HOME » NEWS » National-international » BIRD FLU AFTER 12000 DUCKS DEAD IN ALAPPUZHA KOTTAYAM DISTRICTS BIRD FLU SCARE OUTBREAKS IN KERALA SCT

Bird Flu: ಕೇರಳಕ್ಕೂ ಕಾಲಿಟ್ಟ ಹಕ್ಕಿ ಜ್ವರ; 2 ಜಿಲ್ಲೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಸಾವು

Bird Flu in Kerala: ಈಗಾಗಲೇ ಕೇರಳದ ಫಾರ್ಮ್​ಗಳಲ್ಲಿ 12,000 ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ.

Sushma Chakre | news18-kannada
Updated:January 5, 2021, 9:12 AM IST
Bird Flu: ಕೇರಳಕ್ಕೂ ಕಾಲಿಟ್ಟ ಹಕ್ಕಿ ಜ್ವರ; 2 ಜಿಲ್ಲೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಸಾವು
ಹಕ್ಕಿ ಜ್ವರದಿಂದ ಸಾವನ್ನಪ್ಪಿದ ಬಾತುಕೋಳಿಗಳು
  • Share this:
ಜೈಪುರ (ಜ. 4): ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಕೂಡ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ರಾಜಸ್ಥಾನದಲ್ಲಿ 250ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದು, ಅವುಗಳಿಗೆ ಹಕ್ಕಿ ಜ್ವರದ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಕೇರಳದ ಅಲಪ್ಪುಳ, ಕೊಟ್ಟಾಯಂ ಜಿಲ್ಲೆಗಳಲ್ಲಿ ಕೂಡ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ, ಜಿಲ್ಲಾಡಳಿತಗಳು ಕಂಟ್ರೋಲ್ ರೂಂಗಳನ್ನು ಆರಂಭಿಸಿವೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ ಕೊನೆಯ ವಾರದಲ್ಲಿ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಸಾಕಷ್ಟು ಬಾತುಕೋಳಿಗಳು ಸಾವನ್ನಪ್ಪಿದ್ದವು. ಅವುಗಳಲ್ಲಿ 8 ಬಾತುಕೋಳಿಗಳ ಸ್ಯಾಂಪಲ್ ಅನ್ನು ಭೂಪಾಲ್​ನ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 5 ಸ್ಯಾಂಪಲ್​ನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ.

ನೀಂದೂರ್​ನ ಬಾತುಕೋಳಿಯ ಫಾರ್ಮ್ ಒಂದರಲ್ಲೇ 1,500 ಬಾತುಕೋಳಿಗಳು ಸಾವನ್ನಪ್ಪಿವೆ. ಹಾಗೇ ಅಲಪ್ಪುಳ ಜಿಲ್ಲೆಯ ಕುಟ್ಟನಾಡ್ ಜಿಲ್ಲೆಯ ಕೆಲವು ಫಾರ್ಮ್​ಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಕೇರಳದ ಫಾರ್ಮ್​ಗಳಲ್ಲಿ 12,000 ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಬಾತುಕೋಳಿಗಳನ್ನು ಸಾಕಿದವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.

ಇದನ್ನೂ ಓದಿ: Bird Flu : ರಾಜಸ್ಥಾನದಲ್ಲಿ ಹಕ್ಕಿ ಜ್ವರದಿಂದ ನೂರಾರು ಕಾಗೆಗಳು ಸಾವು; ಅಪಾಯಕಾರಿ ವೈರಸ್​ ಹರಡದಂತೆ ಹೈ ಅಲರ್ಟ್​

ಹಕ್ಕಿ ಜ್ವರ ಕೋಳಿ, ಟರ್ಕಿ, ಬಾತುಕೋಳಿ, ಕಾಗೆಗಳ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಕೇರಳದಲ್ಲಿ ಈ ಮೊದಲು 2016ರಲ್ಲಿ ಭಾರೀ ಪ್ರಮಾಣದ ಹಕ್ಕಿ ಜ್ವರದ ಕೇಸುಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಹಕ್ಕಿಜ್ವರದ ಭೀತಿ ಶುರುವಾಗಿದೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ರಾಜಸ್ಥಾನ ಪಶು ಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ, ಮುಖ್ಯವಾಗಿ ಕಾಗೆಗಳಲ್ಲಿ ಹಕ್ಕಿ ಜ್ವರದ ಕೇಸ್​ಗಳು ಹೆಚ್ಚಾಗಿ ಪತ್ತೆಯಾಗಿವೆ. ಇದು ಮನುಷ್ಯರಿಗೂ ಹರಡುವ ಆತಂಕ ಎದುರಾಗಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಕೊರೋನಾ ಜೊತೆಗೆ ಹಕ್ಕಿ ಜ್ವರವನ್ನು ಕೂಡ ನಿಯಂತ್ರಿಸಬೇಕಾದ ಸವಾಲು ನಮ್ಮ ಮುಂದಿದೆ. ಮುಖ್ಯವಾಗಿ ಕೋಟ ಮತ್ತು ಜೋಧ್​ಪುರದಲ್ಲಿ ಹಕ್ಕಿ ಜ್ವರದಿಂದ ಕಾಗೆಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹಕ್ಕಿ ಜ್ವರದ ವೈರಸ್ ಬಹಳ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದರು.

ಡಿಸೆಂಬರ್ 25ರಿಂದ ಜಲಾವರ್​ನಲ್ಲಿ ಕಾಗೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸಾವನ್ನಪ್ಪಿದ ಕಾಗೆಗಳ ಸ್ಯಾಂಪಲ್ ಅನ್ನು ಭೂಪಾಲ್​ನಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್​ಗೆ ಕಳುಹಿಸಲಾಗಿದೆ. ಇದುವರೆಗೂ ಜಲಾವರ್​ನಲ್ಲಿ 100, ಬರಾನ್​ನಲ್ಲಿ 72, ಕೋಟದಲ್ಲಿ 47, ಪಲಿಯಲ್ಲಿ 19, ಜೋಧ್​ಪುರದಲ್ಲಿ 7, ಜೈಪುರದಲ್ಲಿ 7 ಕಾಗೆಗಳು ಸಾವನ್ನಪ್ಪಿವೆ.

ಹಾಗೇ, ಮಧ್ಯಪ್ರದೇಶದ ಇಂದೋರ್​ನಲ್ಲಿ 50ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದವು. ಇದರ ಜೊತೆಗೆ ಹಿಮಾಚಲ ಪ್ರದೇಶದಲ್ಲಿ ಕೂಡ 1,800 ಕೊಕ್ಕರೆಗಳು ಸಾವನ್ನಪ್ಪಿವೆ. ಇದಕ್ಕೆ ಹಕ್ಕಿಜ್ವರವೇ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಇಂದು ಸಂಜೆಯ ವೇಳೆಗೆ ಅವುಗಳ ವರದಿ ಬರಲಿದೆ.
Published by: Sushma Chakre
First published: January 5, 2021, 9:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories