Bird Flu: ವಿದೇಶದಲ್ಲೂ ಹಕ್ಕಿಜ್ವರದ ಭೀತಿ; 6 ಲಕ್ಷ ಕೋಳಿಗಳ ಹತ್ಯೆಗೆ ಮುಂದಾದ ಫ್ರಾನ್ಸ್​

H5N1 Virus: ಫ್ರಾನ್ಸ್​ನ ಫಾರ್ಮ್​ಗಳಲ್ಲಿರುವ ಬಾತುಕೋಳಿಗಳು ಹಾಗೂ ಕೋಳಿಗಳಲ್ಲಿ Bird Flu ಕಾಣಿಸಿಕೊಂಡಿದೆ. ಇದರಿಂದ ಇನ್ನಷ್ಟು ಪಕ್ಷಿಗಳಿಗೆ ಈ H5N1 Virus ಹರಡಬಹುದೆಂಬ ಆತಂಕದಲ್ಲಿ ಸುಮಾರು 6 ಲಕ್ಷ ಕೋಳಿ, ಬಾತುಕೋಳಿಗಳನ್ನು ಕೊಲ್ಲಲು ಅಲ್ಲಿನ ಸರ್ಕಾರ ಆದೇಶಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ಯಾರೀಸ್ (ಜ. 6): ಹಕ್ಕಿ ಜ್ವರ ಕೇವಲ ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಆತಂಕ ಸೃಷ್ಟಿಸಿದೆ. ಕೊರೋನಾ ಅಟ್ಟಹಾಸದಿಂದ ಕಂಗಾಲಾಗಿರುವ ಜನರಿಗೆ ಇದೀಗ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ. ಭಾರತದ ಹಲವು ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಹಕ್ಕಿಜ್ವರದ ಪ್ರಕರಣಗಳು ಹೆಚ್ಚಾಗಿವೆ. ಇದರ ಜೊತೆಗೆ ಫ್ರಾನ್ಸ್​ನಲ್ಲೂ Bird Flu ಭೀತಿ ಹೆಚ್ಚಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 6 ಲಕ್ಷ ಕೋಳಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಈ H5N1 ವೈರಸ್​ ಬಹಳ ಅಪಾಯಕಾರಿಯಾಗಿದ್ದು, ಭಾರತದಲ್ಲೂ ಮಧ್ಯಪ್ರದೇಶ, ಹಿಮಾಚಲಪ್ರದೇಶ, ಕೇರಳ, ರಾಜಸ್ಥಾನದಲ್ಲಿ ಸಾವಿರಾರು ಹಕ್ಕಿಗಳು ಸಾವನ್ನಪ್ಪಿವೆ.

ಫ್ರಾನ್ಸ್​ನ ಫಾರ್ಮ್​ಗಳಲ್ಲಿರುವ ಬಾತುಕೋಳಿಗಳು ಹಾಗೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದರಿಂದ ಇನ್ನಷ್ಟು ಪಕ್ಷಿಗಳಿಗೆ ಈ ವೈರಸ್ ಹರಡಬಹುದೆಂಬ ಆತಂಕದಲ್ಲಿ ಸುಮಾರು 6 ಲಕ್ಷ ಕೋಳಿ, ಬಾತುಕೋಳಿಗಳನ್ನು ಕೊಲ್ಲಲು ಅಲ್ಲಿನ ಸರ್ಕಾರ ಆದೇಶಿಸಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಫ್ರಾನ್ಸ್​ನಲ್ಲಿಯೇ ಅತಿ ಹೆಚ್ಚು ಹಕ್ಕಿಜ್ವರದ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಕೂಡ ಫ್ರಾನ್ಸ್​ನಲ್ಲಿ ಅತಿಹೆಚ್ಚು ಹಕ್ಕಿಜ್ವರದ ಪ್ರಕರಣಗಳು ದಾಖಲಾಗಿದ್ದವು.

ಫ್ರಾನ್ಸ್​ನಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರವನ್ನು ತಡೆಯಲು ಈಗಾಗಲೇ 2 ಲಕ್ಷ ಕೋಳಿಗಳನ್ನು ಕೊಲ್ಲಲಾಗಿದೆ. ಇನ್ನೂ 4 ಲಕ್ಷ ಕೋಳಿಗಳನ್ನು ಕೊಲ್ಲಲು ಉದ್ದೇಶಿಸಲಾಗಿದೆ ಎಂದು ಫ್ರಾನ್ಸ್​ ಸರ್ಕಾರದ ಸಚಿವರು ಘೋಷಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Bird Flu: ಹಕ್ಕಿ ಜ್ವರದಿಂದ ಕೇರಳದಲ್ಲಿ 50 ಸಾವಿರ ಪಕ್ಷಿಗಳ ಹತ್ಯೆಗೆ ನಿರ್ಧಾರ; ಕರ್ನಾಟಕದ ಗಡಿಯಲ್ಲಿ ಕಟ್ಟೆಚ್ಚರ

ಭಾರತದಲ್ಲೂ ಹಕ್ಕಿ ಜ್ವರದ ಆತಂಕ ಹೆಚ್ಚಾಗಿದೆ. ಕೇರಳದಲ್ಲಿ ಸಾವಿರಾರು ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್​ಗಳಲ್ಲಿರುವ ಕೋಳಿಗಳನ್ನು ಸಾಯಿಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಈಗಾಗಲೇ 2 ಸಾವಿರಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೂಡ ಸಾವಿರಾರು ಕಾಗೆ, ಹಕ್ಕಿಗಳು ಸಾವನ್ನಪ್ಪಿವೆ. ನೆರೆಯ ರಾಜ್ಯವಾದ ಕೇರಳದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ 2 ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಮುನ್ನೆಚ್ಚರಿಕಾ ಕ್ರಮವಾಗಿ 50 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ.

ಕೊಟ್ಟನಾಡ್​ ಭಾಗದಲ್ಲಿ ನಿನ್ನೆ ಸಾವಿರಾರು ಪಕ್ಷಿಗಳನ್ನು ಸಾಯಿಸಲಾಗಿದೆ. ಅಲಪ್ಪುಳ ಜಿಲ್ಲೆಯ ನೆದುಮುಂಡಿ, ಥಕಳಿ, ಪಳಿಪ್ಪಾಡ್, ಕರುವಟ್ಟ ಭಾಗ ಹಾಗೂ ಕೊಟ್ಟಾಯಂ ಜಿಲ್ಲೆಯ ನೀಂದೂರ್​ ಭಾಗಗಳಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲಾಗಿದೆ. ಈಗಾಗಲೇ ಕೇರಳದ ಫಾರ್ಮ್​ಗಳಲ್ಲಿ 12,000 ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಬಾತುಕೋಳಿಗಳನ್ನು ಸಾಕಿದವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.
Published by:Sushma Chakre
First published: