪರಿಸ್ಥಿತಿ ಭಿನ್ನವಾಗಿಲ್ಲ. ಭಾರತದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೊಸದೇನಲ್ಲ, ಆದರೆ ಈ ಭಾರಿ ಪ್ರಮಾಣದಲ್ಲಿ ತಾಪ ಏರಿಕೆಯಾಗಿದ್ದು, ಶಾಖದ ಅಲೆಗಳು (Heatwave) ಜನ ಜೀವನಕ್ಕೆ ಸಂಕಟ ತಂದಿವೆ. ಮನುಷ್ಯರ ಕಥೆಯೇ ಹೀಗಿರುವಾಗ ಇನ್ನು ಮುಗ್ಧ ಪ್ರಾಣಿ (Animal) ಪಕ್ಷಿಗಳ (Birds) ಕಥೆ ಹೇಗಿರಬೇಡ ಹೇಳಿ? ಬೇಸಿಗೆ ಬಂದರೆ ಸಾಕು, ಬಹಳಷ್ಟು ಮಂದಿ ತಮ್ಮ ಮನೆಯ ಕಾಂಪೌಂಡ್‍ಗಳಲ್ಲಿ, ಟೆರೇಸ್‍ಗಳಲ್ಲಿ ಪಕ್ಷಿಗಳು ಬಂದು ಕುಡಿಯಲೆಂದೇ ನೀರಿನ ಬೋಗುಣಿಳನ್ನು ಇಡುತ್ತಾರೆ.

ಆದರೆ ಈ ಸಲದ ಬೇಸಿಗೆಯ ಶಾಖದ ಅಲೆಗಳು ಪಕ್ಷಿಗಳಿಗೆ ಹಿಂದೆಂದಿಗಿಂತಲೂ ತೀವ್ರ ಸಂಕಟವನ್ನು ತಂದೊಡ್ಡಿವೆ. ಇನ್ನು ನಮ್ಮ ದೇಶದ ಪಶ್ಚಿಮದಲ್ಲಿರುವ ಗುಜರಾತ್ ರಾಜ್ಯದಲ್ಲಿ, ಪಕ್ಷಿಗಳಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಕೇಳಿದರೆ ಎಂತವರಿಗೂ ಮನಸ್ಸು ಕಲಕಬಹುದು.

ಬಿಸಿಲಿನ ಬೇಗೆಗೆ ದಣಿದ ಹಕ್ಕಿಗಳು
ಹೌದು, ಗುಜರಾತ್‍ನಲ್ಲಿ ಬಿಸಿಲಿನ ಬೇಗೆಗೆ ದಣಿದ ಹಕ್ಕಿಗಳು, ಹಾರಾಡಲಾಗದೆ ಆಕಾಶದಿಂದ ಕೆಳಗೆ ಬೀಳುತ್ತಿವೆಯಂತೆ. ಅಂತಹ ಪಕ್ಷಿಗಳ ಸಂಖ್ಯೆ ಒಂದಲ್ಲ, ಎರಡಲ್ಲ ಸಾವಿರಕ್ಕೆ ತಲುಪಿದೆ. ಆ ರಾಜ್ಯದಲ್ಲಿನ ಪಕ್ಷಿ ರಕ್ಷಕರು ಪ್ರತೀ ದಿನ ದಣಿದ ಹಾಗೂ ನಿರ್ಜಲೀಕರಣಕ್ಕೆ ಒಳಗಾದ ಹತ್ತಾರು ಪಕ್ಷಿಗಳನ್ನು ಚಿಕಿತ್ಸೆ ಕೊಡಿಸಲು ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿನ ದೊಡ್ಡ ನಗರದಲ್ಲಿ ಸುಡುವ ಶಾಖದ ಅಲೆಗಳು ನೀರಿನ ಮೂಲಗಳನ್ನು ಒಣಗಿಸುತ್ತಿದ್ದು, ಪಕ್ಷಿಗಳು ನೀರಿಗಾಗಿ ಪರದಾಡುವಂತಾಗಿದೆ ಎಂದು ಪಶು ವೈದ್ಯರು ಹಾಗೂ ಪ್ರಾಣಿ ರಕ್ಷಕರು ಹೇಳುತ್ತಿದ್ದಾರೆ.

ತಾಪಮಾನದ ಅಪಾಯಗಳ ಕುರಿತು ಎಚ್ಚರಿಕೆ ನೀಡಿದ ಪ್ರಧಾನಿ
ಇತ್ತೀಚಿಗಿನ ವರ್ಷಗಳಲ್ಲಿ, ಬೇಸಿಗೆ ಪೂರ್ವ ತಿಂಗಳುಗಳಲ್ಲೇ, ಹೆಚ್ಚಾದ ತಾಪಮಾನದಿಂದಾಗಿ ದಕ್ಷಿಣ ಏಷ್ಯಾದ ದೊಡ್ಡ ಪ್ರದೇಶಗಳು ಒಣಗಿ ಹೋಗುತ್ತಿವೆ. ಈ ಬೆಳವಣಿಗೆ ಗಮನಿಸಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ತಾಪಮಾನದ ಅಪಾಯಗಳ ಕುರಿತಾಗಿ ಎಚ್ಚರಿಕೆಯನ್ನೂ ಸಹ ನೀಡಿದ್ದರು.

ಇದನ್ನೂ ಓದಿ: Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

ಗುಜರಾತ್‍ನ ಅಹಮದಾಬಾದ್‍ನಲ್ಲಿ ಇರುವ, ನಾನ್ ಪ್ರಾಫಿಟ್ ಜೀವ್‍ದಯಾ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಪಶು ಆಸ್ಪತೆಯ ವೈದ್ಯರು, ಕಳೆದ ಕೆಲವು ವಾರಗಳಲ್ಲಿ ತಾವು ಸಾವಿರಾರು ಪಕ್ಷಿಗಳಿಗೆ ಚಿಕಿತ್ಸೆ ನೀಡಿರುವುದಾಗಿ ತಿಳಿಸಿದ್ದಾರೆ. ಪ್ರಾಣಿ-ಪಕ್ಷಿ ರಕ್ಷಕರು ಪ್ರತಿದಿನ, ಎತ್ತರಕ್ಕೆ ಹಾರುವ ಅಥವಾ ಗಿಡುಗ ಮತ್ತಿತರ ಡಜನ್‍ಗಟ್ಟಲೆ ಪಕ್ಷಿಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ತರುತ್ತಾರೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

ಬೇಸಿಗೆಯ ಶಾಖದ ಅಲೆಗಳಿಂದ ತತ್ತರಿಸಿರುವ ಪ್ರಾಣಿಗಳಿಗೆ ಕೂಡ ಚಿಕಿತ್ಸೆ
“ಇತ್ತೀಚಿನ ಅವಧಿಗಳಿಗೆ ಹೋಲಿಸಿದರೆ ಈ ವರ್ಷವು ಅತ್ಯಂತ ಕೆಟ್ಟದಾಗಿದೆ. ಪಕ್ಷಿಗಳನ್ನು ರಕ್ಷಿಸಬೇಕಿರುವ ಸಂಖ್ಯೆಯಲ್ಲಿ ನಾವು ಶೇಕಡಾ 10 ರಷ್ಟು ಹೆಚ್ಚಳವನ್ನು ಕಂಡಿದ್ದೇವೆ” ಎಂದು ಮನೋಜ್ ಭಾವ್‍ಸರ್ ಎಂಬವರು ಹೇಳಿದ್ದಾರೆ. ಮನೋಜ್ ಅವರು, ಸುಮಾರು ಒಂದು ದಶಕದಿಂದ ಟ್ರಸ್ಟ್ ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಪಕ್ಷಿಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಈ ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆಯ ಪಶು ವೈದ್ಯರು, ಪಕ್ಷಿಗಳಿಗೆ ಮಲ್ಟಿ ವಿಟಮಿನ್ ಮಾತ್ರೆಗಳನ್ನು ತಿನ್ನಿಸುತ್ತಿರುವುದು ಮತ್ತು ಸಿರೀಂಜ್‍ಗಳನ್ನು ಬಳಸಿ ಅವುಗಳ ಬಾಯಿಗೆ ನೀರನ್ನು ಹಾಕುತ್ತಿರುವುದು ಕಂಡು ಬಂದಿದೆ. ಜೀವ್‍ದಯಾ ಚಾರಿಟೇಬಲ್ ಟ್ರಸ್ಟ್ ನ ಆಸ್ಪತ್ರೆಯಲ್ಲಿ ಕೇವಲ ಪಕ್ಷಿಗಳಿಗೆ ಮಾತ್ರವಲ್ಲ, ಬೇಸಿಗೆಯ ಶಾಖದ ಅಲೆಗಳಿಂದ ತತ್ತರಿಸಿರುವ ಪ್ರಾಣಿಗಳಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಣಿ ಪಕ್ಷಿಗಳಿಗೆ ಮಲ್ಟಿ ವಿಟಮಿನ್ ಮಾತ್ರೆ
ಬಿಸಿಲಿನ ತಾಪಕ್ಕೆ ದಣಿದ ಪ್ರಾಣಿಗಳನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ, ಅವುಗಳ ನಿರ್ಜಲೀಕರಣದ ಸಮಸ್ಯೆಗೆ ಚಿಕಿತ್ಸೆ ನೀಡುತ್ತಾರೆ ಇಲ್ಲಿನ ವೈದ್ಯರು. ಮಲ್ಟಿ ವಿಟಮಿನ್ ಮಾತ್ರೆಗಳನ್ನು ನೀರಿನಲ್ಲಿ ಕಲಸಿ, ಪ್ರಾಣಿ ಪಕ್ಷಿಗಳಿಗೆ ಕುಡಿಸಲಾಗುತ್ತದೆ.

ಇದನ್ನೂ ಓದಿ: Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್

ಗುಜರಾತ್‍ನಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಿದ್ದು, ಅಲ್ಲಿನ ಆರೋಗ್ಯ ಅಧಿಕಾರಿಗಳು, ಹೀಟ್ ಸ್ಟ್ರೋಕ್ ಮತ್ತು ಇತರ ಶಾಖ ಸಂಬಂಧಿತ ಕಾಯಿಲೆಗಳಿಗೆ ವಿಶೇಷ ವಾರ್ಡ್‍ಗಳನ್ನು ಸ್ಥಾಪಿಸಲು ಗುಜರಾತ್‍ನ ಆಸ್ಪತೆಗಳಿಗೆ ಸಲಹೆಗಳನ್ನು ನೀಡಿದ್ದಾರೆ.
Published by:Ashwini Prabhu
First published: