Bird Flu – ಕೋಳಿ ಮಾಂಸ, ಮೊಟ್ಟೆ ತಿಂದರೆ ಹಕ್ಕಿಜ್ವರ ಬರುತ್ತಾ? ಇದರ ರೋಗಲಕ್ಷಣಗಳೇನು?

ಸೋಂಕಿತ ಪಕ್ಷಿಯ ಎಂಜಲು, ಹಿಕ್ಕೆಗಳ ಮೂಲಕ ಹೆಚ್5ಎನ್1 (H5N1) ಫ್ಲೂ ವೈರಸ್ ಹರಡುತ್ತದೆ. ಪಕ್ಷಿಗಳಿಂದ ಪಕ್ಷಿಗಳಿಗೆ ಹಾಗೂ ಮನುಷ್ಯರಿಗೂ ಈ ಸೋಂಕು ಹರಡುತ್ತದೆ. ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆಂಬುದು ಇನ್ನೂ ಖಚಿತಪಟ್ಟಿಲ್ಲ.

ಸೋಂಕಿತ ಪಕ್ಷಿಯ ಎಂಜಲು, ಹಿಕ್ಕೆಗಳ ಮೂಲಕ ಹೆಚ್5ಎನ್1 (H5N1) ಫ್ಲೂ ವೈರಸ್ ಹರಡುತ್ತದೆ. ಪಕ್ಷಿಗಳಿಂದ ಪಕ್ಷಿಗಳಿಗೆ ಹಾಗೂ ಮನುಷ್ಯರಿಗೂ ಈ ಸೋಂಕು ಹರಡುತ್ತದೆ. ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆಂಬುದು ಇನ್ನೂ ಖಚಿತಪಟ್ಟಿಲ್ಲ.

ಸೋಂಕಿತ ಪಕ್ಷಿಯ ಎಂಜಲು, ಹಿಕ್ಕೆಗಳ ಮೂಲಕ ಹೆಚ್5ಎನ್1 (H5N1) ಫ್ಲೂ ವೈರಸ್ ಹರಡುತ್ತದೆ. ಪಕ್ಷಿಗಳಿಂದ ಪಕ್ಷಿಗಳಿಗೆ ಹಾಗೂ ಮನುಷ್ಯರಿಗೂ ಈ ಸೋಂಕು ಹರಡುತ್ತದೆ. ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆಂಬುದು ಇನ್ನೂ ಖಚಿತಪಟ್ಟಿಲ್ಲ.

  • News18
  • Last Updated :
  • Share this:
    ಕೋವಿಡ್ ಅಪಾಯ ತೀವ್ರ ಮಟ್ಟದಲ್ಲಿ ಇರುವ ಹೊತ್ತಲ್ಲೇ ಜಗತ್ತಿಗೆ ಹಕ್ಕಿ ಜ್ವರ ಕಾಡತೊಡಗಿದೆ. ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಹಕ್ಕಿಜ್ವರ ಕಾಣಿಸಿದೆ. ಎಚ್ಚರವಿರಲಿ, ಈ ರೋಗಕ್ಕೆ ಮದ್ದಿಲ್ಲ, ಲಸಿಕೆ ಇಲ್ಲ. ಭಾರತದಲ್ಲೂ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರ ವ್ಯಾಪಿಸಿದೆ. ಕೇರಳ, ಹರಿಯಾಣ ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಬರ್ಡ್ ಫ್ಲೂ ಪ್ರಕರಣಗಳು ಬೆಳಕಿಗೆ ಬಂದಿವೆ. ಕರ್ನಾಟಕದಲ್ಲೂ ಹಲವು ಪಕ್ಷಿಗಳು ಸಾವನ್ನಪ್ಪಿದ್ದು ಅವೂ ಕೂಡ ಹಕ್ಕಿ ಜ್ವರ ಪ್ರಕರಣಗಳಾ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ನೆರೆಯ ಕೇರಳದಲ್ಲಿ ರೋಗ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಸುಲಭವಾಗಿ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ, ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

    ಏನಿದು ಬರ್ಡ್ ಫ್ಲೂ?: ಇದಕ್ಕೆ ಏವಿಯನ್ ಫ್ಲೂ ಎಂದೂ ಕರೆಯುತ್ತಾರೆ. ಪಕ್ಷಿಗಳಲ್ಲಿ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುವ ಫ್ಲೂ ವೈರಸ್​ನಿಂದ ಹರಡುವ ರೋಗ ಇದು. ಒಮ್ಮೆ ಒಂದು ಪಕ್ಷಿಗೆ ಇದರ ಸೋಂಕು ತಗುಲಿದರೆ ಬಹಳ ಕ್ಷಿಪ್ರವಾಗಿ ಇತರ ಪಕ್ಷಿಗಳಿಗೆ ಹರಡಬಲ್ಲಷ್ಟು ಅಪಾಯಕಾರಿ ಇದಾಗಿದೆ. ಕೋಳಿ ಮತ್ತು ಬಾತುಕೋಳಿಗಳು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತವೆ.

    ಸೋಂಕಿತ ಪಕ್ಷಿಯ ಎಂಜಲು, ಹಿಕ್ಕೆಗಳಿಂದ ಬೇರೆ ಪಕ್ಷಿಗಳಿಗೆ ವೈರಸ್ ಹರಡಬಲ್ಲುದು. ಇವುಗಳ ಮೂಲಕವೇ ಮನುಷ್ಯರಿಗೂ ಇದು ಹರಡುವುದು ಆತಂಕಕ್ಕೆ ಕಾರಣವಾಗಿದೆ. ಪಕ್ಷಿಗಳ ಮೂಲಕ ಏವಿಯನ್ ಫ್ಲೂ ಮನುಷ್ಯನಿಗೆ ಹರಡುತ್ತದಾದರೂ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಇನ್ನೂ ದೃಢಪಟ್ಟಿಲ್ಲ.

    ಇದನ್ನೂ ಓದಿ: Bird Flu – ದೇಶಾದ್ಯಂತ ಹಬ್ಬುತ್ತಿರುವ ಹಕ್ಕಿ ಜ್ವರ; ಕೇಂದ್ರದಿಂದ ಬಿಗಿ ಕ್ರಮ

    ಹಕ್ಕಿ ಜ್ವರ ಬಂದಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ರೋಗಲಕ್ಷಣಗಳಲ್ಲಿ ಕೆಮ್ಮುವಿಕೆ, ಜ್ವರ, ಗಂಟಲು ನೋವು, ಮೈಕೈ ನೋವು, ನ್ಯೂಮೋನಿಯಾ ಪ್ರಮುಖವಾದವು.

    ಕೋಳಿ ಮಾಂಸ, ಮೊಟ್ಟೆ ತಿನ್ನಬಹುದೇ?

    ಹಕ್ಕಿ ಜ್ವರದ ಅಲೆ ಬಂದಾಗೆಲ್ಲಾ ಇದೊಂದು ಪ್ರಶ್ನೆ ಮತ್ತು ಅನುಮಾನ ಸದಾ ಕಾಡುತ್ತದೆ. ಬಹಳ ಸಂಕ್ಷಿಪ್ತವಾಗಿ ಹೇಳುವುದಾದರೆ ಮೊಟ್ಟೆ ಮತ್ತು ಮಾಂಸವನ್ನು ಸರಿಯಾಗಿ ಬೇಯಿಸಿ ಸೇವಿಸಿದರೆ ಸಮಸ್ಯೆ ಇಲ್ಲ. ಆದರೆ, ಕೋಳಿ ಫಾರಂಗಳಲ್ಲಿ ಯಾವುದಾದರೂ ಒಂದು ಕೋಳಿಗೆ ಈ ವೈರಸ್ ಸೋಂಕು ತಗುಲಿರುವುದು ಕಂಡು ಬಂದಲ್ಲಿ ಕೂಡಲೇ ಫಾರಂನ ಎಲ್ಲಾ ಕೋಳಿಗಳನ್ನ ಕೊಲ್ಲುವುದು ಸರಿಯಾದ ಕ್ರಮ. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

    ಇದನ್ನೂ ಓದಿ: Mob at US Capitol: ಅರಾಜಕತೆ ಮತ್ತು ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ; ಗೂಗಲ್ ಸಿಇಓ ಸುಂದರ್​ ಪಿಚೈ

    ಎಷ್ಟೇ ಜಾಗೃತಿಯಿಂದ ಇದ್ದರೂ ಕೂಡ ಹಕ್ಕಿಜ್ವರ ಇರುವ ಕೋಳಿ ಫಾರಂಗಳಿಂದ ಕೋಳಿಗಳು ಮಾರುಕಟ್ಟೆಗೆ ಪ್ರವೇಶ ಮಾಡುವ ಸಾಧ್ಯತೆ ಇರುವುದರಿಂದ ಜನರು ಸರಿಯಾಗಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸುವುದು ಉತ್ತಮ. ಮೊಟ್ಟೆಯನ್ನು ಅದರ ಹಳದಿ ಲೋಳೆ ಗಟ್ಟಿಯಾಗುವವರೆಗೂ ಬೇಯಿಸಬೇಕು. 70 ಸೆಲ್ಷಿಯಸ್ (158 ಡಿಗ್ರಿ) ಉಷ್ಣಾಂಶದಲ್ಲಿ ಹೆಚ್5ಎನ್1 ವೈರಸ್ ನಾಶವಾಗುತ್ತದೆ. ಹೀಗಾಗಿ, ಹಾಫ್ ಬಾಯಿಲ್ಡ್ ಎಗ್ ಇತ್ಯಾದಿ ತಿನಿಸುಗಳಿಗೆ ಕಡಿವಾಣ ಹಾಕಿಕೊಳ್ಳಿ.

    ಆದರೆ, ವೈರಸ್ ಮನುಷ್ಯನ ದೇಹಕ್ಕೆ ಪ್ರವೇಶ ಮಾಡಿದ ಬಳಿಕ ಮ್ಯೂಟೇಟ್ ಆಗಿ ರೂಪಾಂತರ ಹೊಂದುವ ಸಾಧ್ಯತೆ ಇರುತ್ತದೆ. ಹೊಸ ದೇಹಕ್ಕೆ ಒಗ್ಗಿಕೊಳ್ಳಲು ವೈರಸ್ ಮಾಡುವ ಸಹಜ ಕ್ರಿಯೆ ಇದಾಗಿರುತ್ತದೆ. ಹೀಗೆ ವೈರಸ್ ರೂಪಾಂತರಗೊಂಡು ಮನುಷ್ಯನಿಂದ ಮನುಷ್ಯನಿಗೆ ಹರಡುವ ಶಕ್ತಿ ಗಳಿಸಿಬಿಟ್ಟರೆ ಆಗ ಇದೊಂದು ಸಾಂಕ್ರಾಮಿಕ ರೋಗವಾಗಿ ಪರಿಣಮಿಸುವ ಅಪಾಯ ಇದ್ದೇ ಇರುತ್ತದೆ ಎನ್ನುತ್ತಾರೆ ತಜ್ಞರು.
    Published by:Vijayasarthy SN
    First published: