ದೆಹಲಿಯಲ್ಲಿ ಹಕ್ಕಿ ಜ್ವರ ಆತಂಕ; ಕೋಳಿ ಮಾಂಸ ಮಾರಾಟಕ್ಕೆ ನಿಷೇಧ; ಹೊಟೇಲ್​ಗಳಲ್ಲಿಯೂ ಸಿಗಲ್ಲ ಚಿಕನ್​

bird flu : ಹೊಟೇಲ್​ಗಳಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸ ಆಧಾರಿತ ಆಹಾರ ಸರಬರಾಜು ​ಮಾಡಿದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಜ. 13): ದೇಶದ ರಾಜಧಾನಿಯಲ್ಲಿ ಹಕ್ಕಿ ಜ್ವರ ಆತಂಕ ಮೂಡಿಸಿರುವ ಹಿನ್ನಲೆ  ದೆಹಲಿಯ ಉತ್ತರ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕೆಲ ಪ್ರದೇಶಗಳಲ್ಲಿ  ಕೋಳಿ ಮಾರಾಟ ಮತ್ತು ಕೋಳಿ ಮಾಂಸ ಸಾಗಾಟಕ್ಕೂ ನಿರ್ಬಂಧ ಹೇರಲಾಗಿದೆ. ಅಲ್ಲದೇ ರೆಸ್ಟೋರೆಂಟ್​ಗಳಲ್ಲಿ ಚಿಕನ್, ಮೊಟ್ಟೆ​ ಆಹಾರವನ್ನು ಬಡಿಸದಂತೆ ಎಚ್ಚರಿಕೆ ನೀಡಲಾಗಿದೆ. ಎನ್​ಡಿಎಂಸಿಯ ಪಶುವೈದ್ಯಕೀಯ ಸೇವಾ ಇಲಾಖೆ ಈ ಆದೇಶ ಹೊರಡಿಸಿದ್ದು, ಹೊಟೇಲ್​ಗಳಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸ ಆಧಾರಿತ ಆಹಾರ ಸರಬರಾಜು ​ಮಾಡಿದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದ್ದು, ಈ ನಿಯಮ ಪಾಲನೆ ಕಡ್ಡಾಯ ಎಂದು ಸೂಚಿಸಲಾಗಿದೆ. ಸೋಮವಾರ ದೆಹಲಿಯಲ್ಲಿ ಸಾವನ್ನಪ್ಪಿದ ಕಾಗೆ ಮತ್ತು ಬಾತುಕೋಳಿಗಳ ಮಾದರಿ ಪರೀಕ್ಷೆ ವರದಿ ಬಳಿಕ ಹಕ್ಕಿ ಜ್ವರ ಹಬ್ಬಿರುವ ಬಗ್ಗೆ ಸರ್ಕರ  ದೃಢಪಟ್ಟಿಸಿದೆ. ಇದೇ ವೇಳೆ ನಗರದ ಹೊರಗಿನಿಂದ ಸಂಸ್ಕರಿಸಲಾದ ಕೋಳಿ ಮಾಂಸದ ಪ್ಯಾಕೇಜ್​ ಮಾರಾಟಕ್ಕೂ ಕೂಡ ಸರ್ಕಾರ ನಿಷೇಧ ಹೇರಿದೆ.

  ಇಲ್ಲಿನ ಗಾಜಿಪುರ ಕೋಳಿ ಮಾರುಕಟ್ಟೆಯನ್ನು ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಎನ್​ಡಿಎಂಸಿ ವ್ಯಾಪ್ತಿಯ ಎಲ್ಲಾ ಕೋಳಿ ಮಾಂಸ ಮತ್ತು ಕೋಳಿ ಸಂಸ್ಕರಣಾ ಘಟಕ ಬಂದ್​ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಮಾರಾಟ ನಿಷೇಧ ಮುಂದುವರೆಯಲಿದೆ.

  ಕಳೆದ ವಾರ ಸಂಜಯ್​ ಸರೋವರದಲ್ಲಿ ಅನೇಕ ಬಾತುಕೋಳಿಗಳು ಹಾಗೂ ವಿವಿಧ ಉದ್ಯಾನವನಗಳಲ್ಲಿ ಕಾಗೆಗಳು ಮೃತಪಟ್ಟಿದ್ದವು. ಈ ಸಾವನ್ನಪ್ಪಿದ ಹಕ್ಕಿಗಳ ಮಾದರಿಗಳನ್ನು ಅಧ್ಯಯನ ನಡೆಸಿದಾಗ ಅವುಗಳಲ್ಲಿ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ. ಈ ಹಿನ್ನಲೆ ದೆಹಲಿ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಲು ಸಲಹೆ ನೀಡಿದೆ. ಅಲ್ಲದೇ ಜನರು ಇದರಿಂದ ಭಯಭೀತರಾಗಬಾರದು ಎಂದು ತಿಳಿಸಿದೆ.

  ಇದನ್ನು ಓದಿ: ರಾಜ್ಯದಲ್ಲಿ ಹಕ್ಕಿ ಜ್ವರ ತಡೆಗೆ ಅಲರ್ಟ್ ಘೋಷಣೆ; ಐದು ಜಿಲ್ಲೆಗಳಲ್ಲಿ ಕೋಳಿ ಸಾಗಣೆಗೆ ನಿರ್ಬಂಧ ; ಸಚಿವ ಪ್ರಭು ಚವ್ಹಾಣ್​

  ಹಕ್ಕಿ ಜ್ವರದ ಹಿನ್ನಲೆ ಅರ್ಧ ಬೇಯಿಸಿದ ಮತ್ತು ಅರ್ಧ ಬೆಂದ ಮೊಟ್ಟೆಗಳನ್ನು ತಿನ್ನಬಾರದು ಎಂದು ಎಚ್ಚರಿಸಿದೆ. ದೆಹಲಿಯಲ್ಲಿ ದಿನಕ್ಕೆ 250-300 ಟನ್​ ಕೋಳಿ ಮಾಸಂದ ಸ್ಟಾಕ್​ ಬರುತ್ತದೆ. ಕೋಳಿ ಮಾಂಸ ನಿಷೇಧದಿಂದಾಗಿ ದಿನಕ್ಕೆ 2.5 ಕೋಟಿ ರೂ ನಷ್ಟ ಉಂಟಾಗಲಿದೆ.

  ಈ ಹಕ್ಕಿ ಜ್ವರ ಹರಡದಂತೆ ದೆಹಲಿ ಸರ್ಕಾರ ಪರಿಸ್ಥಿತಿ ಅವಲೋಕನ ನಡೆಸಿದೆ. ಸಿಎಂ ಅರವಿಂದ ಕೇಜ್ರಿವಾಲ್​ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಹಿನ್ನಲೆ ಆತಂಕ ಪಡುವ ಅಗತ್ಯವಿಲ್ಲ. ಇದು ಮನುಷ್ಯರಿಗೆ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಮನಿಷ್​ ಸಿಸೋಡಿಯಾ ತಿಳಿಸಿದ್ದಾರೆ.
  ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್​, ಹರ್ಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈ ಹಕ್ಕಿ ಜ್ವರದ ಪ್ರಕರಣಗಳು ದಾಖಲಾಗಿದೆ.
  Published by:Seema R
  First published: