ಹಕ್ಕಿ ಜ್ವರ ಆತಂಕವಿಲ್ಲ; ಕೋಳಿ ಮಾಂಸ ಮಾರಾಟ ನಿಷೇಧ ಆದೇಶ ಹಿಂಪಡೆದ ದೆಹಲಿ ಸರ್ಕಾರ

ಕೋಳಿ ಮಾಂಸ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಲಿಕ ನಿಷೇಧವನ್ನು ಹಿಂಪಡೆಯಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಜ. 14): ದೆಹಲಿಯಲ್ಲಿ ಆತಂಕ ಮೂಡಿಸಿದ್ದ ಹಕ್ಕಿ ಜ್ವರ ಕೋಳಿಗಳಲ್ಲಿ ಕಂಡು ಬಂದಿಲ್ಲ. ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾದ ಗಾಜಿಪುರದ 100 ಕೋಳಿಗಳ ಮಾದರಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನಲೆ ಕೋಳಿ ಮಾಂಸ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಲಿಕ ನಿಷೇಧವನ್ನು ಹಿಂಪಡೆಯಲಾಗಿದೆ. ನಿನ್ನೆ ಸತ್ತ ಕಾಗೆ ಹಾಗೂ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನಲೆ ದೆಹಲಿಯ ಕೆಲ ಆಯ್ದ ಪ್ರದೇಶಗಳಲ್ಲಿ ಕೋಳಿ ಮಾಂಸ ಮಾರಾಟ, ಸಾಗಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿಯೂ ಕೋಳಿ ಮತ್ತು ಮೊಟ್ಟೆ ಆಹಾರವನ್ನು ಸರಬರಾಜು ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಈ ಆದೇಶ ನೀಡಿದ ದಿನದೊಳಗೆ ಕೋಳಿಗಳಲ್ಲಿ ಹಕ್ಕಿಜ್ವರ ಇರುವ ಬಗ್ಗೆ ವರದಿ ನಕರಾತ್ಮಕವಾಗಿದೆ. ಈ ಹಿನ್ನಲೆ ಈ ಆದೇಶ ಹಿಂಪಡೆಯಲಾಗಿದೆ.



    ಈ ಕುರಿತು ಟ್ವೀಟ್​ ಮಾಡಿರುವ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್,​ ಕೋಳಿ ಘಟಕಗಳಿಂದ ಮಾದರಿಗಳನ್ನು ಕೊಂಡೊಯ್ಯಲಾಗಿದೆ, ಈ ವೇಳೆ ವರದಿ ನೆಗಟಿವ್​ ಬಂದಿದ್ದು, ಈ ಹಿನ್ನಲೆ ಸಂಸ್ಕರಿಸಿದ ಕೋಳಿಗಳ ಮಾರಾಟದ ಮೇಲೆ ವಿಧಿಸಲಾಗಿದ್ದ ನಿರ್ಬಂಧ ತೆಗೆದು ಹಾಕುವಂತಎ ಸೂಚನೆ ನೀಡಲಾಗಿದೆ ಎಂದರು.

    ಉತ್ತರ ಪ್ರದೇಶ ಗಡಿಗಯಲ್ಲಿರುವ ಗಾಜಿಪುರ ಮಾರುಕಟ್ಟೆ, ಕೋಳಿ, ಬಾತುಕೋಳಿ, ಮೊಟ್ಟೆ ಗಳ ಪೂರೈಕೆ ಮಾಡುವ ಪ್ರಮುಖ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯುಂದ 104 ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 100 ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ಪಶುಸಂಗೋಪನಾ ಅಧಿಕಾರಿ ರಾಕೇಶ್​ ಸಿಂಗ್​ ತಿಳಿಸಿದ್ದಾರೆ.

    ಇದನ್ನು ಓದಿ: ಪೊಂಗಲ್​ ಶುಭಾಶಯ ತಿಳಿಸಿ, ಮಧುರೈನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್​ ಗಾಂಧಿ

    ಕಳೆದ ವಾರ ಸಂಜಯ್​ ಸರೋವರದಲ್ಲಿ ಅನೇಕ ಬಾತುಕೋಳಿಗಳು ಹಾಗೂ ವಿವಿಧ ಉದ್ಯಾನವನಗಳಲ್ಲಿ ಕಾಗೆಗಳು ಮೃತಪಟ್ಟಿದ್ದವು. ಈ ಸಾವನ್ನಪ್ಪಿದ ಹಕ್ಕಿಗಳ ಮಾದರಿಗಳನ್ನು ಅಧ್ಯಯನ ನಡೆಸಿದಾಗ ಅವುಗಳಲ್ಲಿ ಹಕ್ಕಿ ಜ್ವರ ಇರುವುದು ಪತ್ತೆಯಾಗಿತ್ತು.

    ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್​, ಹರ್ಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈಗಾಗಲೇ ಹಕ್ಕಿ ಜ್ವರದ ಪ್ರಕರಣಗಳು ದಾಖಲಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರವಹಿಸಿದೆ.
    Published by:Seema R
    First published: