Bird Flu: ಮನುಷ್ಯರಿಗೂ ಹರಡುತ್ತೆ ಹಕ್ಕಿ ಜ್ವರ; ರಷ್ಯಾದ 7 ಜನರಲ್ಲಿ ವಿಶ್ವದ ಮೊದಲ H5N8 ವೈರಸ್ ಪತ್ತೆ

Bird Flu Symptoms: ರಷ್ಯಾದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ. ಹಾಗಿದ್ದರೆ ಹಕ್ಕಿಗಳಿಂದ ಮನುಷ್ಯರಿಗೆ ಯಾವ ವಿಧಾನದಲ್ಲಿ ಹಕ್ಕಿ ಜ್ವರ ಹರಡುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಫೆ. 21): ಕೊರೋನಾ ರೂಪಾಂತರಿ ಇಡೀ ದೇಶವನ್ನೇ ಮತ್ತೊಮ್ಮೆ ಆತಂಕಕ್ಕೆ ಈಡುಮಾಡಿರುವ ಬೆನ್ನಲ್ಲೇ Bird Flu ಭೀತಿಯೂ ಹೆಚ್ಚಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಹಿಮಾಚಲಪ್ರದೇಶದಲ್ಲಿ H5N8 ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಈ ಹಕ್ಕಿಜ್ವರ ಮನುಷ್ಯರಿಗೆ ಅಪಾಯ ಉಂಟುಮಾಡುವುದಿಲ್ಲ ಎನ್ನಲಾಗಿತ್ತು. ಆದರೆ, ರಷ್ಯಾದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ.

  ಹಕ್ಕಿಜ್ವರ ಹರಡುವುದನ್ನು ತಡೆಗಟ್ಟಲು ನೆರೆಯ ಕೇರಳ, ತಮಿಳುನಾಡು, ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಸಾವಿರಾರು ಪಕ್ಷಿಗಳನ್ನು ಕೊಲ್ಲಲಾಗಿತ್ತು. ಆದರೆ, ಹಕ್ಕಿಗಳಿಂದ ಮಾನವನಿಗೂ ಹಕ್ಕಿ ಜ್ವರ ಹರಡಲಿದೆ ಎಂಬುದು ರಷ್ಯಾದಲ್ಲಿ ಸಾಬೀತಾಗಿದೆ. ರಷ್ಯಾದ ಕೋಳಿ ಫಾರಂನ 7 ಸಿಬ್ಬಂದಿಗೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಆ 7 ಮಂದಿಯೂ ಈಗ ಆರೋಗ್ಯವಂತರಾಗಿದ್ದು, ಚಕಿತ್ಸೆ ಮುಂದುವರೆದಿದೆ. ಹೀಗಾಗಿ, ಬೇರೆ ಕೋಳಿ ಫಾರಂಗಳಲ್ಲಿ ಇರುವವರಿಗೂ ಹಕ್ಕಿಜ್ವರ ತಪಾಸಣೆ ಮಾಡಲು ರಷ್ಯಾ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

  ಇದನ್ನೂ ಓದಿ: ಈ ಅಂಡರ್​​ವೇರ್​ ತೊಳೆಯದೆ ಧರಿಸಬಹುದಂತೆ!; ಕಂಪನಿ ಉತ್ಪಾದಿಸಿದೆ ಕ್ರಿಬಿ ಹೆಸರಿನ ವಿಭಿನ್ನ ಒಳಉಡುಪು!

  ಹಾಗಿದ್ದರೆ ಹಕ್ಕಿಗಳಿಂದ ಮನುಷ್ಯರಿಗೆ ಯಾವ ವಿಧಾನದಲ್ಲಿ ಹಕ್ಕಿ ಜ್ವರ ಹರಡುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ... ಹಕ್ಕಿಜ್ವರಕ್ಕೆ ತುತ್ತಾದ ಪಕ್ಷಿಯ ಜೊಲ್ಲು ಮತ್ತು ಹಿಕ್ಕೆಯಲ್ಲಿ ವೈರಸ್ ಇರುತ್ತದೆ. ಸೋಂಕಿತ ಪಕ್ಷಿಯ ಕಣ್ಣು, ಬಾಯಿಯನ್ನು ಮುಟ್ಟಿದರೆ ಮನುಷ್ಯರಿಗೆ ಹಕ್ಕಿ ಜ್ವರ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಹಾಗೂ ಬೇರೆ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದಷ್ಟು ಸೋಂಕಿತ ಪಕ್ಷಿಗಳೊಂದಿಗೆ ಅಥವಾ ಸೋಂಕಿನ ಅನುಮಾನವಿರುವ ಪಕ್ಷಿಗಳಿಂದ ದೂರ ಇರುವುದು, ಸರಿಯಾಗಿ ಬೇಯಿಸದ ಮೊಟ್ಟೆ, ಕೋಳಿಗಳನ್ನು ತಿನ್ನದೆ ಇರುವುದು ಹಕ್ಕಿ ಜ್ವರ ಬಾರದಂತೆ ತಡೆಯುವ ಸುಲಭ ಉಪಾಯ.

  ನೆರೆಯ ಕೇರಳದಲ್ಲಿ ಹಕ್ಕಿ ಜ್ವರ ಹೆಚ್ಚಾಗಿರುವುದರಿಂದ ಕರ್ನಾಟಕದ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಸರ್ಕಾರ ಸೂಚಿಸಿತ್ತು. ಈ ಜಿಲ್ಲೆಗಳ ಯಾವುದೇ ಭಾಗದಲ್ಲಿ ಹಕ್ಕಿಗಳು ಅಸಹಜವಾಗಿ ಸಾವನ್ನಪ್ಪಿದ್ದರೆ ಪಶು ವೈದ್ಯಾಧಿಕಾರಿಗಳು ತೆರಳಿ ತಪಾಸಣೆ ನಡೆಸಬೇಕು ಎಂದು ಆದೇಶಿಸಲಾಗಿತ್ತು.
  Published by:Sushma Chakre
  First published: